Advertisement
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ರ್ಯಾಲಿ ಬಳಿಕ ರಾಜ್ಯದ ವಿವಿಧ ಕಡೆ ರ್ಯಾಲಿ ಆಯೋಜಿಸಲಾಗುವುದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ರ್ಯಾಲಿ ಆಯೋಜಿಸಿ ಸುಮಾರು 20ರಿಂದ 25 ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ಈ ರ್ಯಾಲಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವರಿಕೆ ಆಗುವಂತೆ ಮಾಡಲಾಗುವುದು ಎಂದರು. ವೀರಶೈವ ಮಹಾಸಭಾ ಮರು ನಾಮಕರಣ ಮಾಡಿ ಲಿಂಗಾಯತ ಮಹಾಸಭಾ ಮಾಡುವಂತೆ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಮನವರಿಕೆ ಮಾಡಿಕೊಳ್ಳಲು ಉದ್ದೇಶಿಸಿದ್ದೇವೆ. ಈಗಾಗಲೇ ಬೆಳಗಾವಿ ಜಿಲ್ಲಾ ಘಟಕದ ಹೆಸರು ಬದಲಾಯಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲೂ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಂತೆ ಕೇಂದ್ರ ಸಮಿತಿಯ ಹೆಸರನ್ನು ಮರು ನಾಮಕರಣ ಮಾಡುವಂತೆ ಅಧ್ಯಕ್ಷರ ಮನವೊಲಿಸಲಾಗುವುದು ಎಂದರು.
Related Articles
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
Advertisement
ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ರಾಜ್ಯದ ಶೇ.80 ಜನರು ಪರವಾಗಿದ್ದರೂ ಎನ್.ತಿಪ್ಪಣ್ಣ, ಶಾಮನೂರು ಅವರಂಥ ನಾಯಕರಿಂದ ಮಾತ್ರ ಆಕ್ಷೇಪ ಕೇಳಿ ಬರುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಆದಲ್ಲಿ ತಮ್ಮ ಸೇವೆಗೆ ಭಕ್ತರು ಬರುವುದಿಲ್ಲ ಎಂಬ ಭಯದಲ್ಲಿರುವ ಪಂಚಪೀಠದಸ್ವಾಮಿಗಳು, ಕೆಲ ಮಠಾ ಧೀಶರು ಇದನ್ನು ವಿರೋಧಿಸುತ್ತಿದ್ದಾರೆ.
ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಕೆಲವು ನಾಯಕರು ಧರ್ಮವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ವೀರಶೈವ, ಲಿಂಗಾಯತ ಎರಡೂ ಒಂದೆ. 43ಕ್ಕೂ ಹೆಚ್ಚು ಶರಣರ ವಚನಗಳಲ್ಲಿ ವೀರಶೈವ ಪದ ಬಳಸಿರುವುದನ್ನು ಶರಣರ ವಚನಗಳೇ ನಮ್ಮ ಧರ್ಮಗ್ರಂಥ ಎನ್ನುವ ಪ್ರತ್ಯೇಕ ಧರ್ಮವಾದಿಗಳು ನೋಡಬೇಕು.
ಡಾ| ಮಹಾದೇವ ಸ್ವಾಮೀಜಿ, ಬಬಲೇಶ್ವರ ಬೃಹನ್ಮಠ