Advertisement

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಿಲ್ಲದು: ಕಿರಣಕುಮಾರ

05:35 PM Jul 18, 2022 | Team Udayavani |

ಭಾಲ್ಕಿ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಪ್ರಾರಂಭಿಸಿ ಇಂದಿಗೆ 5 ವರ್ಷಗಳು ಗತಿಸಿವೆ. ಲಿಂಗಾಯತರು ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೆ ಸುಮ್ಮನಿರುವೆವು ಎಂದು ಜಾಗತಿ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕಿರಣಕುಮಾರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ 5ನೇ ವರ್ಷದ ಸಾಂಕೇತಿಕ ಧರಣಿ ನಿಮಿತ್ತ ಬಸವ ಧರ್ಮ ಧ್ವಜ ಹಾರಿಸಿ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಸ್ವತಂತ್ರ ಧರ್ಮದ ಹೋರಾಟ ತಣ್ಣಗಾಗಿತ್ತು. ಜು.17, 2018ರಿಂದ ಇಂದಿನ ವರೆಗೆ 5 ವರ್ಷಗಳ ಕಾಲದಿಂದಲೂ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೋವಿಡ್‌ ಮಹಾಮಾರಿ ತಣ್ಣಗಾಗಿದೆ. ಆದರೆ, ಲಿಂಗಾಯತ ಹೋರಾಟದ ಗತಿ ತಣ್ಣಗಾಗದು ಎಂದು ಹೇಳಿದರು.

ವಿಶ್ವಕ್ರಾಂತ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, ಲಿಂಗಾಯತ ಮಠಾಧಿಧೀಶರ ಒಕ್ಕೂಟ ಕಟ್ಟಿಕೊಂಡ ಮಠಾಧಿ àಶರು ಬಸವಣ್ಣವರ ಹೆಸರಿನಲ್ಲಿ ಮಠಗಳ ಅಭಿವೃದ್ಧಿ, ಆಸ್ತಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಡ ಲಿಂಗಾಯತರು ಇಂದು ಬೀದಿ ಪಾಲಾಗುತ್ತಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶ್ರೀಕಾಂತ ಭೊರಾಳೆ ಮಾತನಾಡಿದರು. ಡಾ| ಅಮೀತ ಅಷ್ಟೂರೆಯವರಿಂದ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖಂಡರಾದ ಜೈರಾಜ ಕೊಳ್ಳಾ, ನಾಗಶೆಟ್ಟೆಪ್ಪ ಲಂಜವಾಡೆ, ದತ್ತುಕುಮಾರ ಕರಕಾಳೆ, ದೀಪಕ ಸಿಂಧೆ, ವೈಜಿನಾಥ ತಗಾರೆ, ರಾಜಕುಮಾರ ಜಲೆª, ಪ್ರಕಾಶ ಜವಳಗಾ, ಈಶ್ವರ ಕಿನೆಗಾವೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next