Advertisement

ಚಿಮೂ ಹೇಳಿಕೆಗೆ ಲಿಂಗಾಯತ ಧರ್ಮ ಮಹಾಸಭಾ ವಿರೋಧ

11:14 AM Jun 25, 2017 | Team Udayavani |

ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಸಮುದಾಯಗಳಲ್ಲ, ಎರಡು ಒಂದೇ ಎಂಬ ಖ್ಯಾತ ಸಾಹಿತಿ ಡಾ.ಚಿದಾನಂದ ಮೂರ್ತಿ ಅವರ ಹೇಳಿಕೆಗೆ ಲಿಂಗಾಯತ ಧರ್ಮ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ,  ವೀರಶೈವ ಪ್ರತ್ಯೇಕ ಧರ್ಮವಲ್ಲ ಎಂಬುದು ಸತ್ಯ. ಆದರೆ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದೇ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ಸಾಹಿತಿ ಚಿದಾನಂದಮೂರ್ತಿ ವೈದಿಕ ಹಾಗೂ ಶೈವರನ್ನು ಓಲೈಸುವುದಕ್ಕಾಗಿ ಸ್ವಧರ್ಮಕ್ಕೆ ದ್ರೋಹ ಬಗೆಯುತ್ತಿದ್ದಾರೆ. ನಿಜವಾಗಿಯೂ ಅವರು ಲಿಂಗಾಯತರೋ? ಶೈವರೋ? ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಕರ್ನಾಟಕದಲ್ಲಿ ವೀರಶೈವ ಎಂಬುದೇ ಇಲ್ಲ. ಲಿಂಗಾಯತ ಧರ್ಮದ ಅನುಯಾಯಿಗಳೇ ಇದ್ದಾರೆ.

ಕೇಂದ್ರ ಸರ್ಕಾರ ನಡೆಸುವ ಧರ್ಮವಾರು ಜನಗಣತಿಯ ಪ್ರಕಾರ ಲಿಂಗಾಯತ ಸಮಾಜದಲ್ಲಿ ಬರುವ ಪಂಚಮಸಾಲಿ, ಬಣಜಿಗ, ಗಾಣಿಗ, ಕಂಬಾರ ಮುಂತಾದ 71 ಒಳ ಪಂಗಡಗಳಲ್ಲಿ ವೀರಶೈವವು ಒಂದು ಒಳ ಪಂಗಡ ಹೊರತೇ ವಿನಃ ಲಿಂಗಾಯತ ಧರ್ಮವೇ ವೀರಶೈವ ಎಂದಾಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next