Advertisement

ಮಾಸ್ಕ್ ಧರಿಸಲು ಜನಜಾಗೃತಿ ಜಾಥಾ

01:06 PM Jun 20, 2020 | Naveen |

ಲಿಂಗಸುಗೂರು: ಜನರ ಆರೋಗ್ಯ ಮಾರಕವಾದ ಕೊವೀಡ್‌-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

Advertisement

ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಕಂಡು ಬಂದರೆ ತಕ್ಷಣವೇ ವೈದ್ಯರನ್ನುಸಂಪರ್ಕಿಸಬೇಕು ಮತ್ತು ಕೋವಿಡ್ ಸೋಂಕಿತರ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಪುರಸಭೆ ಕಚೇರಿ ಬಳಿಯಿಂದ ಆರಂಭವಾದ ಜಾಥಾ ಗಡಿಯಾರ ಚೌಕ್‌, ಬಸ್‌ ನಿಲ್ದಾಣ ವೃತ್ತ ಹಾಗೂ ಮುಖ್ಯರಸ್ತೆಯಲ್ಲಿ ಸಂಚರಿತು. ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ, ಸಿಪಿಐ ಯಶವಂತ ಬಿಸನಳ್ಳಿ, ಆರೋಗ್ಯಾಧಿಕಾರಿ ಡಾ| ರುದ್ರಗೌಡ, ಪಿಎಸ್‌ಐ ಪ್ರಕಾಶ ಡಂಬಳ, ಆರೋಗ್ಯ ಇಲಾಖೆ ರವಿ ಮುಂಡೆವಾಡಿ, ಪ್ರಾಣೇಶ ಕುಲಕರ್ಣಿ, ಪುರಸಭೆಯ ಶಿವಲಿಂಗ ಮೇಗಳಮನಿ, ರಾಜಶೇಖರ ಪಾಟೀಲ, ವೆಂಕಟೇಶ ಆರೋಗ್ಯ, ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next