Advertisement
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬರುವ ಮುಂಗಾರು ಮಳೆ ಆಧರಿಸಿ ಪಟ್ಟಣ, ಗ್ರಾಮ, ಶಾಲೆ, ರಸ್ತೆ ಅಕ್ಕ-ಪಕ್ಕ ಸೇರಿದಂತೆ ಕಾಯ್ದಿಟ್ಟ ಅರಣ್ಯಭೂಮಿಯಲ್ಲಿ ಅರಣ್ಯೀಕರಣಕ್ಕೆ ಹಾಗೂ ಸಾರ್ವಜನಿಕರಿಗೆ ವಿವಿಧಯೋಜನೆಗಳಲ್ಲಿ ಮಾರಾಟಕ್ಕಾಗಿ ಲಿಂಗಸುಗೂರು ಪಟ್ಟಣ, ತಾಲೂಕಿನ ಕರಡಕಲ್ ನರ್ಸರಿಗಳಲ್ಲಿ ಬೇವು, ಹುಣಸೆ, ಮಾವು, ನೇರಳೆ, ಮಹಾಗನಿ, ಹೊಂಗೆ, ಇತರೆ ಸೇರಿಒಟ್ಟು 36,800 ಸಸಿಗಳನ್ನು ಬೆಳೆಸಲಾಗುತ್ತಿದೆ. ಜೂನ್‌ನಿಂದ ಯೋಜನೆ ರೂಪಿಸಿಕೊಂಡು ಗಿಡಗಳನ್ನು ನೆಡಲಾಗುತ್ತಿದೆ. ಅರಣ್ಯ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಶ್ರೀಗಂಧ, ಹೆಬ್ಬೇವು, ರಕ್ತಚಂದನ, ಪೇರಲ, ನಿಂಬೆ, ಕರಿಬೇವು, ಮಹಾಗನಿ, ಸಾಗುವಾನಿ ಸೇರಿ ಒಟ್ಟು 25,300 ಗಿಡಗಳನ್ನು ಬೆಳೆಸಲಾಗುತ್ತಿದೆ. ಇವುಗಳನ್ನು ಮೇ ಕೊನೆ ಅಥವಾ ಜೂನ್‌ನಲ್ಲಿ ರೈತರಿಗೆ
ವಿತರಿಸಲು ಕ್ರಮ ವಹಿಸಲಾಗುತ್ತದೆ.
ಹೊಂಗೆ, ಮಾವು, ಮಹಾದಾನಿ, ಜಂಬುನೇರಳೆ, ಹೊನ್ನಿ, ಬಗಂ, ಅರಳಿ, ಬದಾಮಿ ಸೇರಿ ಇನ್ನಿತರ ಜಾತಿ ಗಿಡಗಳನ್ನು ಹಾಕಲಾಗಿದೆ. ಆದರೆ ಮಳೆ ಕೊರತೆಯಿಂದಾಗಿ ಮತ್ತು ಬಿಸಿಲಿನ ಪ್ರಖರತೆಗೆ ಗಿಡಗಳು ಒಣಗುವ ಆತಂಕ
ಎದುರಾಗಿತ್ತು. ಜೊತೆಗೆ ಕೀಟ ಬಾಧೆ ಕೂಡ ಕಾಡಲಾರಂಭಿಸಿವೆ. ಇದರಿಂದ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಗಿಡಗಳನ್ನು ಹೇಗಾದರೂ ಸಂರಕ್ಷಣೆ ಮಾಡುವ ಉದ್ದೇಶದಿಂದ ಗಿಡಗಳಿಗೆ ಗೊಬ್ಬರ ಹಾಕಿ, ಟ್ಯಾಂಕರ್ ಮೂಲಕ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಲಿಂಗಸುಗೂರು ಪಟ್ಟಣದ ಪ್ರಮುಖ ರಸ್ತೆ, ಶಾಲಾ-ಕಾಲೇಜು, ವಿವಿಧ ಲೇಔಟ್‌ಗಳಲ್ಲಿ ಮತ್ತು ಮಸ್ಕಿ, ಮುದಗಲ್ಲ ನಗರಗಳಲ್ಲಿ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ವಿವಿಧೆಡೆ ಸಸಿ ನೆಡೆಲು ಗುಂಡಿಗಳನ್ನು ತೋಡಲಾಗಿದೆ.
Related Articles
Advertisement
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕೆಲವೆಡೆಗಳಲ್ಲಿ ನೆಡಲಾದ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತದೆ. ಬರುವ ಮುಂಗಾರು ಹಂಗಾಮಿನಲ್ಲಿ ಮಳೆ ನಿರೀಕ್ಷೆಯೊಂದಿಗೆ ಅರಣ್ಯೀಕರಣ ಕಾರ್ಯ ಚುರುಕುಗೊಳಿಸಲಾಗುತ್ತಿದೆ..ರಾಜೇಶ,ಅಧ್ಯಕ್ಷರು,
ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿವರಾಜ ಕೆಂಬಾವಿ