Advertisement

ಕೋವಿಡ್ ತಡೆಗೆ ಜನರ ಸಹಕಾರ ಅಗತ್ಯ

05:31 PM Jun 01, 2020 | Naveen |

ಲಿಂಗಸುಗೂರು: ಪಟ್ಟಣ ಹಾಗೂ ಸರ್ಜಾಪುರದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕಿತ ಪತ್ತೆಯಾಗಿದೆ. ಜನರು ಆತಂಕ ಪಡಬಾರದು. ಆದರೆ ಜಾಗೃತರಾಗಿರಬೇಕು ಎಂದು ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು ಮನವಿ ಮಾಡಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಹಾಗೂ ಬಸ್‌ ನಿಲ್ದಾಣದ ವೃತ್ತದಲ್ಲಿ ಜಾಗೃತಿ ಮೂಡಿಸಿದ ಅವರು, ಲಿಂಗಸುಗೂರು ಪಟ್ಟಣದಲ್ಲಿ ಕೇರಳ ಮೂಲದ ವ್ಯಾಪಾರಿಗೆ ಸೋಂಕು ಪತ್ತೆಯಾಗಿದೆ. ಅವರ ಅಂಗಡಿಗಳಾದ ಅತಿಥಿ ಬೇಕರಿ, ಬಾಲನ್‌ ಕಿರಾಣಿ ಅಂಗಡಿ, ಪ್ಯಾಶನ್‌ ವಿಲೇಜ್‌ ಬಟ್ಟೆ ಅಂಗಡಿ ಹಾಗೂ ಎಸ್‌ಎಲ್‌ವಿ ಬೇಕರಿಗಳಲ್ಲಿ ವಹಿವಾಟು ನಡೆಸಿದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ಸೋಂಕು ತಡೆಗೆ ಆಡಳಿತದೊಂದಿಗೆ ಸಹಕಾರ ಮಾಡಬೇಕು. ಇದರಿಂದ ದ್ವಿತೀಯ ಸಂಪರ್ಕದಲ್ಲಿರುವವರ ಪತ್ತೆ ಸಹಕಾರ ನೀಡಿದಂತಾಗುತ್ತಿದೆ ಎಂದು ಹೇಳಿದರು.

ಲಾಕ್‌ಡೌನ್‌ ಬಿಗಿಯಾದಷ್ಟು ದಿನ ತಾಲೂಕಿಗೆ ಸೋಂಕು ವಕ್ಕರಿಸಿರಲಿಲ್ಲ. ಆದರೆ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಸೋಂಕು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಮಾಜಿಕ ಅಂತರ ಕಾಯ್ದಕೊಳ್ಳಬೇಕು ಎಂದು ಹೇಳಿದರು. ಸಿಪಿಐ ಯಶವಂತ ಬಿಸನಳ್ಳಿ,
ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next