Advertisement

ಅಮರೇಶ್ವರ ಫಾರ್ಮ್ ಗೆ ನೀರಿನ ಸಮಸ್ಯೆ

12:58 PM May 09, 2019 | Naveen |

ಲಿಂಗಸುಗೂರು: ತಾಲೂಕಿನ ಸುಕ್ಷೇತ್ರ ಅಮರೇಶ್ವರದಲ್ಲಿರುವ ತೋಟಗಾರಿಕೆ ಫಾರ್ಮ್ಗೆ ಈಗ ನೀರಿನ ಸಮಸ್ಯೆ ತಲೆದೋರಿದೆ.

Advertisement

ತೋಟಗಾರಿಕೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ 1985ರಲ್ಲಿ ತಾಲೂಕಿನ ಅಮರೇಶ್ವರ ಸುಕ್ಷೇತ್ರದಲ್ಲಿ 13.27 ಎಕರೆ ಭೂ ಪ್ರದೇಶದಲ್ಲಿ ತೋಟಗಾರಿಕೆ ಫಾರ್ಮ್ ಆರಂಭಿಸಲಾಗಿದೆ. ವಿವಿಧ ತಳಿಯ 600 ಮಾವಿನಗಿಡ, 200 ಬಾರೆಗಿಡ, 300 ಸಪೋಟಾ ಹಣ್ಣಿನ ಗಿಡ ಬೆಳೆಸಿ ಪೋಷಿಸಲಾಗಿದೆ.

ಸಸಿ ಬೆಳೆಸಿ ಮಾರಾಟ: ಇಲ್ಲಿನ ಹಣ್ಣುಗಳಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದಲ್ಲದೆ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಉದ್ದೇಶದಿಂದ ತೆಂಗು, ಸಪೋಟ, ಬಾರೆ, ಪೇರಲ, ಮಾವು, ನಿಂಬೆ ಹಾಗೂ ವಿವಿಧ ಸಸಿ ಬೆಳೆಸಿ ಮಾರಾಟ ಮಾಡಲಾಗುತ್ತಿದೆ.

1600 ಸಸಿ: 13.27 ಎಕರೆ ಫಾರ್ಮ್ ಬಳಕೆ ಮಾಡಿರುವುದು 9 ಎಕರೆ ಮಾತ್ರ. ಇನ್ನುಳಿದ ಜಾಗ ಪಾಳು ಬಿಡಲಾಗಿತ್ತು. ಅದನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಒಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ 666 ಅಂಜೂರು, 400 ಪೇರಲ, ವಿವಿಧ 534 ಒಟ್ಟು 1600 ಸಸಿ ನೆಡಲಾಗಿದೆ. ಇದಕ್ಕೆ ಡ್ರಿಪ್‌ ಹಾಕಲಾಗಿದೆ. 2018ನೇ ಸಾಲಿನಲ್ಲಿ 5000 ಲಿಂಬೆ ಸಸಿಗಳ ಉತ್ಪಾದನೆ ಗುರಿ ನೀಡಲಾಗಿದೆ. ಇದಲ್ಲದೆ 8700 ತೆಂಗಿನ ಸಸಿ ಬೆಳೆಸಲಾಗುತ್ತಿದೆ. ಈ ವರ್ಷ 5500 ತೆಂಗಿನ ಬೀಜ ಬಂದಿವೆ. ಅದನ್ನು 15 ತಿಂಗಳಲ್ಲಿ ಪೋಷಣೆ ಮಾಡಿ ರೈತರಿಗೆ ನೀಡಲಾಗುತ್ತಿದೆ.

ನೀರಿನ ಸಮಸ್ಯೆ: ತೋಟಗಾರಿಕೆ ಫಾರ್ಮ್ ಆರಂಭದಲ್ಲಿ ಆದಾಯ ತರಲಾಗುತ್ತಿತ್ತು. ಈಗ ನೀರಿನ ಸಮಸ್ಯೆ ಗಂಭೀರವಾಗಿದ್ದು, ಫಾರ್ಮ್ನಲ್ಲಿ ಇರುವ ಬಾವಿ ನೀರೇ ಇದಕ್ಕೆ ಸ್ವಲ್ಪ ಮಟ್ಟಿಗೆ ಆಸರೆಯಾಗಿದೆ. ಅದರಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇಲ್ಲಿ ಮೂರ್‍ನಾಲ್ಕು ಬೋರ್‌ವೆಲ್ ಕೊರೆದರೂ ಅವು ವಿಫಲವಾಗಿದೆ. ಪರ್ಯಾಯ ವ್ಯವಸ್ಥೆಗಾಗಿ ಸುಕ್ಷೇತ್ರದಲ್ಲಿ ಕೆರೆಯ ಹತ್ತಿರದ ಬಾವಿ ನೀರನ್ನು ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಆದರೆ ನೀರಿನ ಸಮಸ್ಯೆಯಿಂದ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿವೆ. ತೋಟಗಾರಿಕೆ ಇಲಾಖೆ ಇದಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಫಾರ್ಮ್ನಲ್ಲಿ ಶೇಡ್‌ನೆಟ್‌ಗಳು ಹಾಳಾಗಿವೆ. ಹೀಗಾಗಿ ಹೊಸದಾಗಿ ಶೇಡ್‌ನೆಟ್ ಅಳವಡಿಸಲು ಇಲಾಖೆ ಮುಂದಾಗಬೇಕಾಗಿದೆ.

Advertisement

ಆಯಾ ಹಣ್ಣಿನ ಸೀಸನ್‌ ಶುರುವಾದಾಗ ಹಣ್ಣುಗಳನ್ನು ಮಾರಾಟಕ್ಕಾಗಿ ಹರಾಜು ಮಾಡಲಾಗುತ್ತಿದೆ. ಈ ಬಾರಿ ಮಾವಿಗೆ ಒಂದು ಲಕ್ಷ ರೂ.ಗೆ ಹರಾಜಿಗಾಗಿದೆ. ಇದುಲ್ಲದೆ ಬಾರೆ, ಸಪೋಟ ಹಣ್ಣುಗಳ ಹರಾಜು ಹಾಗೂ ಹಣ್ಣಿನ ಸಸಿಗಳ ಮಾರಾಟದಿಂದ ಒಟ್ಟು 6 ಲಕ್ಷ ಆದಾಯದ ಗುರಿ ನೀಡಲಾಗಿದೆ. ಆದರೆ ನೀರಿನ ಸಮಸ್ಯೆ ಎದುರಾಗಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ.

ಕಳೆದ ಮೂರು ತಿಂಗಳ ಹಿಂದೆ 1600 ಹಣ್ಣಿನ ಸಸಿ ನೆಡಲಾಗಿದೆ. ನೀರಿನ ಸಮಸ್ಯೆಯಿದೆ. ನಾಲ್ಕೈದು ಬೋರ್‌ವೆಲ್ ಕೊರೆದರೂ ನೀರು ಬೀಳದಾಗಿದೆ. ತಾತ್ಕಾಲಿಕವಾಗಿ ಸುಕ್ಷೇತ್ರದಲ್ಲಿರುವ ಕೆರೆಯ ಬಾವಿ ನೀರು ಬಳಕೆ ಮಾಡಲಾಗುತ್ತಿದೆ. ನೀರಿನ ಸೌಲಭ್ಯ ಇದ್ದರೆ ತೋಟಗಾರಿಕೆ ಬೆಳೆಗಳಿಗೆ ಅನುಕೂಲ.
ಲಕ್ಷ್ಮಣ,
ತೋಟಗಾರಿಕೆ ಸಹಾಯಕ, ಅಮರೇಶ್ವರ ಫಾರ್ಮ್

Advertisement

Udayavani is now on Telegram. Click here to join our channel and stay updated with the latest news.

Next