ನಾಲೆಯಲ್ಲಿ ಬಿರುಕು ಬಿಟ್ಟಿದ್ದು, ನಾಲೆ ಒಡೆಯುವ ಭೀತಿ ಎದುರಾಗಿದೆ.
Advertisement
ರಾಂಪುರ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ 4ನೇ ಕಿ.ಮೀ. ನರಕಲದಿನ್ನಿ ಬಳಿಯ ನಾಲೆಯನ್ನು ಕೆಲ ತಿಂಗಳ ಹಿಂದಷ್ಟೇ ಸಂಪೂರ್ಣ ದುರಸ್ತಿ ಮಾಡಲಾಗಿತ್ತು. ನಾಲೆಯ ಎರಡು ಬದಿಯ ಲೈನಿಂಗ್‌ಗೆ ಸಿಮೆಂಟ್ ಕಾಂಕ್ರಿಟ್ ಹಾಕಲಾಗಿತ್ತು. ಆದರೆ ನಾಲೆಗಳ ದುರಸ್ತಿ ಕಾಮಗಾರಿ ಸಕಾಲಕ್ಕೆ ಮುಗಿದಿರಲಿಲ್ಲ. ಇದೇ ವೇಳೆ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದು ಬಸವಸಾಗರ ಜಲಾಶಯ ಭರ್ತಿ ಆಗಿದ್ದರಿಂದ ನಾಲೆಗೆ ನೀರು ಹರಿಸಲಾಗಿತ್ತು. ಈ ನೀರಿನ ಒತ್ತಡಕ್ಕೆ ಕಾಲುವೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಎರಡ್ಮೂರು ದಿನ ಸುರಿದ ಮಳೆಗೆ ಕಾಲುವೆ ಪಕ್ಕದ ರಸ್ತೆ ಮಣ್ಣು ಕುಸಿದು ಕಾಲುವೆ ಎರಡೂ ಬದಿಯ ಗೋಡೆಯಸಿಮೆಂಟ್ ಕಿತ್ತು ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.