ಕುಷ್ಟಗಿ: ಜಿಲ್ಲೆಯ ಮೊದಲ ಇಂಟರ್ ಗ್ರೇಟೆಡ್ ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಂಡ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ತಾಲೂಕಿನ ಲಿಂಗದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾತ್ರವಾಗಿದೆ. ಈ ಶಾಲೆಯ ಪ್ರೇರಣೆಯಿಂದ ತಾಲೂಕಿನ 101 ಶಾಲೆಗಳಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಸಾಕಾರಗೊಂಡಿದೆ.
Advertisement
ತಾಲೂಕಿನ ಲಿಂಗದಳ್ಳಿ ಸರ್ಕಾರಿ ಶಾಲೆಯಲ್ಲಿ ಏಳೆಂಟು ವರ್ಷಗಳ ಹಿಂದೆತರಗತಿ ಮಕ್ಕಳ ಸಂಖ್ಯೆ ಸರಾಸರಿ 170-180 ಇತ್ತು. ಇದೀಗ 380ಕ್ಕೇರಿದ್ದು, ಇತ್ತೀಚಿನ ಶಾಲಾ ಪೂರ್ವ ಶಿಕ್ಷಣ ಆರಂಭಿಸಿದಾಗಿನಿಂದ ಮಕ್ಕಳ ಸಂಖ್ಯೆ 420ಕ್ಕೆ ಏರಿದೆ. ಇದಕ್ಕೆಲ್ಲಾ ಕಾರಣ ಸ್ಮಾರ್ಟ್ ಕ್ಲಾಸ್ ಎಂಬ ಪರಿಕಲ್ಪನೆ. ಇದರಿಂದ ಸರ್ಕಾರಿ ಶಾಲೆಯೊಂದು ಧನಾತ್ಮಕ ಸುಧಾರಣೆ ಕಂಡಿದೆ.
2016-17ರಲ್ಲಿ ಈ ಶಾಲೆಗೆ ನಿಯುಕ್ತಿಗೊಂಡ ಶಿಕ್ಷಕ ಆನಂದ ಸೊಬಗಿನ್ ಅವರ ತಾಂತ್ರಿಕ ಕಾರ್ಯ ಚಟುವಟಿಕೆಯೇ ಕ್ರಿಯಾತ್ಮಕ ಬದಲಾವಣೆ ಕಂಡಿದೆ. ಶಿಕ್ಷಕ ಆನಂದ ಸೊಬಗಿನ್ ಶಾಲಾ ಪಠ್ಯಕ್ರಮ ಜೊತೆ ತಂತ್ರಜ್ಞಾನದ ಆಸಕ್ತಿ ಹಾಗೂ ತಿಳಿವಳಿಕೆಯು ಕಲಿಕೆ
ಸಹಕಾರಿ ನೀಡಿದೆ. ಮೊದಲಿಗೆ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ ಮಾಡಿಕೊಂಡರು. ಇವರ ಪರಿಮಾಣಾತ್ಮಕ ಕಲಿಕೆಗೆ ಮಕ್ಕಳ ಜ್ಞಾನ ಗ್ರಹಿಕೆ ಸುಲಭ ಎಂದು ಗುರುತಿಸಿದ ಆಗಿನ ಸಿಆರ್‌ಪಿ ಶರಣಪ್ಪ ತುಮರಿಕೊಪ್ಪ ಅವರು, ಶಿಕ್ಷಕ ಆನಂದ ಸೊಬಗಿನ ಅವರ ಬೆನ್ನಿಗೆ ನಿಂತಿರುವುದಷ್ಟೇ ಅಲ್ಲ, ಗ್ರಾಮಸ್ಥರಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಅಳವಡಿಸಿಕೊಂಡರು. ನಂತರ ಅದಕ್ಕೆ ಇಂಟರ್ನೆಟ್ ಮತ್ತು ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸಿದ ನಂತರ ಲಿಂಗದಳ್ಳಿ ಮಕ್ಕಳು ಅಷ್ಟೇ ಅಲ್ಲ ಪಕ್ಕದ ಹೊಮ್ಮಿನಾಳ, ವಿರುಪಾಪೂರ, ಗುಡ್ಡದ ಹನುಮಸಾಗರ ಕ್ಯಾಂಪ್, ಗುಡ್ಡದ ಹನುಮಸಾಗರ, ಕನಕಗಿರಿ ತಾಲೂಕಿನ ಲಾಯದ ಹುಣಸಿ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ.
Related Articles
ಲಾಂಗ್ವೇಜ್ ಲ್ಯಾಬ್ ಅಳವಡಿಕೊಳ್ಳಲು ಚಿಂತನೆ ನಡೆದಿದೆ. ಈ ಶಾಲೆಯ ಮಕ್ಕಳು 4ರಿಂದ 5 ಮಕ್ಕಳು ವಸತಿ ಶಾಲೆಗೆ
ಆಯ್ಕೆಯಾಗಿದ್ದಾರೆ.
Advertisement
ರಾಷ್ಟ್ರೀಯ ಮೌಲ್ಯಾಂಕನ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನಪ್ರಯೋಗಾಲಯ ಬೇಡಿಕೆ ಇದೆ. ಇದೆಲ್ಲದರ ನಡುವೆ ಶಾಲೆಗೆ ಶಿಕ್ಷಕರ ಕೊರತೆ ಕಾಡುತ್ತಿದೆ. 12 ಶಿಕ್ಷಕರು ಸೇವೆಯಲ್ಲಿರಬೇಕಾದ ಶಾಲೆಯಲ್ಲಿ ಸದ್ಯ 7 ಜನ ಶಿಕ್ಷಕರು 4 ಅತಿಥಿ ಶಿಕ್ಷಕರು ಸೇವೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸೇವೆ
ಅಗತ್ಯವಾಗಿದೆ. ಮುಖ್ಯ ಶಿಕ್ಷಕ ಹುದ್ದೆ ಖಾಲಿ ಇದ್ದು, ಶಿಕ್ಷಕ ಆನಂದ ಸೊಬಗಿನ್ ಅವರೇ ಪ್ರಭಾರ ವಹಿಸಿಕೊಂಡು ಮುನ್ನೆಡೆಸಿದ್ದಾರೆ. ಇವರಿಗೆ ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಎಮ್ಮಿ ಸಾಥ್ ನೀಡಿದ್ದಾರೆ. ಅಮೆರಿಕಾ ಮೂಲದ ಓಎಸ್ ಎಎಟಿ ಫೌಂಡೇಷನ್‌ನ ಗುಣಾತ್ಮಕ ಪ್ರಗತಿ ಪಟ್ಟಿಯಲ್ಲಿ ಲಿಂಗದಳ್ಳಿ ಸರ್ಕಾರಿ ಶಾಲೆಯ 109ನೇ ಶಾಲೆಯನ್ನು ಆಯ್ಕೆ ಮಾಡಿದೆ. ಅಂದಾಜು 80 ಲಕ್ಷ ರೂ. ವೆಚ್ಚದಲ್ಲಿ 4 ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಲು ಮುಂದಾಗಿದೆ. ಸದ್ಯ ಶಾಲಾ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಅಲ್ಲದೇ ಶಾಲೆಗೆ ಪೂರಕ ವ್ಯವಸ್ಥೆಯು ಇಲ್ಲಿದೆ. ನೀರಿನ ಮಿತವ್ಯಯ: ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ವೇಳೆ ನೀರು ವ್ಯರ್ಥವಾಗದಂತೆ, ಶಿಕ್ಷಕ ಆನಂದ ಸೊಬಗಿನ್ ಅವರು, ತಾವೇ 25 ಸಾವಿರ ರೂ. ಖರ್ಚು ಮಾಡಿ ಕೈ ತೊಳೆಯು. ಅ ಧಿಕಾರಿ ಹೇಮಂತ್ ಭೇಟಿ ನೀಡಿ, ಡಿಜಿಟಲ್ ಬೋರ್ಡ್, ಪ್ರಾಜೆಕ್ಟರ್, ಹೋಮ್ ಥೇಟರ್ ನೆರವಿನಿಂದ ಕಲಿಕಾ ಮಾದರಿ ಉತ್ತಮವಾಯಿತು. ಇಲ್ಲಿ ಖಾತ್ರಿ ಪಡಿಸಿಕೊಂಡ ಮೇಲೆಯೇ ತಾಲೂಕಿನ ಇತರೇ ಶಾಲೆಗೂ ಈ ವ್ಯವಸ್ಥೆ ಅಳವಡಿಕೆಗೆ ಸೂಚಿಸಿರುವುದು ನಮಗೆ ಹೆಮ್ಮೆ ಅನಿಸುತ್ತಿದೆ.
*ಆನಂದ್ ಸೊಬಗಿನ್ ಪ್ರಭಾರಿ, ಮುಖ್ಯ ಶಿಕ್ಷಕ ■ ಮಂಜುನಾಥ ಮಹಾಲಿಂಗಪುರ