Advertisement

Lineman: ಮೋಶನ್‌ ಪೋಸ್ಟರ್‌ನಲ್ಲಿ ಲೈನ್‌ಮ್ಯಾನ್‌

05:52 PM Feb 28, 2024 | Team Udayavani |

ರಘು ಶಾಸ್ತ್ರಿ ನಿರ್ದೇಶನದ “ಲೈನ್‌ಮ್ಯಾನ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮಾ.15ರಂದು ತೆರೆಕಾಣಲಿದ್ದು, ಇತ್ತೀಚೆಗೆ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ವಿದ್ಯುತ್‌ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ “ಲೈನ್‌ ಮ್ಯಾನ್‌’ ಸುತ್ತ ಈ ಕಥೆ ಸುತ್ತುತ್ತದೆ. ಪರ್ಪಲ್‌ ರಾಕ್‌ ಸಂಸ್ಥೆಯ ಮೂರನೇ ಚಿತ್ರವೇ “ಲೈನ್‌ ಮ್ಯಾನ್‌’.

ಯತೀಶ್‌ ವೆಂಕಟೇಶ್‌, ಗಣೇಶ್‌ ಪಾಪಣ್ಣ, ಶ್ರೀನಿವಾಸ್‌ ಬಿಂಡಿಗನವಿಲೆ ಹಾಗೂ ಅಜಯ್‌ ಅಪರೂಪ್‌ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ನಟ ತ್ರಿಗುಣ್‌ ಅವರು ಲೈನ್‌ ಮ್ಯಾನ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‌

ಚಿತ್ರದಲ್ಲಿ ಕಾಜಲ್‌ ಕುಂದರ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್‌ ಛಾಯಾಗ್ರಹಣ, ಚಾಮರಾಜನಗರದ ಚಂದಕವಾಡಿಯಲ್ಲಿ ಶೂಟಿಂಗ್‌ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next