ಕೆಲವು ಸಿನಿಮಾಗಳು ಕಥೆಯ ಜೊತೆಗೆ ವಿಭಿನ್ನವಾದ ಪಾತ್ರಗಳ ಮೂಲಕ ಗಮನ ಸೆಳೆಯುತ್ತವೆ. ಇದರೊಂದಿಗೆ ಸಿನಿಮಾಕ್ಕೂ ಜೀವಂತಿಕೆ ಬರುತ್ತದೆ. ಈ ವಾರ ತೆರೆಕಂಡಿರುವ “ಲೈನ್‌ಮ್ಯಾನ್’ ಸಿನಿಮಾ ಕೂಡಾ ಒಂದು ಹೊಸ ಬಗೆಯ ಕಥೆಯ ಜೊತೆಗೆ ಪಾತ್ರ ಪೋಷಣೆಗಳಿಂದ ಭಿನ್ನವಾಗಿ ನಿಲ್ಲುತ್ತದೆ.
ಹೆಸರೇ ಹೇಳಿದಂತೆ ಊರೊಂದರ ಲೈನ್ ಮ್ಯಾನ್ ಸುತ್ತ ಸಾಗುವ ಸಿನಿಮಾ. ಊರಿನ ಕರೆಂಟ್ ತೆಗೆಯುವ ಲೈನ್ ಮ್ಯಾನ್ ಒಂದು ಕಡೆಯಾದರೆ, ಅದರ ಹಿಂದಿನ ಉದ್ದೇಶ ಮತ್ತೂಂದು… ಇದರ ಜೊತೆಗೆ ಸಾಗಿಬರುವ ಮಾನವೀಯ ಅಂಶಗಳು ಸಾಗಿಬರುತ್ತವೆ. ಈ ಮೂಲಕ ಸಿನಿಮಾ ಪ್ರೇಕ್ಷಕರನ್ನು ತನ್ನ ಜೊತೆ ಹೆಜ್ಜೆ ಹಾಕಿಸುತ್ತದೆ. ಚಿತ್ರದಲ್ಲಿ ಬರುವ ಸೂಲಗಿತ್ತಿ ಶಾರದಮ್ಮ, ಲೈನ್‌ಮ್ಯಾನ್ ನಟೇಶ್, ಜೆಇ… ಪಾತ್ರಗಳು ಸಿನಿಮಾವನ್ನು ಹೆಚ್ಚು ಆಪ್ತವಾಗುವಂತೆ ಮಾಡಿದೆ ಎಂದರೆ ತಪ್ಪಲ್ಲ.
ಚಿತ್ರದ ಮೊದಲರ್ಧ ಪಾತ್ರ ಪರಿಚಯದ ಜೊತೆ ಸಾಗಿದರೆ, ದ್ವಿತೀಯಾರ್ಧದಲ್ಲಿ ನಿರ್ದೇಶಕರು ಸಿನಿಮಾದ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇಲ್ಲಿ ಮೂಲ ಕಥೆಯ ಒಂದೊಂದೇ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಇಲ್ಲಿ ಬರುವ ಒಂದಷ್ಟು ಸನ್ನಿವೇಶ, ಸಂಭಾಷಣೆಗಳು ನಗು ತರಿಸುತ್ತವೆ. ಒಂದು ಪ್ರಯತ್ನವಾಗಿ “ಲೈನ್ ಮ್ಯಾನ್’ ಕೆಲಸವನ್ನು ಮೆಚ್ಚಬಹುದು.
ಚಿತ್ರದಲ್ಲಿ ನಟಿಸಿರುವ ತ್ರಿಗುಣ್, ಕಾಜಲ್ ಕುಂದರ್, ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.
ಆರ್‌ಪಿ