Advertisement

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

10:47 AM Mar 22, 2024 | Team Udayavani |

ಲೈನ್‌ ಮ್ಯಾನ್‌

Advertisement

ಈ ಹಿಂದೆ “ಟಕ್ಕರ್‌’ ಹಾಗೂ “ರನ್‌ ಆಂಟೋನಿ’ ಚಿತ್ರಗಳನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ನಿರ್ದೇಶನದ ಮೂರನೇ ಚಿತ್ರ “ಲೈನ್‌ಮ್ಯಾನ್‌’ ಇಂದು ತೆರೆಕಾಣುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್‌ ಸಂಬಂಧಿಸಿ ತೊಂದರೆ ಸರಿಪಡಿಸುವ “ಲೈನ್‌ ಮ್ಯಾನ್‌’ ಸುತ್ತ ಈ ಸಿನಿಮಾದ ಕಥೆ ನಡೆಯಲಿದೆ.

ಯುವ ನಟ ತ್ರಿಗುಣ್‌ ಸಿನಿಮಾದಲ್ಲಿ “ಲೈನ್‌ಮ್ಯಾನ್‌’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್‌ ಕುಂದರ್‌ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಹಿರಿಯ ನಟಿ ಬಿ. ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಮತ್ತಿತರರು ಸಿನಿಮಾದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಪರ್ಪಲ್‌ ರಾಕ್‌’ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ

ದಿಲ್‌ ಖುಷ್

ಹೊಸಬರ “ದಿಲ್‌ ಖುಷ್‌’ ಚಿತ್ರ ಇಂದು ತೆರೆಕಾಣುತ್ತಿದೆ. ಪ್ರಮೋದ್‌ ಜಯ್‌ ಈ ಸಿನಿಮಾದ ನಿರ್ದೇಶಕರು. ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಯೂಥ್‌ಫ‌ುಲ್‌ ಸಬೆjಕ್ಟ್ ಸಿನಿಮಾ. ಸ್ನೇಹ, ಪ್ರೀತಿ, ಸಂಬಂಧ ಎಲ್ಲದರ ಎಳೆಯನ್ನು ಇಟ್ಟುಕೊಂಡು ಸಿನಿಮಾವನ್ನು ಹೊಸಥರದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವಂಥ ಕಥೆ ಸಿನಿಮಾದಲ್ಲಿದೆ. “ದಿಲ್‌ ಖುಷ್‌’ ಸಿನಿಮಾದ ಪ್ರೇಮಗೀತೆಗೆ ಪ್ರಸಾದ್‌ ಕೆ. ಶೆಟ್ಟಿ ಸಂಗೀತ ಸಂಯೋಜಿಸಿದ್ದು, ಗೌಸ್‌ಪೀರ್‌ ಸಾಹಿತ್ಯ ರಚಿಸಿದ್ದಾರೆ ಎನ್ನುವುದು ತಂಡದ ಮಾತು

Advertisement

“ಜಯಪ್ರಭ ಕಲರ್‌ ಫ್ರೇಮ್ಸ್‌’ ಬ್ಯಾನರಿನಲ್ಲಿ ಜಯಲಕ್ಷ್ಮೀ ಪ್ರವೀಣ್‌ ಮತ್ತು ಪ್ರಭ ಶೇಖರ್‌ ನಿರ್ಮಿಸಿರುವ “ದಿಲ್‌ ಖುಷ್‌’ ಸಿನಿಮಾದಲ್ಲಿ ನವ ಪ್ರತಿಭೆಗಳಾದ ರಂಜಿತ್‌, ಸ್ಪಂದನಾ ಸೋಮಣ್ಣ ಜೋಡಿಯಾಗಿ ಕಾಣಿಸಿ ಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಧರ್ಮಣ್ಣ ಕಡೂರು, ರಘು ರಾಮನಕೊಪ್ಪ, ಅರುಣಾ ಬಾಲರಾಜ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ “ರಾಕ್ಷಸ ತಂತ್ರ’ ಎಂಬ ಹೊಸಬರ ಸಿನಿಮಾ ಕೂಡಾ ತೆರೆಕಾಣುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next