Advertisement
ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯಕ್ತ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ 11 ದಿನಗಳ ರಜೆ ಇರಲಿದೆ. ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ, 6 ಭಾನುವಾರ, 7 ಆಯುಧ ಪೂಜೆ, 8 ವಿಜಯದಶಮಿ, 12 ಎರಡನೇ ಶನಿವಾರ, 13 ಭಾನುವಾರ, 20 ಭಾನುವಾರ, 26 ನಾಲ್ಕನೇ ಶನಿವಾರ, 27 ನರಕ ಚತುರ್ದಶಿ, 28-29 ಬಲಿಪಾಡ್ಯಮಿ-ದೀಪಾವಳಿ ನಿಮಿತ್ತ ಬ್ಯಾಂಕುಗಳಿಗೆ ರಜೆಗಳಿವೆ. ಅಕ್ಟೋಬರ್ 6 ರಿಂದ 8ರವರೆಗೆ ಮೂರು ದಿನ ಹಾಗೂ 26ರಿಂದ 29ರವರೆಗೆ ಸತತ 4 ದಿನಗಳು ರಜೆ ಇರಲಿವೆ.
Related Articles
Advertisement
ರಜೆ ಸಂಸ್ಕೃತಿ ಈ ದೇಶಕ್ಕೆ ಇಂಗ್ಲೀಷರು ನೀಡಿ ಹೋದ ಕೊಡುಗೆ. ಅವರು ತಮ್ಮ ದೇಶದ ಧರ್ಮ ಮತ್ತು ಸಂಸ್ಕೃತಿಗೆ, ಜೀವನ ಶೈಲಿಗೆ ಅನುಗುಣವಾಗಿ ಅದನ್ನು ಈ ದೇಶದಲ್ಲಿ ಹುಟ್ಟುಹಾಕಿದರು. ಸ್ವಾತಂತ್ರ್ಯಾನಂತರ ಅದನ್ನು ನಮ್ಮ ಅವಶ್ಯಕತೆಗೆ ಮಾರ್ಪಡಿ ಸುವು ದನ್ನು ಬಿಟ್ಟು ರಜೆಗಳನ್ನು ಹೆಚ್ಚು ಮಾಡಲಾಯಿತು. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಐಟಿ ಕಂಪನಿಗಳು ಈ ದೇಶದಲ್ಲಿ ತಳ ಊರಿದ ಮೇಲೆ, ಈ ರಜೆಗಳ ಸಾಲಿಗೆ, ಐದು ದಿನಗಳ ವಾರ ಮತ್ತು ವಾರಾಂತ್ಯ ಎನ್ನುವ ಹೊಸ ಪರಿಕಲ್ಪನೆ ನುಸುಳಿದ್ದು, ರಜಾನಿಟ್ಟಿನಲ್ಲಿ ಗೊಂದಲ ಹೆಚ್ಚಾಗಿದೆ. ಈಗಾಗಲೇ ಬ್ಯಾಂಕುಗಳಲ್ಲಿ ಮತ್ತು ವಿಮಾ ಕಂಪನಿಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ರಜಾ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ “ಐದು ದಿನಗಳ ವಾರ’ ವಾಗುವ ಸಾಧ್ಯತೆಗಳು ಕಾಣುತ್ತಿವೆ. ರಜೆಗಳು ಒಂದು ರೀತಿಯಲ್ಲಿ ಸಮೂಹ ಸನ್ನಿ ಇದ್ದಂತೆ. ಇದು ಕ್ರಮೇಣ ಎಲ್ಲಾ ಇಲಾಖೆ ಕ್ಷೇತ್ರಗಳಿಗೆ ಹಬ್ಬುತ್ತಿದೆ. ರಜಾ-ಮಜಾ ಎನ್ನುವ ಹೊಸ ಟ್ರೆಂಡ್ ತ್ವರಿತಗತಿಯಲ್ಲಿ ಅರಳುತ್ತಿದೆ.
ಒಂದು ಸರ್ಕಾರಿ ಅಥವಾ ಬ್ಯಾಂಕ್ ನೌಕರನಿಗೆ ವರ್ಷದಲ್ಲಿ 52 ಭಾನುವಾರಗಳು, 12 ಎರಡನೇ ಶನಿವಾರ (ಬ್ಯಾಂಕುಗಳಿಗೆ ನಾಲ್ಕನೇ ಶನಿವಾರ ಬೇರೆ ರಜೆ), ಸುಮಾರು 25 ಸರ್ಕಾರಿ ರಜೆಗಳು, 12 ಸಾಂದರ್ಭಿಕ ರಜೆಗಳು ಸೇರಿ 113 ರಜೆಗಳು ಇರುತ್ತವೆ. ಇದನ್ನು ಬಿಟ್ಟು 30 ಹಕ್ಕಿನ ರಜೆಗಳು (privilege leave) ಮತ್ತು 30 ಅನಾರೋಗ್ಯದ ರಜೆಗಳು (Sick Leave) ಬೇರೆ. ನ್ಯಾಯವನ್ನು ಕೇಳಲು ಮತ್ತು ಅನ್ಯಾಯವನ್ನು ಪ್ರತಿಭಟಿಸಲು ನಡೆಸುವ ಮುಷ್ಕರ ಗಳು ಮತ್ತು ಬಂದ್‌ಗೆ ವರ್ಷದಲ್ಲಿ ಕನಿಷ್ಠ 3-4 ದಿನಗಳು ಬಲವಂತದ ರಜೆಗಳು. ಸೆಲೆಬ್ರಿಟಿಗಳ, ರಾಜಕೀಯ ಧುರೀಣರ ನಿಧನದ ನಿಮಿತ್ತ ಘೋಷಿಸುವ ಶೋಕದ ರಜೆಗಳು ವರ್ಷದಲ್ಲಿ ಕನಿಷ್ಠ 2-3 ಇರುತ್ತವೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ನೌಕರ ವರ್ಗದ ಕೆಲಸದ ದಿನಗಳ ನಿಜಲೆಕ್ಕ ಕಾಣುತ್ತದೆ. ಈ ದೇಶ ನಿರೀಕ್ಷೆಯಷ್ಟು ಅಭಿವೃದ್ಧಿ ಹೊಂದದಿರಲು, ಪ್ರಗತಿ ಕಾಣದಿರಲು ಜನಸಂಖ್ಯೆ, ಅನಕ್ಷ ರತೆ ಸಂಗಡ ಅನಿಯಂತ್ರಿತ ರಜೆಗಳೂ ಕಾರಣ ಎನ್ನುವ ಪ್ರಖ್ಯಾತ ನ್ಯಾಯವಾದಿ ನಾನಿ ಪಾಲಿವಾಲಾ, ಛಗಲಾ ಮತ್ತು ಹಿರಿಯ ಉದ್ಯಮ ಪಿತಾಮಹ ಟಾಟಾರವರ ಅನಿಸಿಕೆಗಳಿಗೆ ಅರ್ಥವಿದೆ.
ನೌಕರರಿಗೆ ಸಾಲು ಸಾಲು ರಜೆಯ ಬಗೆಗೆ ಜನಸಾಮಾನ್ಯರು ಅಕ್ರೋಶ ವ್ಯಕ್ತ ಮಾಡುತ್ತಿರುವಂತೆ, ಸರ್ಕಾರ ರಜೆಗಳನ್ನು ಕಡಿತ ಗೊಳಿಸಲು ಚಿಂತಿಸಿದರೂ, ನಮ್ಮ ವ್ಯವಸ್ಥೆಯಲ್ಲಿ ಒಮ್ಮೆ ನೀಡಿದ ಸೌಲಭ್ಯವನ್ನು ಅಷ್ಟು ಸುಲಭವಾಗಿ ಹಿಂತೆಗೆದುಕೊಳ್ಳುವುದು ಸುಲಭವಲ್ಲ. ಇದ ನ್ನು ತಿಳಿದು, ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಸಮಾಲೋಚನೆಯ ಹೆಸರಿನಲ್ಲಿ ಕಾಲನೂಕುತ್ತಿದೆ. ಹಬ್ಬಗಳು ಮತ್ತು ಜಯಂತಿಗಳು ಅತಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯಗಳಾಗಿದ್ದು, ಅವುಗಳ ತಂಟೆಗೆ ಹೋದರೆ ಸಾಮಾಜಿಕ ಕ್ಷೊಭೆ ಮತ್ತು ಆಕ್ರೋಶ ಎದುರಿಸಬೇಕಾಗುವುದೆಂದು ಈ ನಿಟ್ಟಿನಲ್ಲಿ ಮುಂದುವರೆಯುತ್ತಿಲ್ಲ. ಒಂದು ರೈಲು ಸ್ಟೇಷನ್‌ನಲ್ಲಿ ಕೆಲಕಾಲ ನಿಲುಗಡೆ ನೀಡಿ ಅಥವಾ ಒಂದು ಮಾರ್ಗದಲ್ಲಿ ಒಂದು ರೈಲನ್ನು ಕೆಲಕಾಲ ಓಡಿಸಿ, ನಂತರ ಕೆಲ ದಿನಗಳಲ್ಲಿ ಅದನ್ನು ನಿಲ್ಲಿಸಬಹುದೇ? ಈ ರಜೆಗಳೂ ಹಾಗೆಯೇ? ಈ ರಜೆಗಳ ರದ್ದತಿ ಸಮಸ್ಯೆಯನ್ನು ಪರಿಹಾರ ಮಾಡುವ ಬದಲಿಗೆ ಇನ್ನೊಂದು ಸಮಸ್ಯೆಯನ್ನು ಹುಟ್ಟು ಹಾಕುವ ಸಂಭವವೇ ಹೆಚ್ಚು. ರಜೆ ಕಡಿತ ಮಾಡಿದರೆ ಎಲ್ಲಾ ರಜೆಗಳಿಗೆ ಕತ್ತರಿ ಹಿಡಿಯಬೇಕು, ಇಲ್ಲದಿದ್ದರೆ ಈ ಪ್ರಕ್ರಿಯೆಯಿಂದ ದೂರ ಇರಬೇಕು ಎನ್ನುವ ರಾಜಕೀಯ ಸಂದಿಗ್ಧತೆಯಲ್ಲಿ ಸರ್ಕಾರ ಇದೆ. ಅಂತೆಯೇ ಇದ್ದ ರಜೆಗಳನ್ನು ಉಳಿಸಿಕೊಂಡು, ಹೊಸ ರಜೆಗಳನ್ನು ಸೇರ್ಪಡೆ ಮಾಡದಿರುವ ಎಚ್ಚರಿಕೆಯ ಆಟವನ್ನು ಸರ್ಕಾರ ಅಡಬೇಕಾಗುತ್ತದೆ.
ಭಾರತವು ವಿವಿಧ ಭಾಷೆ, ಧರ್ಮ, ಜಾತಿಗಳಿಂದ ಕೂಡಿದ ವೈವಿಧ್ಯಮಯ ದೇಶವಾಗಿದ್ದು, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಕೇವಲ 7-8 ಸಾರ್ವಜನಿಕ ರಜೆಗಳು ಎನ್ನುವ ಮಾನದಂಡವನ್ನು ಇಲ್ಲಿ ಅನ್ವಯಿಸುವುದು ಕಷ್ಟ ಸಾಧ್ಯ. ಯಾರನ್ನೂ ಬಿಡದೇ, ಎಲ್ಲರನ್ನೂ ಒಳಗೊಂಡು ಮುಂದೆ ಹೋಗುವಾಗ ಇಂಥ ಪರಿಸ್ಥಿತಿ ಅನಿವಾರ್ಯ ಎನ್ನುವ ರಾಜಕಾರಣಿ ಯೊಬ್ಬರ ಮಾತಿನಲ್ಲೂ ಅರ್ಥವಿದೆ.
ರಮಾನಂದ ಶರ್ಮಾ