Advertisement
ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜಗಜೀವನರಾಂ, ಜವಾಹರ್‌ಲಾಲ್ ನೆಹರು, ಲಾಲ್‌ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್, ನಿಜಲಿಂಗಪ್ಪ, ಕೆಂಗಲ್‌ಹನುಮಂತಯ್ಯ, ದೇವರಾಜ ಅರಸು ಸೇರಿ ಒಂಬತ್ತು ಪ್ರತಿಮೆಗಳು ವಿಧಾನಸೌಧ- ವಿಕಾಸಸೌಧ ಆವರಣದಲ್ಲಿ ರಾರಾಜಿಸುತ್ತಿವೆ. ಇದರ ಜತೆಗೆ ಇಂದಿರಾಗಾಂಧಿ, ರಾಜೀವ್‌ಗಾಂಧಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ನೀಲಂ ಸಂಜೀವರೆಡ್ಡಿ ಪ್ರತಿಮೆಗಳನ್ನೂ ಸ್ಥಾಪನೆ ಮಾಡಬೇಕು ಎಂಬ ಒತ್ತಾಯ ಹಾಗೂ ಬೇಡಿಕೆಯೂ ಇದೆ. ಇದರ ಜತೆಯಲ್ಲೇ ಇಷ್ಟು ದಿನ ವಿಧಾನಸೌಧ -ವಿಕಾಸಸೌಧ ಆವರಣಕ್ಕೆ ಸೀಮಿತವಾಗಿದ್ದ ಪ್ರತಿಮೆಗಳ ಸಾಮ್ರಾಜ್ಯ ಇದೀಗ ಶಾಸಕರ ಭವನ ಆವರಣಕ್ಕೂ ವ್ಯಾಪಿಸಿದೆ.
ಇಲ್ಲೂ ಇದೀಗ ಬುದ್ಧ, ಬಸವಣ್ಣ, ಮಹಾವೀರ, ಕನಕದಾಸ, ಪುರಂದರ ದಾಸ, ಕುವೆಂಪು ಪ್ರತಿಮೆಗಳು ಅನಾವರಣ ಮಾಡಬೇಕು ಎಂಬ ಬೇಡಿಕೆಯೂ ಇದೆ. ಈ ಮೊದಲು ಅಂಬೇಡ್ಕರ್, ನೆಹರು, ಬೋಸ್, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಪ್ರತಿಮೆಗಳು ಮಾತ್ರ ಇದ್ದವು. ಗಾಂಧಿ, ದೇವರಾಜ ಅರಸು, ವಾಲ್ಮೀಕಿ ಪ್ರತಿಮೆಗಳು ಇತ್ತೀಚೆಗೆ ಸೇರ್ಪಡೆಯಾಗಿವೆ. ಜಾತಿ, ಸಮುದಾಯದ ಬೇಡಿಕೆ, ರಾಜಕೀಯ ಪಕ್ಷಗಳ ಬೇಡಿಕೆಗೆ ಮಣಿದು ಇದೇ ರೀತಿ ಪ್ರತಿಮೆಗಳು ಸೇರ್ಪಡೆಯಾಗುತ್ತಲೇ ಇದ್ದರೆ ಮುಂದೊಂದು ದಿನ ಪ್ರತಿಮೆಗಳ ನಡುವೆ ವಿಧಾನಸೌಧ-ವಿಕಾಸಸೌಧ
ಹುಡುಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ವಿವಾದದ ಕೇಂದ್ರಬಿಂದು: ವಿಧಾನಸೌಧ- ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆಯಂತೂ ವಿವಾದಟ ಕೇಂದ್ರ
ಬಿಂದು ಆಗಿತ್ತು. ಗಾಂಧಿಪ್ರತಿಮೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ವಿಧಾನಪರಿಷತ್‌ನಲ್ಲೂ ಇದು ಪ್ರಸ್ತಾಪವಾಯಿತು. ಸುಮಾರು 12 ಕೋಟಿ ರೂ. ವೆಚ್ಚದ ಈ ಪ್ರತಿಮೆ ವಿಧಾನಸೌಧ-ವಿಕಾಸಸೌಧ ಆವರಣದಲ್ಲಿರುವ ಎಲ್ಲ ಪ್ರತಿಮೆಗಳಿಗಿಂತ ಅತಿ ಹೆಚ್ಚು “ಮೌಲ್ಯ’ದ ಪ್ರತಿಮೆಯೂ ಹೌದು.
Related Articles
ವಿಧಾನಸೌಧ-ವಿಕಾಸಸೌಧ ಆವರಣದಲ್ಲಿ ಒಂದು ಪ್ರತಿಮೆ ಸ್ಥಾಪನೆಗೆ ಕನಿಷ್ಠ 2500 ಚದರಡಿ ಹಸಿರು ಮಾಯ ವಾಗುತ್ತದೆ. ಪ್ರತಿಮೆ ಕೂರಿಸಲು ಅಗತ್ಯ ವಾದ ಕಾಂಕ್ರಿಟ್ ತಳಹದಿ ನಿರ್ಮಾಣ ಕೆಳಗೆ ಕಲ್ಲು ಹಾಸು ಸೇರಿ ಇಷ್ಟು ಜಾಗ ಕಾಂಕ್ರೀಟ್‌ಮಯವಾಗುತ್ತದೆ. ಹೀಗಾಗಿ, ಅಲ್ಲಿ ನೀರು ಇಂಗಲು ಅವಕಾಶ ಇರದು. ಹೀಗಾಗಿ, ಪ್ರತಿಮೆಗಳು ಬಂದಷ್ಟೂ ಹಸಿರು ಕರಗುವಂತಾಗಿದೆ.
Advertisement