Advertisement
ಪಂಜ ಮೆಸ್ಕಾಂ ವ್ಯಾಪ್ತಿಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್ ಲೆ„ನ್ಗೆ ತಾಗುತ್ತಿದ್ದ ಮರದ ಗೆಲ್ಲು ತೆರವು ಮಾಡಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಯಾರೂ ಕೂಡ ಆಫ್ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಬಳಿಕ ಕೆಲಸ ನಿರ್ವಹಿಸಲು ತೆರಳಿದ್ದು. ಅದೇ ವೇಳೆಗೆ ಅಲ್ಲೇ ಸಮೀಪದ ರೂಂನಲ್ಲಿದ್ದ ರಬ್ಬರ್ ಟ್ಯಾಪರ್ ಕೆಲಸ ನಿರ್ವಹಿಸುವ ಯುವಕನೋರ್ವ ಚಾರ್ಜ್ ಮಾಡಲು ಯತ್ನಿಸಿದ್ದು, ಈ ವೇಳೆ ಜೆಒಸಿ ಉಪಕರಣದ ಬೋಲ್ಟ್ ತುಂಡಾಗಿ ವಿದ್ಯುತ್ ಪ್ರವಹಿಸಲು ಕೆ ಇಂಚು ಬಾಕಿ ಉಳಿದ ಕಾರಣ ಬಾರೀ ದುರಂತವೊಂದು ತಪ್ಪಿದೆ. ಕೆಲ ಸಮಯದ ಬಳಿಕ ಘಟನೆ ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ಬಂದಿದ್ದು, ಅವರು ಸಮೀಪದ ಸಿಸಿ ಕೆಮರಾ ಪರಿಶೀಲನೆ ವೇಳೆ ಅಲ್ಲಿನ ಯುವಕನ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಯುವಕನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ಮುಚ್ಚಲಿಕೆ ಬರೆಸಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. Advertisement
Sullia: ವಿದ್ಯುತ್ ಲೈನ್ ದುರಸ್ತಿ ವೇಳೆ ಲೈನ್ ಚಾರ್ಜ್ ಮಾಡಲು ಯತ್ನ ತಪ್ಪಿದ ದುರಂತ
10:06 PM May 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.