ಸಾಮಾಜಿಕ ಜಾಲತಾಣವೊಂದು ಎಷ್ಟರ ಮಟ್ಟಿಗೆ ಪರೋಪಕಾರಿ ಅಥವಾ ಅಪಾಯಕಾರಿಯಾಗಿದೆ ಅನ್ನುವುದು ಬಳಕೆಯ ಮೇಲೆ ಅವಲಂಬಿಸಿದೆ. ಯುವ ಸಮುದಾಯವಂತು ಅತಿ ಹೆಚ್ಚು ಬಳಸುವ ಮಾಧ್ಯವೆಂದರೆ ಅದು ಸಾಮಾಜಿಕ ಜಾಲ ತಾಣಗಳು. ಅನೇಕ ಅವಘಡಗಳಿಗೆ ಕಾರಣವಾಗುವ ಮೊದಲು ಹೆತ್ತವರೇ ಮಕ್ಕಳನ್ನು ಇದರಿಂದ ನಿಯಂತ್ರಿಸುವ ಅಗತ್ಯವಿದೆ.
ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಮಯ ಕಳೆಯಬೇಕು ಅನ್ನುವುದ್ನು ನಿಗದಿಪಡಿಸಿ ಬರೆದಿಡಿ. ಆಮೇಲೆ ಪ್ರತಿದಿನ ನೀವೆಷ್ಟು ಸಮಯ ಕಳೆಯುತ್ತಿದ್ದೀರೆಂದು ದಾಖಲೆ ಇಡಿ. ನೀವು ನಿಗದಿಪಡಿಸಿದ್ದ ಸಮಯಕ್ಕೆ ಅಂಟಿಕೊಳ್ಳುತ್ತಿದ್ದೀರಾ ಎಂದು ಒಂದು ತಿಂಗಳ ನಂತರ ನೋಡಿ.
ಗ್ರೋನ್ ಅಪ್ ಡಿಜಿಟಲ್ ಎಂಬ ಪುಸ್ತಕದಲ್ಲಿ ಲೇಖಕ ಡಾನ್ ಟ್ಯಾಪ್‌ಸ್ಕಾಟ್ ಬರೆದದ್ದು: ‘ಇಂಟರ್‌ನೆಟ್‌ನ ವಿಪರ್ಯಾಸಗಳಲ್ಲಿ ಒಂದೇನೆಂದರೆ, ಯಾವುದೊ ಕಾರ್ಯದ ನಿಮಿತ್ತ ದೂರದ ಕುಟುಂಬ ಸದಸ್ಯರೊಂದಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಿಕೊಡುವ ಇಂಟರ್‌ನೆಟ್ ಆ ಸದಸ್ಯರು ಮನೆಯಲ್ಲಿ ನಿಮ್ಮೊಟ್ಟಿಗೇ ಇರುವಾಗ ಅವರಿಂದ ನಿಮ್ಮನ್ನು ದೂರವಿಡಬಲ್ಲದು’
ಸಾಮಾಜಿಕ ಜಾಲತಾಣ ಬಳಕೆ ಗೀಳು ಆಗಿಬಿಡುತ್ತದೆ. ಪೋಸ್ಟ್ ಗಳಿಗೆ ಯಾರೆಲ್ಲ, ಏನೆಲ್ಲ ಜವಾಬು ಕೊಟ್ಟಿದ್ದಾರೆಂದು, ಅವರಿಗೆಲ್ಲ ಉತ್ತರ ಕೊಡಲು, ಅವರು ಅಪ್‌ಲೋಡ್ ಮಾಡಿರುವ ಫೋಟೋ ನೋಡುವ ಚಟ ಬೆಳೆದು ಅಪಾಯಕಾರಿ ಆಗಿ ಬಿಡಬಹುದು.
•ಕಿರಣ್ ಕುಂಡಡ್ಕ