Advertisement

ಮನೆಗೆ ಸಿಡಿಲು ಬಡಿದು ಅಪಾರ ನಷ್ಟ

08:45 PM May 01, 2019 | Team Udayavani |

ನೆಲಮಂಗಲ: ಪಟ್ಟಣದ ಸುಭಾಷ್‌ನಗರದ ಕೇಶವಶೆಟ್ಟಿ ಬಡಾವಣೆಯ ನಾರಾಯಣರಾವ್‌ ಮನೆಗೆ ಮಂಗಳವಾರ ತಡರಾತ್ರಿ ಸುರಿದ ಭಾರಿಮಳೆಯ ವೇಳೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ.

Advertisement

ಮಳೆಯ ಜೊತೆ ಬೀಸುತ್ತಿದ್ದ ಬಿರುಗಾಳಿಯನ್ನು ಕಂಡು ಜನರು ಭಯಭೀತರಾಗಿ ಮನೆ ಸೇರಿದ್ದರು. ಇದೇ ಸಂದರ್ಭದಲ್ಲಿ ಮಿಂಚಿನಂತೆ ಮನೆಗೆ ಬಡಿದ ಸಿಡಿಲು ಮನೆಯ ಮಂದಿ ಸೇರಿದಂತೆ ಬಡಾವಣೆಯ ಜನರು ಬೆಚ್ಚಿಬೀಳುವಂತೆ ಮಾಡಿದೆ.

ಬಿರುಕುಬಿಟ್ಟ ಗೋಡೆಗಳು: ಕೇಶವಶೆಟ್ಟಿ ಬಡಾವಣೆಯ ನಿವೃತ್ತ ಶಿಕ್ಷಕ ನಾರಾಯಣರಾವ್‌ ಅವರ ಮೂರು ಮಹಡಿಯ ಮನೆಗೆ ರಾತ್ರಿ ಬಡಿದ ಸಿಡಿಲಿನಿಂದಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ಮೇಲಿನ ನೀರಿನ ಟ್ಯಾಂಕ್‌, ಪೈಪ್‌ಗ್ಳಿಗೆ ಅಪಾರ ಹಾನಿಯಾಗಿದೆ.

ಮನೆಯೊಳಗಿನ ಎಲ್ಲಾ ವಿದ್ಯುತ್‌ ಬಲ್ಪ್ಗಳು ಕ್ಷಣಾರ್ಧದಲ್ಲಿ ಪುಡಿಪುಡಿಯಾಗಿವೆ. ಮನೆಯ ಒಂದನೇ ಮತ್ತು ಎರಡನೇ ಮಹಡಿಯಲ್ಲಿ ಬಾಡಿಗೆ ಮನೆಯವರಿದ್ದು, ಸಿಡಿಲು ಬಡಿದ ಮೂರನೇ ಮಹಡಿಯಲ್ಲಿ ಸರಕುಗಳನ್ನು ಸಂಗ್ರಹಣೆ ಮಾಡಿದ್ದರು. ಸ್ವಲ್ಪದರಲ್ಲಿಯೇ ಸಂಭವಿಸಬಹುದಾದ ಪ್ರಾಣಹಾನಿ ತಪ್ಪಿದಂತಾಗಿದೆ.

ಆತಂಕಗೊಂಡ ಜನತೆ: ಮೂರನೇ ಮಹಡಿಯಲ್ಲಿ ಯಾರೂ ವಾಸವಿಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಡಿಲು ಬಡಿದ ತಕ್ಷಣ ಹೆಚ್ಚು ಶಬ್ದ ಹಾಗೂ ಬೆಳಕು ರಾಚಿದ ಪರಿಣಾಮ ಸುತ್ತಮುತ್ತಲ ಜನರು ಆತಂಕಕ್ಕೆ ಒಳಗಾಗಿದ್ದೆವು ಎನ್ನುತ್ತಾರೆ ಬಡಾವಣೆಯ ನಿವಾಸಿ ಮಿಲಿó ಮೂರ್ತಿ.

Advertisement

ಅಪಾರ ಹಾನಿ: ಸಿಡಿಲು ಬಡಿದ ಮನೆಯಲ್ಲದೇ ಅಕ್ಕಪಕ್ಕದಲ್ಲಿದ್ದ ಬಡಾವಣೆಯ ಸುಮಾರು 30ಕ್ಕೂ ಹೆಚ್ಚು ಮನೆಗಳಲ್ಲಿನ 25 ಟಿ.ವಿ.ಗಳು, 3 ಫ್ಯಾನ್‌, 10 ರೆಫ್ರಿಜಿರೇಟರ್‌, 4ಯುಪಿಎಸ್‌, 1ಬೋರ್‌ವೆಲ್‌, 50ಕ್ಕೂ ಹೆಚ್ಚು ಬಲ್ಪ್ಗಳಿಗೆ ಹಾನಿಗೊಳಗಾಗಿದೆ. ಸಿಡಿಲು ಬಡಿದ ಸಮಯದಲ್ಲಿ ವಿದ್ಯುತ್‌ ಸಂಪರ್ಕ ಖಡಿತವಾಗಿಲ್ಲದ ಕಾರಣ ವಿದ್ಯುತ್‌ ಉಪಕರಣಗಳಿಗೆ ಬಹಳಷ್ಟು ಹಾನಿಯಾಗಿದೆ ಎನ್ನಲಾಗಿದೆ.

ಹೆದರಿದ ಜನರು: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದ್ದು, ಮನೆಗೆ ಸಿಡಿಲು ಬಡಿದ ವೇಳೆಯಲ್ಲಿ ಬಡಾವಣೆಯ ಜನರು ಎಚ್ಚರವಾಗಿದ್ದರಿಂದ ಬೆಳಕು ಮತ್ತು ಶಬ್ದದಿಂದ ಮಕ್ಕಳು ಹೆಚ್ಚು ಹೆದರಿದ್ದಾರೆ. ಅಲ್ಲದೇ, ನಿವಾಸಿಗಳು ಭಯಭೀತರಾಗಿದ್ದೆವು. ಆ ಸಮಯದಲ್ಲಿ ಆಕಾಶವೇ ಕೆಳಗೆ ಬಿತ್ತು ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು ಎಂದು ಸ್ಥಳೀಯ ಬೈರೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next