Advertisement

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿ

07:43 PM Oct 11, 2020 | sudhir |

ಹನೂರು(ಚಾಮರಾಜನಗರ): ಸಾರ್ವಜನಿಕರು ಮತ್ತು ಭಕ್ತಾದಿಗಳ ಪ್ರವೇಶ ನಿಷೇಧ ಮತ್ತು ಸರಳ ಸಾಂಪ್ರದಾಯಿಕ ದಸರಾ ಆಚರಣೆ ಮಧ್ಯೆಯೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿ ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

Advertisement

ಸರಳ ದಸರಾ ಜಾತ್ರಾ ಮಹೋತ್ಸವ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದಸರಾ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರುತಿತ್ತು. ಆದರೆ ಈ ಬಾರಿ ಕೊರೋನಾ ಮಹಾಮಾರಿಯ ಕರಿಛಾಯೆ ಆವರಿಸಿರುವುದರಿಂದ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ದಸರಾಜಾತ್ರಾ ಮಹೋತ್ಸವದ ದಿನಗಳು, ಅಮಾವಾಸ್ಯೆ ಮತ್ತು ಎಣ್ಣೆಮಜ್ಜನ ದಿನಗಳಲ್ಲಿ ಭಕ್ತಾದಿಗಳಿಗೆ ದಶ್ಣವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ;ಮಲಪ್ರಭ ನದಿಯಲ್ಲಿ ಕೊಚ್ಚಿಹೋದ ರೈತ : ದೇಹ ಪತ್ತೆಗೆ ರಕ್ಷಣಾ ತಂಡದಿಂದ ಕಾರ್ಯಾಚರಣೆ

ಭಕ್ತಾದಿಗಳಿಗಾಗಿ ಸಕಲ ವ್ಯವಸ್ಥೆ: ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಭಕ್ತಾದಿಗಳಿಗೆ ಮುಡಿಸೇವೆ ಮತ್ತು ಅಂತರಗಂಗೆಯಲ್ಲಿ ಪವಿತ್ರ ಸ್ನಾನವನ್ನು ನಿಷೇಧಿಸಿ ಬೃಹತ್ ಶೌಚಾಲಯಗಳಲ್ಲಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ರಾತ್ರಿ ತಂಗುವಿಕೆಯನ್ನೂ ನಿಷೇಧಿಸಲಾಗಿದೆ.ಭಾನುವಾರ, ಸೋಮವಾರ ಮತ್ತು ಇನ್ನಿತರ ರಜಾ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ದರ್ಶನ ಪಡೆಯುವ ಭಕ್ತಾದಿಗಳಿಗಾಗಿ ರೂ.501ರ ವಿಶೇಷ ದರ್ಶನ ಕಲ್ಪಿಸಲಾಗಿದ್ದು ಟಿಕೇಟ್ ಪಡೆದ ಭಕ್ತಾದಿಗಳಿಗಾಗಿ ಪ್ರವೇಶ ದ್ವಾರ 4 ಮೂಲಕ ದೇವಾಲಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪೆಟ್ರೋಲ್ ಬಂಕ್, ಮಾಹಿತಿ ಕೇಂದ್ರ, ಅಂಗಡಿಗಳು, ಲಾಡು ಮಾರಾಟ ಕೇಂದ್ರ ಮತ್ತು ದಾಸೋಹ ಕೌಂಟರ್‍ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

ಶ್ರೀ ಕ್ಷೇತ್ರದಲ್ಲಿ ರಾತ್ರಿ ತಂಗುವಿಕೆ, ಮುಡಿಸೇವೆ, ಅಂತರಗಂಗೆ ಸ್ನಾನಕ್ಕೆ ನಿಷೇಧ ಹೇರಲಾಗಿದೆ. ಭಕ್ತಾದಿಗಳು ಗುಂಪುಗೂಡುವುದನ್ನು ನಿಷೇಧಿಸಿದ್ದು ಈ ಹಿನ್ನೆಲೆ ಪೊಲೀಸ್ ಠಾಣೆಯ ಮುಂಭಾಗದಿಂದ ರಂಗಮಂದಿರ ಪ್ರವೇಶಿಸಿ ದರ್ಶನ ಪಡೆಯಲು ಸಕಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
– ಜಯವಿಭವಸ್ವಾಮಿ, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.

Advertisement

Udayavani is now on Telegram. Click here to join our channel and stay updated with the latest news.

Next