Advertisement

ಚಾರ್ಮಾಡಿಯಲ್ಲಿ ಲಘು ವಾಹನ ಸಂಚಾರ

11:13 PM Sep 15, 2019 | Lakshmi GovindaRaju |

ಮಂಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಲಘುವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಮುಂದಿನ ತಿಂಗಳ 14ರ ವರೆಗೆ ಎಲ್ಲ ರೀತಿಯ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಆದೇಶ ನೀಡಿದ್ದಾರೆ.

Advertisement

ಸೆ.15ರಿಂದ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾರು, ಜೀಪು, ಟೆಂಪೋ, ವ್ಯಾನ್‌, ಎಲ್‌ಸಿವಿ (ಮಿನಿ ವ್ಯಾನ್‌) ದ್ವಿಚಕ್ರ ವಾಹನಗಳು ಮತ್ತು ಆ್ಯಂಬುಲೆನ್ಸ್‌ಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಲಘು ವಾಹನಗಳು ತಾಸಿಗೆ 20 ಕಿ.ಮೀ. ವೇಗ ಮೀರದಂತೆ ಎಚ್ಚರಿಕೆಯಿಂದ ಚಲಿಸಲು ಸೂಚಿಸಲಾಗಿದೆ. ಈ ಭಾಗದಲ್ಲಿ ಪೊಟೋಗ್ರಫಿ ಮತ್ತು ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next