Advertisement

ದೆಹಲಿ ಸುತ್ತಮುತ್ತ ಸುರಿದ ಮಳೆಗೆ ವಾಯುಗುಣಮಟ್ಟ ಸುಧಾರಣೆ

09:51 AM Dec 13, 2019 | Hari Prasad |

ನವದೆಹಲಿ: ಕಳೆದ ಕೆಲವು ಸಮಯಗಳಿಂದ ವಾಯುಗುಣಮಟ್ಟ ಕುಸಿತ ಕಂಡು ಬಾರೀ ಬಾಧೆಪಟ್ಟಿದ್ದ ದೆಹಲಿಗರಿಗೆ ಇಂದು ಸುರಿದ ಮಳೆ ಸ್ವಲ್ಪ ಸಮಾಧಾನ ತಂದಿದೆ. ಗುರುವಾರ ಸಾಯಂಕಾಲ ರಾಷ್ಟ್ರರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ಉಷ್ಣತೆ ತಗ್ಗಿ ತಂಪು ವಾತಾವರಣ ನಿರ್ಮಾಣವಾಯಿತು. ಇಷ್ಟು ಮಾತ್ರವಲ್ಲದೇ ವಾಯುಗುಣಮಟ್ಟ ಸೂಚ್ಯಂಕವೂ ಸಹ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿದೆ.

Advertisement

ಹಿಮಾಲಯ ಭಾಗದ ವಿವಿಧ ಕಡೆಗಳಲ್ಲಿ ಹಿಮಪಾತವಾಗುತ್ತಿರುವ ಕಾರಣದಿಂದ ಇನ್ನೂ ಕೆಲವು ದಿನಗಳವರೆಗೆ ಚಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದಾಗಿ ವಾಯುಗುಣಮಟ್ಟ ಸೂಚ್ಯಂಕವು 150ಕ್ಕೆ ಇಳಿಕೆಯಾಗಿದೆ.

ಇಂದು ಬೆಳಿಗ್ಗೆ ದೆಹಲಿ ಭಾಗದಲ್ಲಿ ವಾಯುಗುಣಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟ 350 ಅಂಕಗಳಲ್ಲಿತ್ತು. ಈ ವಾರಪೂರ್ತಿ ದೆಹಲಿ ವಾಯುಗುಣಮಟ್ಟ ಸೂಚ್ಯಂಕ 150-180 ಅಂಕಗಳಲ್ಲೇ ಇರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಆದರೆ ಮುಂದಿನ ವಾರದ ಪ್ರಾರಂಭದಲ್ಲಿ ವಾಯುಗುಣಮಟ್ಟ ಸುಧಾರಿಸುವ ಲಕ್ಷಣಗಳಿವೆ ಎಂಬ ಆಶಾದಾಯಕ ಮಾಹಿತಿಯೂ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next