Advertisement
ಚತುಷ್ಪಥ ಹೆದ್ದಾರಿ ಕಾಮಗಾರಿಯು ಮಣಿಪಾಲದ ಟೈಗರ್ ಸರ್ಕಲ್ ಮತ್ತು ಎಂಐಟಿ ನಡುವೆ ಪ್ರಗತಿಯಲ್ಲಿದ್ದು, ಮಣ್ಣು ತುಂಬಿಸಿದ ರಸ್ತೆ ಕೆಸರಾಗಿದ್ದರಿಂದ ಹತ್ತಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳು ನಿಯಂತ್ರಣ ಸಿಗದೆ ಉರುಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಮಡ್ಕ, ಚೊಕ್ಕಾಡಿ, ಪಂಜ ಭಾಗಗಳಲ್ಲಿಯೂ ತುಂತುರು ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಂಗಳವಾರ ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು.
ಕರಾವಳಿಯಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದ್ದು, ಮಂಗಳವಾರ 37 ಡಿ.ಸೆ. ತಲುಪಿತ್ತು. ನವೆಂಬರ್ ತಿಂಗಳಿನಲ್ಲಿ 10 ವರ್ಷಗಳಲ್ಲಿ ದಾಖಲಾದ ಅತೀ ಹೆಚ್ಚಿನ ಉಷ್ಣಾಂಶ ಇದು. ಕರಾವಳಿಯಲ್ಲಿ ನವೆಂಬರ್‌ನಲ್ಲಿ ಆಗಾಗ ಹಿಂಗಾರು ಮಳೆಯಾಗುವುದರಿಂದ ಈ ರೀತಿಯ ಸುಡು ಬಿಸಿಲು ಇರುವುದಿಲ್ಲ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಹೆಚ್ಚುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ 2008ರ ನ.3ರಂದು 36.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಕಳೆದ ವರ್ಷ ನ.11ರಂದು 36.4 ಡಿ.ಸೆ. ದಾಖಲಾಗಿತ್ತು.
Related Articles
Advertisement