Advertisement

ಲೈಟ್‌ ಆನ್‌, ಗಾಡಿ ಆಫ್ 2ನೇ ಹಂತ

03:01 PM Nov 20, 2021 | Team Udayavani |

ಹೊಸದಿಲ್ಲಿ: ಹೊಸದಿಲ್ಲಿ ವಾಯು ಗುಣಮಟ್ಟ ಸತತ 6ನೇ ದಿನವೂ “ಅತ್ಯಂತ ಕಳಪೆ’ ಕೆಟಗರಿ­ಯಲ್ಲಿ ಮುಂದುವರಿದಿದ್ದು, ಶುಕ್ರವಾರ ಈ ಸೂಚ್ಯಂಕ 332ಕ್ಕೆ ತಲುಪಿದೆ.

Advertisement

ವಾಹನಗಳ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸದಿಲ್ಲಿಯ ಆಮ್‌ ಆದ್ಮಿ ಸರಕಾರ “ರೆಡ್‌ ಲೈಟ್‌ ಆನ್‌, ಗಾಡಿ ಆಫ್’ ಅಭಿಯಾನದ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ಕೊಟ್ಟಿದೆ. ಅಲ್ಲದೇ ಸಮ-ಬೆಸ ಯೋಜನೆ­ಯನ್ನೂ ಮರು ಜಾರಿ ಮಾಡಲು ನಿರ್ಧರಿಸಿದೆ.

ನಗರದ 100 ಕ್ರಾಸಿಂಗ್‌ನಲ್ಲಿ ಈ ಅಭಿ­ಯಾನ ಆರಂಭವಾಗಿದೆ. ಐಟಿಒ ಕ್ರಾಸಿಂಗ್‌ಗೆ ಶುಕ್ರವಾರ ಭೇಟಿ ನೀಡಿದ ಹೊಸದಿಲ್ಲಿ ಪರಿಸರ ಸಚಿವ ಗೋಪಾಲ್‌ ರಾಯ್‌, ಈ ಅಭಿ­ಯಾನಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಮಾಲಿನ್ಯದ ವಿರುದ್ಧ ಹೋರಾಡು­ವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.

“ಪ್ರತೀ ದಿನ ಒಬ್ಬ ವ್ಯಕ್ತಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸರಾಸರಿ 20-25 ನಿಮಿಷಗಳ ಕಾಲ ಇಂಧನ ವ್ಯಯಿಸುತ್ತಾನೆ. ಇದು ಕೂಡ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಹೀಗಾಗಿ, ಟ್ರಾಫಿಕ್‌ನಲ್ಲಿ ಕೆಂಪು ದೀಪ ಉರಿದಾಗ, ಎಲ್ಲರೂ ವಾಹನಗಳನ್ನು ಸಂಪೂರ್ಣವಾಗಿ ಆಫ್ ಮಾಡುವ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಭಿಯಾ­ನದ ಉದ್ದೇಶ’ ಎಂದು ರಾಯ್‌ ಹೇಳಿದ್ದಾರೆ.

ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ

Advertisement

ನಾಸಾ ಉಪಗ್ರಹದಲ್ಲಿ ಸೆರೆ: ನ.11ರಂದು ನಾಸಾದ ಸುವೋಮಿ ಎನ್‌ಪಿಪಿ ಉಪಗ್ರಹವು ಸೆರೆಹಿಡಿ­ದಿರುವ ಚಿತ್ರಗಳಲ್ಲಿ ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಏಳುವ ಹೊಗೆಯು ಹೊಸದಿಲ್ಲಿಯತ್ತ ಸಂಚರಿಸುವುದು ದಾಖಲಾ­ಗಿದೆ. ಉಪಗ್ರಹದಲ್ಲಿನ “ವಿಸಿಬಲ್‌ ಇನ್‌ಫ್ರಾರೆಡ್‌ ಇಮೇಜಿಂಗ್‌ ರೇಡಿಯೋ­ಮೀಟರ್‌ ಸೂಟ್‌’ (ವಿಐಐಆರ್‌ಎಸ್‌) ಮೂಲಕ ಈ ಚಟು ವಟಿಕೆಯನ್ನು ಪತ್ತೆಹಚ್ಚಲಾಗಿದೆ. ಇದು ಸಮುದ್ರ ಮತ್ತು ಭೂಪ್ರದೇಶದಲ್ಲಿನ ತಾಪ ಮಾನ ಬದಲಾವಣೆ ಹಾಗೂ ಬೆಂಕಿಯ ಚಟುವಟಿಕೆಯನ್ನು ಪತ್ತೆಹಚ್ಚುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next