Advertisement

‘ಊಟ ನಮ್ದು ಅಷ್ಟೇ… ಎಣ್ಣೆ ಈಗಿಲ್ಲ!’ ; BSY ಪತ್ರಿಕಾಗೋಷ್ಠಿಯಲ್ಲೊಂದು ರಸನಿಮಿಷ

09:06 AM Apr 03, 2020 | Hari Prasad |

ಬೆಂಗಳೂರು: ರಾಷ್ಟ್ರಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ರಾಜ್ಯದಲ್ಲೂ ಸಹ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಾಗಿಲು ಹಾಕಿಕೊಂಡಿವೆ.

Advertisement

ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿರುವ ಬಾರ್ ಮತ್ತು ವೈನ್ ಶಾಪ್ ಗಳು. ಇವುಗಳು ಬಂದ್ ಆಗಿರುವುದರಿಂದ ಎಣ್ಣೆಪ್ರಿಯರಿಗೆ ಬಹಳ ನಿರಾಶೆಯಾಗಿದೆ. ಎಲ್ಲಿಯವರೆಗೆ ಅಂದರೆ ಎಣ್ಣೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿ ಕೆಲವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ವರದಿಯಾಗಿವೆ.

ಈ ಹಿನ್ನಲೆಯಲ್ಲಿ, ವಿಧಾನ ಸೌಧದದಲ್ಲಿ ಬುಧವಾರ ನಡೆದಿದ್ದ ಮುಖ್ಯಮಂತ್ರಿಗಳ ಸಭೆಯ ಮುಕ್ತಾಯದಲ್ಲಿ ಪತ್ರಕರ್ತರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಈ ಕುರಿತಾಗಿ ಪ್ರಶ್ನಿಸಿದರು. ಪತ್ರಕರ್ತರ ಪ್ರಶ್ನೆ ಬಿ.ಎಸ್.ವೈ. ಅವರಿಗೆ ಅರ್ಥವಾಗದೇ ಇದ್ದಾಗ ಅವರ ಪಕ್ಕದಲ್ಲಿ ಇದ್ದ ಆರ್. ಆಶೋಕ್ ಅವರು ಮುಖ್ಯಮಂತ್ರಿಗಳಿಗೆ ಕೈ ಸನ್ನೆ ಮೂಲಕ ‘ಎಣ್ಣೆ.. ಎಣ್ಣೆ..’ ಎಂದು ತೋರಿಸಿದ್ದಾರೆ. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಬಿ.ಎಸ್.ವೈ. ಅವರು ‘ಎಣ್ಣೆ ಬೇಕು ಅನ್ನುವವರು ಎಪ್ರಿಲ್ 14ರವರೆಗೆ ಕಾಯಬೇಕು…’ ಎಂದು ಹೇಳಿ ನಗುತ್ತಾ ಅಲ್ಲಿಂದ ನಿರ್ಗಮಿಸಿದ್ದಾರೆ.

ಬಳಿಕ ಪಕ್ಕದಲ್ಲೇ ಇದ್ದ ಸಚಿವ ಆರ್. ಅಶೋಕ್ ಅವರು ‘ಊಟ ನಮ್ದು ಅಷ್ಟೇ, ಎಣ್ಣೆ ಮಾತ್ರ ಇಲ್ಲ’ ಎಂದು ಕನ್ನಡ ಚಿತ್ರದ ಹಾಡೊಂದರ ಟೋನ್ ನಲ್ಲಿ ಹೇಳುತ್ತಾರೆ. ಒಟ್ಟಿನಲ್ಲಿ ಎಣ್ಣೆ (ಮದ್ಯದ) ವಿಷಯ ವಿಧಾನ ಸೌಧದಲ್ಲೂ ಪ್ರತಿಧ್ವನಿಸಿ ಅಲ್ಲಿದ್ದ ಬಿಗುವಿನ ವಾತಾವರಣವನ್ನು ಸ್ವಲ್ಪ ಲಘುವಾಗಿಸಿತು..

Advertisement

Udayavani is now on Telegram. Click here to join our channel and stay updated with the latest news.

Next