ಮಲ್ಪೆ: ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಉಲ್ಲಂ ಸಿ ಅನಧಿಕೃತವಾಗಿ ಮೀನುಗಾರಿಕೆ ಮಾಡುತ್ತಿರುವ ಪಸೀìನ್ ಮೀನುಗಾರರ ವಿರುದ್ದ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಮೀನುಗಾರಿಕೆ ನಿರ್ದೇಶನಾಲಯ ಬೆಂಗಳೂರಿಗೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಮಲ್ಪೆ ಮೀನುಗಾರಕೆ ಉಪನಿರ್ದೇಶಕ ಪಾರ್ಶ್ವನಾಥ್
ತಿಳಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನ ಮಧ್ಯಾಂತರ ತೀರ್ಪನ್ನು ಉಲ್ಲಂಘಿಸಿ ಮಲ್ಪೆ ಬಂದರಿನಲ್ಲಿ ಪಸೀìನ್ ಬೋಟಿನವರು ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್ ಮೀನುಗಾರರು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಉಪಾಧ್ಯಕ್ಷ ಆನಂದ ಅಮೀನ್, ಕಾರ್ಯದರ್ಶಿ ಭುವನೇಶ್ ಕೋಟ್ಯಾನ್, ಕೋಶಾಧಿಕಾರಿ ಪಾಂಡುರಂಗ ಕೋಟ್ಯಾನ್, ಸಂಘಟನ ಕಾರ್ಯದರ್ಶಿಗಳಾದ ಮಿಥುನ್ ಕರ್ಕೇರ, ಹರೀಶ್ ಜಿ. ಕೋಟ್ಯಾನ್ , ವಿಟuಲ ಕರ್ಕೇರ, ದಯಾನಂದ ಕುಂದರ್, ಕರುಣಾಕರ ಸಾಲ್ಯಾನ್, ಶಂಕರ ಸಾಲ್ಯಾನ್, ಬೇಸಗೆ ನಾಡದೋಣಿಯ ಚಂದ್ರಕಾಂತ್ ಕರ್ಕೇರ ಪಾಲ್ಗೊಂಡಿದ್ದರು.