Advertisement
ಪಂಚಮಸಾಲಿ ಪೀಠದಲ್ಲಿ ಬೆಳಗ್ಗೆಯಿಂದಲೆ ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ವಚನಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿದವು. ನಂತರ ಪ್ರವಚನ ನೀಡಿದ ಶ್ರೀಗಳು, ಗುರು ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ನೀಡುವ ಶಕ್ತಿಯಾಗಿದ್ದಾನೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಗುರುವಿನ ಅನುಗ್ರಹ ಮುಖ್ಯ. ನಿರ್ಮಲ ಮನಸ್ಸು, ಜ್ಞಾನದ ಭಂಡಾರವಾಗಿರುವ ಗುರು ಸಿಗುವುದು ಅದೃಷ್ಟವೇ ಸರಿ. ಸರಿಯಾದ ಗುರು ಸಿಕ್ಕರೆ ಶಿಷ್ಯನ ಬದುಕು ಬಂಗಾರವಾಗುತ್ತದೆ ಎಂದರು.
Related Articles
ಹೊನ್ನಾಳಿ: ಬದುಕಿಗೆ ಸನ್ಮಾರ್ಗವನ್ನು ದಯಪಾಲಿಸುವ ಹಾಗೂ ಶಿಷ್ಯನ ಬದುಕಿಗೆ ಬೆಳಕನ್ನು ಚೆಲ್ಲುವಂತೆ ಮಾಡುವ ಗುರುವಿಗೆ ಗುರುಪೌರ್ಣಿಮೆಯಂದು ಗುರುವಂದನೆ ಸಲ್ಲಿಸುವುದು ಪ್ರತಿ ಶಿಷ್ಯನ ಕರ್ತವ್ಯವಾಗಿದೆ ಎಂದು ಹಿರೇಕಲ್ಮಠದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Advertisement
ಗುರುಪೌರ್ಣಿಮೆ ಅಂಗವಾಗಿ ಪಟ್ಟಣದ ಶ್ರೀಹಳದಮ್ಮದೇವಿ ಬಾಲಕಿಯರ ಹಾಗೂ ಅಕ್ಕಮಹಾದೇವಿ ಅಂಗ್ಲ ಮಾಧ್ಯಮ ಶಾಲೆಗಳ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ತಮಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಸ್ಮರಿಸಿಕೊಂಡು, ತಮ್ಮ ಬದುಕಿನ ಪಯಣ ಕುರಿತು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಜೀವನದಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧನೆ ಮಾಡಬೇಕು. ಜೀವನದಲ್ಲಿ ಸೋಲುಗಳು ಸಹಜ. ಆದರೆ ಛಲಬಿಡದೆ ಸಾಧನೆ ಮಾಡಿದಾಗ ಮಾತ್ರ ಸಫಲತೆ ನಮ್ಮದಾಗುತ್ತದೆ ಎಂದು ಹೇಳಿದರು. ಶ್ರೀಮಠದ ವಿದ್ಯಾಪೀಠದ ಆಡಳಿತಾಧಿ ಕಾರಿ ಡಾ| ಜಯಪ್ಪ ಮಾತನಾಡಿ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ನಿರಂತರ ಸಾಧನೆಯಿಂದ ಮನುಷ್ಯ ತಾನು ಅಂದುಕೊಂಡಿದ್ದನ್ನು ಸಾಧಿ ಸಬಹುದಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ಎಂ. ವಿಜಯಾನಂದಕುಮಾರಸ್ವಾಮಿ, ಅಕ್ಕಮಹಾದೇವಿ ಅಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಂಕರಸ್ವಾಮಿ, ಸಂಗೀತ ಶಿಕ್ಷಕಿ ಶಾಂತಾದೇವಿ ಹಿರೇಮಠ, ಶಿಕ್ಷಕ ಎಂ.ವಿ. ಮೃತ್ಯುಂಜಯ ಮಾತನಾಡಿದರು. ಶ್ರೀಹಳದಮ್ಮ ದೇವಿಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ.ಎಂ. ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲೆಗಳ ಶಿಕ್ಷರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಭಯ ಶಾಲೆಗಳಿಂದ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು.