Advertisement
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗ ಲೈಟ್ ಅಳವಡಿಸಿದ್ದ 2 ಬೋಟುಗಳು ಪತ್ತೆ ಯಾದವು. ಅವುಗಳ ಮಹಜರು ನಡೆಸಿ,ಮುಂದಿನ ಕ್ರಮಕ್ಕಾಗಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಿಗೆ ವರ್ಗಾ ಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಶನಿವಾರ ಗಂಗೊಳ್ಳಿ ಬಂದ ರಿನ ಇಲಾಖಾಧಿಕಾರಿಗಳ ಕಚೇರಿಯಲ್ಲಿ ನಾಡದೋಣಿ ಮೀನುಗಾರರು ಹಾಗೂ ಪರ್ಸಿನ್ ಮೀನುಗಾರರ ಜಂಟಿ ಸಭೆ ನಡೆಸಿದ್ದು, ಅಲ್ಲಿ ಎರಡೂ ಕಡೆಯವ ರಿಗೂ ಸಮನ್ವಯದಿಂದ ಇರುವಂತೆ ತಿಳಿಸಲಾಗಿದೆ ಎಂದು ಮೀನುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
Related Articles
– ರಮೇಶ್ ಕುಂದರ್,ಅಧ್ಯಕ್ಷ,ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಂಘ
Advertisement
ವಶಕ್ಕೆ ಪಡೆದ ಬೋಟುಗಳ ಮಾಲಕರಿಗೆ ಮೀನುಗಾರಿಕೆ ಮಾಡದಂತೆ ಎಚ್ಚರಿಕೆ ನೀಡಿದ್ದು, ಒಪ್ಪಿಕೊಂಡಿದ್ದಾರೆ. ಲೈಟ್ ಫಿಶಿಂಗ್ ವಿಚಾರ ಕೋರ್ಟ್ ನಲ್ಲಿರುವುದರಿಂದ ಈಗ ಆ ಮೀನುಗಾರಿಕೆ ಸರಿಯಲ್ಲ ಎಂದು ಮನವರಿಕೆ ಮಾಡಿದ್ದೇವೆ.- ಚಂದ್ರಶೇಖರ್, ಸಹಾಯಕ ನಿರ್ದೇಶಕ, ಮೀನುಗಾರಿಕಾ ಇಲಾಖೆ ಕುಂದಾಪುರ