Advertisement

ಲಾಕ್ ಡೌನ್ ನಡುವೆ ಒಗ್ಗಟ್ಟು ಪ್ರದರ್ಶಿಸಿ –ಏ.5ರಂದು ರಾತ್ರಿ 9ಗಂಟೆಗೆ ದೀಪ ಬೆಳಗಿಸಿ: ಮೋದಿ

09:04 AM Apr 04, 2020 | Nagendra Trasi |

ನವದೆಹಲಿ:ಕೋವಿಡ್ 19 ಮಹಾಮಾರಿ ವಿರುದ್ಧ ಎಲ್ಲರೂ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಅನ್ನು ಆರಿಸಿ ಮೊಂಬತ್ತಿ, ದೀಪ ಅಥವಾ ಮೊಬೈಲ್ ಫ್ಲ್ಯಾಶ್ ಲೈಟ್ ಗಳನ್ನು ಬೆಳಗುವ ಮೂಲಕ ದೇಶದ 130 ಕೋಟಿ ಭಾರತೀಯರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಶುಕ್ರವಾರ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಅನಿವಾರ್ಯ ಆಗಿದೆ. ಆದರೆ ಪ್ರತಿಯೊಬ್ಬರು ತಾವು ಒಬ್ಬಂಟಿಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

“ದಯವಿಟ್ಟಿ ಈ ಭಾನುವಾರ ನಿಮ್ಮ ಮನೆಯ ಲೈಟ್ ಗಳನ್ನು ಆರಿಸಿ, ಮೊಂಬತ್ತಿ, ದೀಪ ಅಥವಾ ಮೊಬೈಲ್ ಲೈಟ್ ಗಳನ್ನು ನಿಮ್ಮ ಮನೆಯ ಬಾಲ್ಕನಿ, ಮನೆಯ ಹೊರಗೆ 9 ನಿಮಿಷಗಳ ಕಾಲ ಬೆಳಗಿಸಿ” ಎಂದು ಪ್ರಧಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next