Advertisement

ಲಿಫ್ಟ್ ಕುಸಿದು ಮಗು ದುರ್ಮರಣ

12:37 AM Jul 10, 2019 | Team Udayavani |

ಬೆಂಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಲಿಫ್ಟ್ ಗುಂಡಿಯೊಳಗಡೆ ಪ್ರವೇಶಿಸಿದ ನಾಲ್ಕು ವರ್ಷದ ಮಗುವಿನ ಮೇಲೆ ಲಿಫ್ಟ್ ಕುಸಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಕಗ್ಗದಾಸಪುರದಲ್ಲಿ ನಡೆದಿದೆ. ಸಂಜಯ್‌ ಕತ್ರಿ ಮೃತ ಮಗು.

Advertisement

ನೇಪಾಳ ಮೂಲದ ದಲ್ಬೇದರ್‌ ಕಗ್ಗದಾಸಪುರದ 9ನೇ ಕ್ರಾಸ್‌ನಲ್ಲಿರುವ ಸಂತೋಷಿ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಕಮಲಾದೇವಿ ಕತ್ರಿ ಹಾಗೂ ಮಗು ಸಂಜಯ್‌ ಜತೆ ಅಲ್ಲಿಯೇ ಕೊಠಡಿಯೊಂದರಲ್ಲಿ ವಾಸಿಸುತ್ತಾರೆ.

ಸೋಮವಾರ ಸಂಜೆ 5.30ರ ಸುಮಾರಿಗೆ ನೆಲಮಹಡಿಯಲ್ಲಿ ಆಟವಾಡುತ್ತಿದ್ದ ಸಂಜಯ್‌ ಕತ್ರಿ ಲಿಫ್ಟ್ ಗುಂಡಿಗೆ ಬಿದ್ದು ಕಿರುಚಿಕೊಂಡಿದೆ. ಮಗುವಿನ ಚೀರಾಟ ಕೇಳಿ ತಾಯಿ ಕಮಾಲದೇವಿ ಓಡಿಬಂದ ಆತಂಕದಿಂದ ಆತುರದಲ್ಲಿ ಲಿಫ್ಟ್ಗುಂಡಿ ಒತ್ತಿದಾಗ ಮೇಲಿದ್ದ ಲಿಫ್ಟ್ ನೇರವಾಗಿ ಮಗುವಿನ ಮೇಲೆ ಬಿದ್ದಿದೆ.

ಪುನಃ ಲಿಫ್ಟ್ ಮೇಲಕ್ಕೆ ಬಂದಾಗ ಮಗುವನ್ನು ಎತ್ತಿಕೊಳ್ಳುವಷ್ಟರಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದರು. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next