Advertisement

Assembly: ಇನ್ಮುಂದೆ ನಿರ್ಮಾಣ, ಏರ್‌ಕಂಪ್ರಸರ್‌, ಜನರೇಟರ್‌ ವಾಹನಕ್ಕೆ ಅಜೀವ ತೆರಿಗೆ

08:36 PM Feb 29, 2024 | Team Udayavani |

ವಿಧಾನಸಭೆ: ನಿರ್ಮಾಣ ವಾಹನ ಸಾಮಗ್ರಿಗಳು, ಏರ್‌ ಕಂಪ್ರಸರ್‌ ಮತ್ತು ಜನರೇಟರ್‌ ಅಳವಡಿಸಿದ ವಾಹನಗಳಿಗೆ ಪೂರ್ಣಾವಧಿ ತೆರಿಗೆ ಬದಲಾಗಿ ಅಜೀವ ತೆರಿಗೆ ವಿಧಿಸುವುದು ಸೇರಿ ಕರ್ನಾಟಕ ಮೋಟಾರು ವಾಹನ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತಿದೆ.

Advertisement

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ವಿಧೇಯಕವನ್ನು ಮಂಡಿಸಿದರು. ವಿಧಾನಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ನಡೆಸಿದ್ದರಿಂದ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಈ ಬಗೆಯ ವಾಹನಗಳಿಗೆ ನೋಂದಣಿ ಬಳಿಕ, ಸ್ಥಳಾಂತರ ಅಥವಾ ನೋಂದಣಿ ರದ್ದಾದ ಸಂದರ್ಭದಲ್ಲಿ ಒಂದು ವರ್ಷದೊಳಗೆ ಶೇ.93, 2 ವರ್ಷದೊಳಗೆ ಶೇ.87, ಐದು ವರ್ಷದೊಳಗೆ ಶೇ.64, 10 ವರ್ಷದೊಳಗೆ ಶೇ.41 ಹಾಗೂ 15 ವರ್ಷದವರೆಗೆ ಶೇ.25 ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ 25 ಲಕ್ಷ ರೂ. ಬೆಲೆ ಮೀರುವ ವಿದ್ಯುತ್ಛಕ್ತಿ ಚಾಲಿತ ಕಾರುಗಳು, ಜೀಪುಗಳು, ಓಮ್ನಿ ಬಸ್ಸುಗಳು ಹಾಗೂ ಖಾಸಗಿ ಸೇವಾ ವಾಹನಗಳ ಮೇಲೆ ಆಜೀವ ತೆರಿಗೆ ವಿಧಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಾದರಿಯಲ್ಲಿ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಉತ್ತೇಜಿಸಲು ಪ್ರತ್ಯೇಕ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಂಡಿಸಿದ ಈ ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ವಿಧಾನ ಪರಿಷತ್ತಿನಲ್ಲೂ ಅಂಗೀಕಾರ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next