Advertisement

ಅಪರಾಧಿ ರಾಜಕಾರಣಿಗಳಿಗೆ ಜೀವಮಾನ ನಿಷೇಧ ?

03:50 AM Mar 21, 2017 | |

ಹೊಸದಿಲ್ಲಿ: ಕ್ರಿಮಿನಲ್‌ ಅಪರಾಧಗಳಲ್ಲಿ ಭಾಗಿಯಾಗಿ ದೋಷಿ ಎಂದು ಸಾಬೀತಾದ ವ್ಯಕ್ತಿಗಳಿಗೆ ಜೀವನ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ರಾಜಕೀಯ ಪಕ್ಷ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಗೆ ಸುಪ್ರೀಂ ಕೋರ್ಟ್‌ ಬೆಂಬಲ ಸೂಚಿಸಿದೆ.

Advertisement

ಅಪರಾಧ ಎಸಗಿದ ರಾಜಕಾರಣಿ ಗಳಿಗೆ ಜೀವಿತಾವಧಿ ನಿಷೇಧ ಹೇರಬೇಕು ಎಂದು ಕೋರಿ ವಕೀಲ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಇದಕ್ಕೆ ಸುಪ್ರೀಂ ಮಾತ್ರವಲ್ಲದೆ ಚುನಾವಣಾ ಆಯೋಗವೂ ಬೆಂಬಲ ಸೂಚಿಸಿದೆ. ಪಿಐಎಲ್‌ ಅನ್ನು ನಾವು ಬೆಂಬ ಲಿಸುತ್ತೇವೆ ಎಂದು ಆಯೋಗವು ಸೋಮವಾರ ಅಫಿದವಿತ್‌ ಸಲ್ಲಿಸಿದೆ.

ಕಳಂಕಿತ ರಾಜಕಾರಣಿಗಳಿಗೆ ಪ್ರಸ್ತುತ 6 ವರ್ಷಗಳ ನಿಷೇಧವಷ್ಟೇ ಇದೆ. ಇದನ್ನು ರದ್ದು ಮಾಡಿ, ತಮ್ಮ ಜೀವಿತಾವಧಿಯಲ್ಲಿ ಯಾವತ್ತೂ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಜತೆಗೆ, ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದೂ ಆಯೋಗವು ಅಫಿದವಿತ್‌ನಲ್ಲಿ  ಕೋರಿದೆ.

ಉಪಾಧ್ಯಾಯ ಮಾತ್ರವಲ್ಲದೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ. ಲಿಂಗೊ ಹಾಗೂ “ಪಬ್ಲಿಕ್‌ ಇಂಟರೆಸ್ಟ್‌ ಫೌಂಡೇಷನ್‌’ ಹೆಸರಿನ ಎನ್‌ಜಿಒ ಕೂಡ ಇಂಥದ್ದೇ ಪಿಐಎಲ್‌ ಅನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next