Advertisement

ಡಾ.ಅಜಯ್‌ ಅಗರ್ವಾಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

12:32 AM Mar 10, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಐಸಿ) ಹಮ್ಮಿಕೊಂಡಿದ್ದ 14ನೇ ಪಿಆರ್‌ಐಸಿ ಜಾಗತಿಕ ಸಂವಹನ ಸಮಾವೇಶದಲ್ಲಿ ನಡೆದ “ಪಿಆರ್‌ ಬಿಯಾಂಡ್‌ 20-20′ ಕಾರ್ಯಕ್ರಮದಲ್ಲಿ ಸಿಬಿಎಸ್‌ಎಲ್‌ ಸಮೂಹ ಕಂಪನಿಗಳ ಕಾರ್ಪೊರೇಟ್‌ ರಿಲೇಷನ್ಸ್‌ ಉಪಾಧ್ಯಕ್ಷ ಡಾ. ಅಜಯ್‌ ಅಗರ್ವಾಲ್‌ ಅವರಿಗೆ “ಕೆ.ಆರ್‌. ಸಿಂಗ್‌ ಸ್ಮಾರಕ ರಾಷ್ಟ್ರೀಯ ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Advertisement

ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರ ಸಮ್ಮಖದಲ್ಲಿ ಮೇಜರ್‌ ಜನರಲ್‌ ಸತ್ಯ ಪ್ರಕಾಶ್‌ ಯಾದವ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಸ್ತುತ ಸಿಬಿಎಸ್‌ಎಲ್‌ ಸಮೂಹದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಅಗರ್ವಾಲ್‌ ಈ ಹಿಂದೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಿಗೆ ಕಾರ್ಪೋರೇಟ್‌ ಸಂವಹನ ವಿಭಾಗ ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ (ಸಿಬಿಐ)ದ ಮುಖ್ಯಸ್ಥ (ಹೆಡ್‌ ಪಿಆರ್‌-ಎಂಕೆಟಿಜಿ) ರಾಗಿದ್ದರು.

ಇಷ್ಟೇ ಅಲ್ಲದೆ, ಪಿಆರ್‌ಸಿಐ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಸಲಹೆಗಾರರು, ಎಸ್‌ಎಂಇ ಚೇಂಬರ್ಸ್‌ ಆಫ್ ಇಂಡಿಯಾ ಹಾಗೂ ಇನ್ನಿತರ ಕಂಪನಿಗಳ ಆಡಳಿತ ಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶ ಎಚ್‌.ಎನ್‌. ನಾಗ್‌ಮೋಹನ್‌ ದಾಸ್‌, ಚೀಫ್ ಮೆಂಟರ್‌ ಮತ್ತು ಎಮಿರಿಟಸ್‌ ಅಧ್ಯಕ್ಷ ಎಂ.ಬಿ. ಜಯರಾಮ್‌, ಮಿಸ್‌ ಕರ್ನಾಟಕ ದಿಪಾಲಿ ಭಟ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next