Advertisement

ಪ್ರಯತ್ನ, ದೇವತಾನುಗ್ರಹಗಳೆಂಬ ರೆಕ್ಕೆಗಳಿಂದ ಜೀವನ ರಥದ ಮುನ್ನಡೆ ಸುಗಮ

02:21 AM Apr 30, 2019 | sudhir |

ಮೂಡುಬಿದಿರೆ: “ಅಹಿಂಸೆ, ಇಂದ್ರಿಯ ನಿಗ್ರಹ, ಸರ್ವಭೂತದಯೆ, ಜ್ಞಾನ, ತಪಸ್ಸು, ಕ್ರಿಯೆ, ಧ್ಯಾನಾದಿ ಸದ್ಗುಣಗಳೆಂಬ ಅಷ್ಟ ಪುಷ್ಪಗಳಿಂದ ದೇವರನ್ನು ಆರಾಧಿಸಿದಾಗ ನಮ್ಮೊಳಗಿನ ದೋಷಗಳು ನಿವಾರಣೆಯಾಗಿ ನಾವೂ ಪರಿಶುದ್ಧರಾಗುತ್ತೇವೆ, ದೇವರೂ ನಮಗೊಲಿಯುತ್ತಾರೆ’ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

Advertisement

ಶ್ರೀ ಕ್ಷೇತ್ರ ಇರುವೈಲು ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಸೋಮವಾರ ಜರಗಿದ ಬ್ರಹ್ಮಕಲಶಾಭಿಷೇಕದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ಪ್ರಯತ್ನ ಮತ್ತು ದೇವತಾನುಗ್ರಹ ಎಂಬ ಎರಡು ರೆಕ್ಕೆಗಳಿಂದ ಜೀವನವೆಂಬ ರಥ ಮುನ್ನಡೆಯಲು, ಜಯ ಲಭಿಸಲು ಸಾಧ್ಯ’ಎಂದರು.

ವೇದ ವಿದ್ವಾಂಸ ಪಂಜ ಭಾಸ್ಕರ ಭಟ್‌ ಬ್ರಹ್ಮಕಲಶಾಭಿಷೇಕದ ವಿಧಿ ವಿಧಾನ, ಅರ್ಥ ವಿವರಿಸಿದರು. ಗಣ್ಯರಾದ ರವಿರಾಜ ಹೆಗ್ಡೆ, ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌, ರಾಮಚಂದ್ರ ಮಿಜಾರು, ಉದ್ಯಮಿ ಉಮೇಶ ಕರ್ಕೇರ, ಕೆ. ಶ್ರೀಪತಿ ಭಟ್‌, ಕೆ.ಪಿ. ಜಗದೀಶ ಅಧಿಕಾರಿ, ಹೇಮಲತಾ ಐ.ವಿ. ಆಸ್ರಣ್ಣ, ಸಾವಿತ್ರಿ ನಾಯಕ್‌ ಉಪಸ್ಥಿತರಿದ್ದರು.

ಸತ್ಯವೇ ದೇವರು
ಸಭಾಧ್ಯಕ್ಷ ಮಿಜಾರುಗುತ್ತು ಆನಂದ ಆಳ್ವ ಅವರು, ” ಸತ್ಯವೇ ದೇವರು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದರೆ ಕ್ಷೇಮ; ಈ ಕ್ಷೇತ್ರವು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರಿದೆ’ ಎಂದು ಹೇಳಿದರು.

ಬ್ರಹ್ಮಕಲಶಾಭಿಷೇಕ
ಸೋಮವಾರ ಬೆಳಗ್ಗೆ 9.05ಕ್ಕೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಶಿಬರೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಜರಗಿತು.

Advertisement

ಸಮ್ಮಾನ
ಕ್ಷೇತ್ರಕ್ಕೆ ವಿಶೇಷ ಸೇವೆ ಸಲ್ಲಿಸುತ್ತಿರುವ ಸಂತೋಷ್‌ ಶೆಟ್ಟಿ ಜಾರ್ಕಳ ನಡಿಕೆರೆ ಗುತ್ತು (ಗುಜರಾತ್‌), ಬಾಡ ಪೂಜಾರಿ ಪಾಣಿಲ, ಮಾರ್ಕ್‌ ಪಿಂಟೋ ಬೋಲೆx ಹಾಗೂ ಸುಂದರಿ ಪೂಜಾರಿ ತ್ಯಾಂಪೆಟ್ಟು ಅವರನ್ನು ಸಮ್ಮಾನಿಸಲಾಯಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಪೂವಪ್ಪ ಸಾಲ್ಯಾನ್‌ ಸ್ವಾಗತಿಸಿ
ದರು. ಗೌರವಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್‌. ಶೆಟ್ಟಿ, ಬ್ರಹ್ಮಕಲಶಾಭಿ ಷೇಕ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್‌ ಪಾಣಿಲ ಅತಿಥಿಗಳನ್ನು ಗೌರವಿಸಿದರು. ದಿನೇಶ್‌ ಸುವರ್ಣ ನಿರೂಪಿಸಿದರು. ಪ್ರಸಾದ್‌ ಶೆಟ್ಟಿ ದೊಡ್ಡಗುತ್ತು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next