Advertisement
ಹಿಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ ಅವರು ಅದಕ್ಕೆ ಹೊಂದಿಕೊಂಡಿದ್ದರು. ಆದರೆ ಇಂದಿನ ಕಾಲದಲ್ಲಿ ವಿದ್ಯುತ್ ಇಲ್ಲದೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ನಾವು ವಿದ್ಯುತ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಒಂದು ದಿನ ವಿದ್ಯುತ್ ಇಲ್ಲದೆ ಹೋದರೆ ಯಾವ ಕಾರ್ಯವು ಆಗದಂತೆ ಅನಿಸುತ್ತದೆ.
Related Articles
Advertisement
ನಾವು ಈಗ ಉಪಯೋಗಿಸುತ್ತಿರುವ ಬಲ್ಪ್ಗಳನ್ನು ಬಿಟ್ಟು ಮೊದಲಿನ ಹಾಗೆ ಮಣ್ಣಿನ ದೀಪವನ್ನು ಬಳಸಬೇಕಾಗುತ್ತದೆ. ನಮ್ಮ ಶಕ್ತಿಯನ್ನೇ ಉಪಯೋಗಿಸಿ ಕೆಲಸ ಮಾಡಬೇಕಾಗುತ್ತದೆ. ವಿದ್ಯುತ್ ಇಂದ ವೇಗವಾಗಿ ಆಗುವ ಎಲ್ಲಾ ಕೆಲಸಗಳು ವಿದ್ಯುತ್ ಇಲ್ಲದೆ ಹೋದರೆ ನಿಧಾನವಾಗಿ ಆಗುತ್ತವೆ.
ದೇಶದಲ್ಲಿ ಆಗುವ ಯಾವುದೇ ಘಟನೆಯನ್ನು ಮತ್ತು ಅಂತರಾಷ್ಟ್ರೀಯ ಸುದ್ದಿಯನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ನಮ್ಮ ದೂರದ ಸಂಬಂಧಿಗಳು ಹೇಗಿದ್ದಾರೆ ಎಂದು ವಿಚಾರಿಸಲು ನಾವು ಅಂಚೆ ಸಹಾಯವನ್ನೇ ಪಡೆಯಬೇಕು.
ನಮ್ಮ ತತ್ ಕ್ಷಣದ ಭಾಗವೆಂದರೆ ಸಾರಿಗೆ ಅವೆಲ್ಲವೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ನಾವು ಮೊದಲಿನಂತೆ ಕಾಲಿನಲ್ಲಿ, ಎತ್ತಿನಗಾಡಿಯಲ್ಲಿ ಹೋಗಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳೆಲ್ಲವೂ ವಿದ್ಯುತ್ತನ್ನು ಅವಲಂಬಿಸಿದ್ದರಿಂದ ಅವುಗಳಿಗೆ ನಷ್ಟವಾಗುತ್ತದೆ.
ಹೀಗಾಗಿ ವಿದ್ಯುತ್ ನಮ್ಮ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಎಲ್ಲಿ ಬೆಳಕಿದೆಯೋ ಅಲ್ಲಿ ಜೀವ ವಿರುತ್ತದೆ. ಆದರೆ ನಾವು ವಿದ್ಯುತ್ತನ್ನು ಸಂಪೂರ್ಣವಾಗಿ ವರವಾಗಿ ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಬಳಸಬೇಕಾದ ಸಂಪನ್ಮೂಲವಾಗಿ ಗೌರವಿಸಬೇಕು.
- ಪಲ್ಲವಿ ಹೆಗಡೆ
ಬಪ್ಪನಳ್ಳಿ