ಮಹಾನಗರ: ಯುವ ಜನತೆ ಉತ್ತಮ ಮೌಲ್ಯಗಳನ್ನು ಅಳವ ಡಿಸಿಕೊಂಡು, ಉನ್ನತ ಗುರಿಯನ್ನು ಇರಿಸಿ ಕೊಂಡು ಸಾಧಿಸುವ ಛಲದೊಂದಿಗೆ ಮುನ್ನಡೆದಾಗ ಬದುಕಿನಲ್ಲಿ ಸಾರ್ಥ ಕತೆಯನ್ನು ಕಂಡುಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ್ ಸಂಸ್ಥೆ (ಉಜಾಲಾ) ಜಂಟಿ ಆಡಳಿತ ನಿರ್ದೇಶಕ, ಸಿಇಒ ಉಲ್ಲಾಸ ಕಾಮತ್ ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕ್ಷಮತಾ ಯೋಜನೆಯಡಿಯಲ್ಲಿ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಹಲವು ನಿಯೋಜನೆಗಳೊಂದಿಗೆ ಉದ್ಯೋಗ ಸಾಮರ್ಥ್ಯಕ್ಕೆ ಸಹಾಯವಾಗುವಂತೆ ರೂಪಿಸಿರುವ 18 ದಿವಸಗಳ ಅವಧಿಯ ಕ್ಷಮತಾ ಯು ಗೆಟ್ ಇನ್ ಡೈಮಂಡ್ಸ್ ಶಿಬಿರದ ಸಮಾರೋಪದಲ್ಲಿ ಅವರು ಆಶಯ ಭಾಷಣ ಮಾಡಿದರು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿ ತರಬೇತಿ ಶಿಬಿರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು. ವಿಶನ್ ಟಿವಿಎಂ 2030 ಪೂರಕವಾಗಿರುವ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕಾಲೇಜುಗಳ ಆಯ್ದ ಅಂತಿಮ ವರ್ಷದ 63 ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಆಹ್ವಾನಿಸಲಾಗಿತ್ತು. ಈ ಶಿಬಿರದಲ್ಲಿ ಹಲವು ತಜ್ಞರಿಂದ ಬೋಧನ ತರಗತಿಗಳನ್ನು ಕೂಡ ಏರ್ಪಡಿಸಲಾಗಿತ್ತು. ಶಿಬಿರ ಸಂಚಾಲಕ ಸಿಎ ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳಕಾರ್, ಉಪಸ್ಥಿತರಿದ್ದರು.
ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳ ಹೆತ್ತವರನ್ನು ಹಾಗೂ ಪಾಲಕರನ್ನು ಕೂಡ ಸಮಾರೋಪಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ಉಲ್ಲಾಸ ಕಾಮತ್ ಯೋಜನೆಯ ಪ್ರಾಯೋಜಕರಾಗಿದ್ದರು. ಶಿಬಿರಾ ರ್ಥಿಗಳು ತಮ್ಮ ಅಭಿಪ್ರಾಯ ತಿಳಿಸಿದರು. ಮುಖ್ಯ ಅತಿಥಿಗಳು ಶಿಬಿರಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.