Advertisement

“ಕನಕದಾಸರ ಕೀರ್ತನೆಗಳಿಂದ ಜೀವನ ಮೌಲ್ಯ’

02:11 AM Apr 17, 2019 | mahesh |

ಮಂಳಗಂಗೋತ್ರಿ: ಕನಕದಾಸರು ಭಗವಂತನ ಸ್ಮತಿಯೊಂದಿಗೆ ಜೀವನದ ಮೌಲ್ಯಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಕಾರ್ಯವನ್ನು ಕೀರ್ತನೆಗಳ ಮೂಲಕ ಮಾಡಿದ್ದಾರೆ ಎಂದು ಸಂಗೀತ ವಿದ್ಯಾನಿಧಿ
ಡಾ| ವಿದ್ಯಾಭೂಷಣ ಹೇಳಿದರು.

Advertisement

ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಹಳೆ ಸೆನೆಟ್‌ ಸಭಾಂಗಣದಲ್ಲಿ ನಡೆದ ಕನಕ ಸ್ಮತಿ ವಿಶೇಷ ಉಪನ್ಯಾಸ ಹಾಗೂ ಕನಕ ಪುರ ಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು, ನನ್ನದು ಎಂಬ ಮನೋ ಭಾವವು ನಮ್ಮಿಂದ ದೂರವಾದರೆ ನಾವು ಮೋಕ್ಷವನ್ನು ಪಡೆಯಲು ಸಾಧ್ಯ ಎಂಬುದು ಕನಕದಾಸರ ವಾದವಾಗಿತ್ತು. ಕನಕ ದಾಸರು ಮತ್ತು ಪುರಂದರದಾಸರು ಬೇರೆ ಬೇರೆಯಲ್ಲ. ಅವರಿಬ್ಬರ ಚಿಂತನೆಗಳು ಒಂದೇ ರೀತಿಯಾಗಿದ್ದಿತು. ಹರಿದಾಸ ಪರಂಪರೆಯಿಂದ, ಪುರಂದರದಾಸರಿಂದ ಕನಕದಾ ಸರನ್ನು ಸರ್ಕಾರಗಳು ಬೇರ್ಪಡಿಸಲು ಪ್ರಯತ್ನಿಸಿದರೂ ಹರಿದಾಸ ಸಂಬಂಧದಿಂದ ದೂರ ಗೊಳಿಸಲು ಸಾಧ್ಯವಿಲ್ಲ ಎಂದರು.

ದೇವರನ್ನು ಕೇವಲ ಪ್ರತಿಮೆಯಲ್ಲಿ ಮಾತ್ರ ಕಾಣದೆ ಎಲ್ಲ ಕಡೆಯೂ ಕಾಣುವಂತಾ ಗಬೇಕು. ಹಾಗೆಯೇ ಅಂತರಂಗದೊಳಗಿನ ದೇವರನ್ನು ಕಂಡುಕೊಳ್ಳುವ ಬಗೆಯನ್ನು ಕನಕದಾಸರ ಕೀರ್ತನೆಯಲ್ಲಿ ಕಾಣಬಹುದು ಎಂದರು. ಇದೇ ಸಂದರ್ಭದಲ್ಲಿ ಡಾ| ವಿದ್ಯಾಭೂಷಣ ಅವರು ಕನಕದಾಸ ಹಾಗೂ ಪುರಂದರ ದಾಸರ ಕೀರ್ತನೆಗಳನ್ನು ಪ್ರಸ್ತು ತಪಡಿಸಿ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ| ಕಿಶೋರಿ ನಾಯಕ್‌ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರವು ಹಲವಾರು ವರ್ಷಗಳಿಂದ ಪ್ರೊ| ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮ ಯೋಜನೆಗಳನ್ನು ಹಮ್ಮಿ ಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಗೌರವ ಪುರಸ್ಕಾರ
ಕಾರ್ಯಕ್ರಮದಲ್ಲಿ ಕನಕದಾಸ ಸಂಶೋ ಧನ ಕೇಂದ್ರವು ಹಮ್ಮಿಕೊಂಡಿದ್ದ ಕನಕ ದಾಸ ಕೀರ್ತನ ಗಾಯನ ಕಾರ್ಯ ಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸ ಲಾಯಿತು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ| ಬಿ.ಶಿವರಾಮ ಶೆಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಶೋಧನ ಸಹಾಯಕ ಆನಂದ ಎಂ. ಕಿದೂರ್‌ ವಂದಿಸಿದರು. ಅರ್ಪಿತಾ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next