ಎಸ್‌ಪಿ ಆರ್. ಚೇತನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿರೋಧಿಸಿ 2004 ರಿಂದ ಒಎಂಸಿ
ಮಾಲೀಕ ಜನಾರ್ದನರೆಡ್ಡಿ ಟೀಂ ವಿರುದಟಛಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. 2010ರ ಮಾ.29ರಂದು
ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿ ಗುರುತಿಸಲು ಆಗಮಿಸಿದ್ದ ಸರ್ವೇ ಆಫ್ ಇಂಡಿಯಾದ ಅ ಧಿಕಾರಿಗಳ ಜತೆ
ಚರ್ಚಿಸಲು ನಗರದ ಬಾಲಾ ರೆಸಿಡೆನ್ಸಿ ಹೋಟೆಲ್‌ಗೆ ಆಗಮಿಸಿದ್ದಾಗ ರೆಡ್ಡಿ ಬೆಂಬಲಿಗರಾದ ಕಾರದಪುಡಿ ಮಹೇಶ್
ಮತ್ತು ಸ್ವಸ್ತಿಕ್ ನಾಗರಾಜ್ ಗುಂಪಿನಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ
ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದ ನಂತರ ಅಂದಿನ ಎಸ್‌ಪಿ ನನಗೆ ಇಬ್ಬರು ಗನ್‌ಮೆನ್‌ಗಳ ರಕ್ಷಣೆ ಒದಗಿಸಿದ್ದರು.
Advertisement
ಈಗಲೂ ಒಬ್ಬ ಗನ್ ಮೆನ್ ರಕ್ಷಣೆಯನ್ನು ನನಗೆ ನೀಡಲಾಗಿದೆ. ರೆಡ್ಡಿ ವಿರುದಟಛಿ ಹಲವು ಪ್ರಕರಣಗಳಲ್ಲಿ ನಾನುಸಾಕ್ಷಿಯಾಗಿದ್ದೇನೆ. ಹೀಗಾಗಿ ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಟಪಾಲ್ ಗಣೇಶ್ ದೂರಿನಲ್ಲಿ
ಆರೋಪಿಸಿದ್ದಾರೆ.