Advertisement
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಂಡೆಮನೆಯ ಶ್ರೀಪಾದ ಹೆಗಡೆ ಅವರ ಸಾಧನೆ ಇದು. ಕಳೆದ 15 ವರ್ಷಗಳಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಔಷಧಿ ಗುಣವುಳ್ಳ ಆಯುರ್ವೇದಉತ್ಪನ್ನಗಳ ತಯಾರಿಯಲ್ಲಿ ತೊಡಗಿದ್ದು,ಬೆಂಗಳೂರು ಸೇರಿದಂತೆ ವಿವಿಧ ಕಡೆ ಉತ್ಪನ್ನ ರಫ್ತು ಮಾಡುತ್ತಿದ್ದು, ಅದೆಷ್ಟೋ ರೈತರು, ಯುವಕರಿಗೆ ಪ್ರೇರಣೆಯಾಗಿದ್ದಾರೆ.
Related Articles
Advertisement
64 ಉತ್ಪನ್ನಗಳ ಮಾರಾಟ: ಶ್ರೀಪಾದ ಹೆಗಡೆ ಅವರು ಕೃಷಿಯಲ್ಲಿ ಒಂದಿಷ್ಟು ಚೇತರಿಸಿಕೊಂಡು, ಮನೆನಿರ್ಮಾಣ ಮಾಡಿದರು. ಪತ್ನಿ ಮನೆಯವರು ಕೇರಳ ಮೂಲದವರಾಗಿದ್ದರಿಂದ ಅತ್ತೆ ಅವರಿಗೆ ಗೊತ್ತಿರುವಆಯುರ್ವೇದ ಹಾಗೂ ವನಸ್ಪತಿ ಉತ್ಪನ್ನಗಳಬಳಕೆ, ಮೌಲ್ಯವರ್ಧನೆ ಪರಿಚಯವಾಗಿತ್ತು.ಜತೆಗೆ ಬಿಎಸ್ಸಿಯಲ್ಲಿ ಜಿಯೋಲಾಜಿ ಕಲಿತಿದ್ದರಿಂದಸುಲಭವಾಗಿ ಅರ್ಥೈಸಿಕೊಳ್ಳುವಿಕೆಯೊಂದಿಗೆ ಸಂಬಂಧಿಸಿದ ಕೃತಿಗಳ ಓದಿನೊಂದಿಗೆ ಮಾಹಿತಿ ಸಂಗ್ರಹಿಸಿದ್ದರು.
ಪರಿಣಾಮ ಇಂದು ಸುಮಾರು 64 ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೋಕಂ ರಸ ತೆಗೆಯದೆಯೇ ನೇರವಾಗಿ ಅದನ್ನು ಪೌಡರ್ ಮಾಡಿದ್ದು, ಕೋಕಂನಿಂದ ಬೆಣ್ಣೆ ತಯಾರಿಸಿ ಮಾರಾಟ ಮಾಡಿದ್ದಾರೆ. ಅನೇಕ ನಾಟಿ ವೈದ್ಯರೊಂದಿಗೆ ಸಂಪರ್ಕಹೊಂದಿದ್ದು, ಅವರಿಗೆ ತಿಳಿದಿರುವ ಕಾಡು ಉತ್ಪನ್ನಗಳು, ಆಯುರ್ವೇದ-ಔಷಧೀಯ ಸಸ್ಯಗಳ ಮಾಹಿತಿ ಪಡೆದು ಅವುಗಳ ಮೌಲ್ಯವರ್ಧನೆ ಕಾರ್ಯದಲ್ಲಿ ತೊಡಗಿದ್ದಾರೆ.
ಜರ್ಮನ್‌ನಲ್ಲಿ ಹೋಟೆಲ್ ಹೊಂದಿರುವ ಮಹಿಳೆಯೊಬ್ಬರಿಗೆ ಎರಡು ವರ್ಷಗಳವರೆಗೆ ಕೋಕಂ ಪೌಡರ್, ವಾಟೆಹುಳಿ, ಶುಂಠಿ ಪೌಡರ್, ಅರಿಶಿಣ, ಮಸಾಲಾ ಇನ್ನಿತರೆ ಸಾಮಗ್ರಿ ಕಳುಹಿಸಿದ್ದಾರೆ.ಇಂದಿಗೂ ಬೆಂಗಳೂರು ಇನ್ನಿತರೆ ಕಡೆಗಳಲ್ಲಿ ಸುಮಾರು64 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಉತ್ಪನ್ನಗಳಪ್ರದರ್ಶನ, ಮಾರಾಟ ಮೇಳದಲ್ಲಿ ಇರಿಸುತ್ತಿದ್ದು, ಉಳಿದವುಗಳನ್ನು ಬೇಡಿಕೆ ಆಧಾರದಲ್ಲಿ ತಯಾರಿಸಿನೀಡುತ್ತಿದ್ದಾರೆ.
ಆಲೆಮನೆ ಹೊಂದಿದ್ದರಾದರೂ ನಿರ್ವಹಣೆ ಸಾಧ್ಯವಾಗದೆ ಕೈಬಿಟ್ಟಿದ್ದರು. ಇದೀಗ ಮತ್ತೆ ಆಲೆಮನೆಮಾಡಬೇಕೆಂಬ ಚಿಂತನೆಗೆ ಮುಂದಾಗಿದ್ದು, ಅದಕ್ಕಾಗಿ ಕಬ್ಬು ನಾಟಿಗೆಂದು ಜಮೀನು ಗುರುತಿಸಿತಯಾರಿಯಲ್ಲಿ ತೊಡಗಿದ್ದಾರೆ. ಹಲ್ಲು ನೋವು ಇನ್ನಿತರೆ ಕೆಲವೊಂದು ಸಮಸ್ಯೆಗಳಿಗೆ ಆಯುರ್ವೇದ ಪದ್ಧತಿಯ ಪರಿಹಾರವನ್ನು ಉಚಿತವಾಗಿ ಕೈಗೊಳ್ಳುತ್ತಿದ್ದಾರೆ.
ಆರೋಗ್ಯ ಹಾಗೂ ಶುದ್ಧ ಆಹಾರ ಪರಿಕಲ್ಪನೆಯಲ್ಲಿ ವಿವಿಧ ಉತ್ನನ್ನಗಳನ್ನುನೀಡುತ್ತಿದ್ದೇನೆ. 22 ವಿವಿಧ ಹರ್ಬಲ್‌ಉತ್ಪನ್ನಗಳನ್ನು ಬಳಸಿ ಹರ್ಬಲ್ ಚಹಾತಯಾರಿಸಿದ್ದೇನೆ. ಅದೇ ರೀತಿ ಹರ್ಬಲ್ ಹೇರ್ ಆಯಿಲ್, ನೋವು ನಿವಾರಕ ಎಣ್ಣೆ ತಯಾರಿಸಿದ್ದೇನೆ. ಇನ್ನಷ್ಟು ಉತ್ಪನ್ನಗಳ ಚಿಂತನೆ ಇದೆ. –ಶ್ರೀಪಾದ ಹೆಗಡೆ, ಸಾವಯವ ರೈತ ಮಂಡೆಮನೆ
–ಅಮರೇಗೌಡ ಗೋನವಾರ