Advertisement
ಅವರು ಸೋಮವಾರ ಸಂಜೆ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಪ್ರಯುಕ್ತ ನಮ್ಮ ನಡೆ ಮಂಜುನಾಥನ ಕಡೆ ಎನ್ನುವ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದರು. ಬದುಕಿನಲ್ಲಿ ಸಾಧಿಸುವ ಗುರಿ ಇರಬೇಕು. ಯಾರ ಬಳಿ ಹೆಚ್ಚು ಸಂಪತ್ತು ಇರುತ್ತದೆಯೋ ಅವರು ದಾನ ಮಾಡುವ ಮನಸ್ಸು ಹೊಂದಿರುವುದಿಲ್ಲ. ಇಲ್ಲದವರು ದಾನ ಮಾಡ್ತಾರೆ. ನಾವು ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿ ಬೀಗುತ್ತೇವೆ. ಯಾರು ವಿನೀತರಾಗಿ ಭಕ್ತಿ ಯಿಂದ ಇರುತ್ತಾರೋ ಅವರಿಗೆ ಭಗವಂತನ ಅನುಗ್ರಹ ಇರುತ್ತದೆ. ತಗ್ಗಿದವನಿಗೆ ಭಯ ಕಡಿಮೆ ಎಂದರು.
ನೀವೆಲ್ಲ ಕ್ಷೇತ್ರದ ಮೇಲೆ, ನನ್ನ ಮೇಲೆ ಶ್ರದ್ಧೆ, ವಿಶ್ವಾಸ, ಅಪಾರ ನಿರೀಕ್ಷೆ ಇಟ್ಟು ಜಿಲ್ಲೆಯ ವಿವಿಧೆಡೆಯಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದೀರಿ. ಧರ್ಮಸ್ಥಳ ನನ್ನ ಜನ್ಮಭೂಮಿ, ಆದರೆ ನನ್ನ ಅನೇಕ ಕಾರ್ಯಗಳಿಗೆ ಪ್ರೇರಣೆ ನೀಡಿದ ಉಜಿರೆ ನನ್ನ ಕರ್ಮಭೂಮಿ ಎಂದರು. ಅಭಿಮಾನ ಹೆಚ್ಚಿಸಿದೆ
ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಈ ವರ್ಷ ವಿಶೇಷವಾಗಿ ಮೂಡಿ ಬಂದಿದೆ. ಪಾದಯಾತ್ರೆಯ ಐದನೇ ವರ್ಷ, ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷ, ಜನ್ಮ ದಿನದ 70ನೇ ವರ್ಷಕ್ಕೆ ಕಾಲಿಡುವ ಸಂಭ್ರಮ. ಇದು ನಮಗೆಲ್ಲ ಹೆಗ್ಗಡೆಯವರ ಮೇಲಿನ ಅಭಿಮಾನ, ಪ್ರೀತಿ ಹೆಚ್ಚಿಸಿದೆ ಎಂದರು.
Related Articles
Advertisement
ಉಜಿರೆ ನಾಗರಿಕರ ಪರವಾಗಿ ಹೆಗ್ಗಡೆಯವರಿಗೆ ಸ್ವರ್ಣದುಂಗುರ ತೊಡಿಸಿ ಸಮ್ಮಾನಿಸಲಾಯಿತು. ಪಾದ ಯಾತ್ರೆ ಸಮಿತಿ ವತಿಯಿಂದ ಗೌರವಿಸಲಾಯಿತು. ಉಜಿರೆಯಿಂದ ಸುಮಾರು 10,000ಕ್ಕೂ ಅಧಿಕ ಮಂದಿ ಪಾದ ಯಾತ್ರೆ ಮೂಲಕ ಆಗಮಿಸಿದ್ದರು. 6 ಟ್ಯಾಬ್ಲೋಗಳು, ಭಜನ ತಂಡಗಳಿದ್ದವು. ಮೂರು ಕಡೆ ಪಾನೀಯದ ವ್ಯವಸ್ಥೆ, ಒಂದು ಕಡೆ ಕ್ಯಾಂಡಿ ವ್ಯವಸ್ಥೆ ಇತ್ತು. ಜಿಲ್ಲೆಯ ವಿವಿಧೆಡೆಗಳಿಂದ ನಾಗರಿಕರು ಆಗಮಿಸಿದ್ದರು.
ಮೋದಿ ಸಂಕಲ್ಪಪ್ರಧಾನಿ ಮೋದಿ ಭೇಟಿ ಸಂದರ್ಭ ದೇವಸ್ಥಾನದಲ್ಲಿ ವಿಶೇಷ ಸಂಕಲ್ಪ ಮಾಡಲಾಗಿತ್ತು. ಸಾಮಾನ್ಯವಾಗಿ ಸೇವೆ ಮಾಡಿದವರಿಗೆ, ಅವರ ಮನೆಯವರಿಗೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದರೆ ಪ್ರಧಾನಿ ಮೂಲಕ ದೇಶಕ್ಕೆ ಒಳಿ ತಾಗಲಿ, ದೇಶದ ಶತ್ರುಭಯ ನಿವಾರಣೆಯಾಗಲಿ ಎಂಬಿತ್ಯಾದಿ ಸಂಕಲ್ಪ ಮಾಡಲಾಗಿತ್ತು,. ಇದು ಉದಯವಾಣಿಯಲ್ಲಿ ಮುಖಪುಟದಲ್ಲಿ ವರದಿಯಾಗಿದೆ.
– ಡಾ| ಹೆಗ್ಗಡೆ – Photo Credits: Jagadeesh Jain, Janani Studio, Dharmasthala