Advertisement

ರಕ್ತ ಪರೀಕ್ಷೆಯಿಂದ ಜೀವ ಉಳಿಸುವ ಯೋಜನೆ

04:22 PM Nov 28, 2019 | Team Udayavani |

ಹೊನ್ನಾವರ: ಗ್ರಾಮೀಣ ಆಸ್ಪತ್ರೆಗಳಿಗೆ ಇಸಿಜಿ ಉಪಕರಣ ಉಚಿತವಾಗಿ ನೀಡಿ, ಅಲ್ಲಿಗೆ ಬರುವ ಜನರ ಇಸಿಜಿ ವರದಿಯನ್ನು ವಾಟ್ಸ್‌ಆ್ಯಪ್‌ಮೂಲಕ ತರಿಸಿಕೊಂಡು ತಕ್ಷಣ ಚಿಕಿತ್ಸೆ ಸೂಚಿಸುವ ನೂತನ ಯೋಜನೆ ಯಶಸ್ವಿಯಾಗಿಸಿದ ಮಂಗಳೂರು ಕೆಎಂಸಿ ಆಸ್ಪತ್ರೆ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಇನ್ನೂಕಡಿಮೆ ವೆಚ್ಚದಲ್ಲಿ, ಕೇವಲ ರಕ್ತ ಪರೀಕ್ಷೆಯಿಂದ ಹೃದಯ ರೋಗ ಗುರುತಿಸಿ ಸ್ಥಳದಲ್ಲೇ ತುರ್ತುಔಷಧ ನೀಡಿ ಜೀವ ಉಳಿಸುವ ಇನ್ನೊಂದು ಯೋಜನೆ ತಂದಿದ್ದು ಅದೀಗ ಒಂದು ವರ್ಷ ಪೂರೈಸಿದೆ.

Advertisement

ಈಗಾಗಲೇ ಭಟ್ಕಳ ಮತ್ತು ಮುಡೇಶ್ವರದಲ್ಲಿಬಳಕೆಯಾಗುತ್ತಿದ್ದು ಉತ್ತರಕನ್ನಡದಲ್ಲಿಡಿಸೆಂಬರ್‌ ನಲ್ಲಿ ಎಲ್ಲ ತಾಲೂಕಿಗೆ ವಿಸ್ತರಿಸಲಿದೆ. ಡಾ| ಕಾಮತರ ಸಿಎಡಿ (ಮನೆಬಾಗಲಿಗೆ ಹೃದಯ ವೈದ್ಯರು) ಯೋಜನೆಯಲ್ಲಿ ದೇಶಾದ್ಯಂತ 1250 ವೈದ್ಯರು ವಾಟ್ಸ್‌ಆ್ಯಪ್‌ ಚಿಕಿತ್ಸೆ ನೀಡುತ್ತಿದ್ದು 200ಕ್ಕೂ ಹೆಚ್ಚು ಇಸಿಜಿ ಯಂತ್ರಗಳನ್ನುಪೂರೈಸಲಾಗಿದೆ. 2018 ನವೆಂಬರ್‌ನಲ್ಲಿ ಆರಂಭಿಸಿರುವ ಪ್ರೊಜೆಕ್ಟ್ ಲೈಫ್‌ ಕಿಟ್‌ (ಜೀವ ಸಂಜೀವಿನಿ ಪೆಟ್ಟಿಗೆ) ಯೋಜನೆಯಲ್ಲಿ ಈಗಾಗಲೇಹಲವು ಹಳ್ಳಿಗೆ ಈ ಯೋಜನೆ ತಲುಪಿದೆ. ಗ್ರಾಮೀಣ ವೈದ್ಯರನ್ನು ತಲುಪಿ ತಮ್ಮ ಔಷಧ ಕಂಪನಿ ಉತ್ಪನ್ನಗಳನ್ನು ಪ್ರಚಾರ ಮಾಡುವಎಕ್ಸಿಕ್ಯುಟಿವ್ಸ್‌ಗಳನ್ನು ತರಬೇತಿಗೊಳಿಸಲಾಗಿದೆ.

ತಮ್ಮ ಕಂಪನಿಯ ಪರವಾನಗಿ ಪಡೆದುಸ್ವಯಂ ಸ್ಫೂರ್ತಿಯಿಂದ ಇದರಲ್ಲಿ 50ಜನ ಪಾಲ್ಗೊಂಡಿದ್ದಾರೆ. ಇವರನ್ನು ಕಾಲುನಡಿಗೆ ವೈದ್ಯರು ಎಂದು ಕರೆಯಬಹುದು. ಇವರು 90ಹಳ್ಳಿಗಳಲ್ಲಿ ಈಗಾಗಲೇ ಸಕ್ರೀಯರಾಗಿದ್ದಾರೆ. ಅಂದಾಜು 100ರೂ. ಬೆಲೆಬಾಳುವ ಔಷಧಮತ್ತು ರಕ್ತಪರೀಕ್ಷೆಯಿಂದ ಹೃದಯಾಘಾತ ಗುರುತಿಸುವ ವಿಶೇಷ ಸ್ಲೈಡ್ ಗಳಿರುತ್ತವೆ. ಹೃದಯಾಘಾತವಾದಾಗ ಕೆಲವು ಎಂಜೈಮ್‌ಗಳು ಬಿಡುಗಡೆ ಆಗುತ್ತವೆ. ರಕ್ತ ಪರೀಕ್ಷಿಸಿದಾಗ ಎಂಜೈಮ್‌ಗಳಿದ್ದರೆ ಅವರಿಗೆ ಜೀವರಕ್ಷಕ ಔಷಧಗಳನ್ನು ಅಲ್ಲಿಯೇ ಕೊಟ್ಟು ಹೆಚ್ಚಿನ ಚಿಕಿತ್ಸೆಗೆ ತೆರಳುವಂತೆ ಸೂಚಿಸಲಾಗುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇಂತಹ 1ಸಾವಿರ ಕಿಟ್‌ಗಳನ್ನು ನೂರು ಆಸ್ಪತ್ರೆಗಳಿಗೂನೀಡಲಾಗಿದೆ. ಮುಂದಿನ ವರ್ಷ 2500ಕಿಟ್‌ ಗಳನ್ನು ನೀಡುವ ಯೋಜನೆ ಇದೆ.

ಈಯೋಜನೆಯನ್ನು ನೆರೆಯ ರಾಜ್ಯಗಳಿಗೂ ವಿಸ್ತರಿಸುವ ವಿಚಾರವಿದೆ. ಹೃದಯಾಘಾತಗುರುತಿಸುವಲ್ಲಿ ಈ ಕಿಟ್‌ಗಳ ಬಳಕೆಯಾಗಲಿದೆ.ಆರಂಭದಲ್ಲಿ 400 ಸ್ಲೈಡ್  ಗಳನ್ನೊಳಗೊಂಡ 10ಕಿಟ್‌ಗಳಿಗೆ 4000ರೂ. ಬೆಲೆ ಇತ್ತು. ಈಗ ಸ್ಲೈಡ್ಗೆ 70ರೂ.ನಂತೆ 700ರೂ.ಗೆ ಪೆಟ್ಟಿಗೆ ದೊರೆಯುತ್ತದೆ. ಇಂಡಿಯನ್‌ ಸ್ಟಾರ್ಟ್‌ ಅಪ್‌ ಯೋಜನೆ ಅನ್ವಯ ಬೆಂಗಳೂರಿನಲ್ಲಿ ಆರಂಭವಾದ ಪುತ್ತೂರಿನ ಶಾಮ್‌ ಭಟ್‌ರ ಭಟ್‌ ಬಯೋಟೆಕ್‌ ಕಂಪನಿ ನಮ್ಮ ಉದ್ದೇಶವನ್ನು ಗಮನಿಸಿ ನಮಗೆ ಕಡಿಮೆ ದರದಲ್ಲಿ ಪೆಟ್ಟಿಗೆಯನ್ನು ಪೂರೈಸುತ್ತಿದೆ ಎಂದು ಡಾ| ಪದ್ಮನಾಭ ಕಾಮತ್‌ ಹೇಳಿದ್ದಾರೆ.

ಆಧುನಿಕ ಜೀವನ ವಿಧಾನ ಹಳ್ಳಿಗಳಿಗೂ ಹೊಕ್ಕಿದ್ದು ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಹಳ್ಳಿಗಳಲ್ಲೂ ಹೃದಯ ವೈದ್ಯರ ಸೇವೆನೀಡುವುದು ಸಾಧ್ಯವಿಲ್ಲ. ಇಸಿಜಿ ಉಪಕರಣ ಕನಿಷ್ಠ 25ಸಾವಿರ ರೂ. ಬೆಲೆಬಾಳುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಹಳ್ಳಿಗರನ್ನು ತಲುಪಿ ಜೀವ ಉಳಿಸುವ ಈ ಜೀವ ಸಂಜೀವಿನಿ ಪೆಟ್ಟಿಗೆಯಾಗಿದೆ ಎಂದು ಹೇಳಿದ್ದಾರೆ. ಉತ್ತರಕನ್ನಡದ ಮಟ್ಟಿಗೆ ಎಲ್ಲಾ ಆಸ್ಪತ್ರೆಗಳಲ್ಲೂ ಇಂತಹ ಪೆಟ್ಟಿಗೆಗಳನ್ನು ದಾನಿಗಳು ನೀಡಿದರೆ ನೂರಾರು ಜೀವಗಳು ಉಳಿದು ಅವರ ಕುಟುಂಬದ ರಕ್ಷಣೆಯೂ ಆಗುತ್ತದೆ.

Advertisement

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next