Advertisement

ಜೀವ ರಕ್ಷಣೆ ಜೀವನ ಪೂರ್ತಿ ನಡೆಯಲಿ: ಬಿಷಪ್‌

09:54 AM Mar 03, 2020 | sudhir |

ಮಂಗಳೂರು: ಮಾನವ ಜೀವ ಅಮೂಲ್ಯ. ಅದಕ್ಕೆ ಗೌರವದ ಸ್ಥಾನಮಾನ ನೀಡಬೇಕು; ತನ್ನ ಜೀವಕ್ಕೆ ಅಥವಾ ಇತರರ ಜೀವಕ್ಕೆ ಎರವಾಗುವ ಕೆಲಸವನ್ನು ಯಾರೂ ಮಾಡಬಾರದು, ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಹೇಳಿದರು.

Advertisement

ಮಂಗಳೂರು ಧರ್ಮಪ್ರಾಂತ ಹಮ್ಮಿಕೊಂಡಿರುವ ಆತ್ಮಹತ್ಯೆ ತಡೆ ಅಭಿಯಾನವನ್ನು ಅವರು ರವಿವಾರ ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ನಾನು ಮನುಷ್ಯ ಜೀವದ ರಕ್ಷಕ; ಪ್ರತಿಯೊಬ್ಬ ಮನುಷ್ಯ ಜೀವದ ರಕ್ಷಣೆ, ಪೋಷಣೆ ಮತ್ತು ಅದರ ಅಭಿವೃದ್ಧಿ ನನ್ನ ಜವಾಬ್ದಾರಿ ಎಂಬುದಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.

ಇಂದಿನ ದಿನಗಳಲ್ಲಿ ವಿಶೇಷವಾಗಿ ಭಾರತದಲ್ಲಿ ಯುವಜನತೆ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಏರುಗತಿಯಲ್ಲಿವೆ. ಆತ್ಮಹತ್ಯೆಯನ್ನು ತಡೆಯುವ ಕೆಲಸ ಮತ್ತು ಜೀವವನ್ನು ಉಳಿಸುವ ಕಾರ್ಯವು ಜೀವನಪೂರ್ತಿ ನಡೆಯಬೇಕು ಎಂದರು.

ರೊಜಾರಿಯೊ ಕೆಥೆಡ್ರಲ್‌ನ ರೆಕ್ಟರ್‌ ಫಾ| ಜೆ.ಬಿ ಕ್ರಾಸ್ತಾ, ಸಹಾಯಕ ಗುರುಗಳು, ಚರ್ಚ್‌ ಪಾಲನ ಮಂಡಳಿಯ ಉಪಾಧ್ಯಕ್ಷ ಎಲಿಜಬೆತ್‌ ರೋಚ್‌, ಕಾರ್ಯದರ್ಶಿ ಆಲ್ವಿನ್‌ ತಾವ್ರೊ ಉಪಸ್ಥಿತರಿದ್ದರು.

Advertisement

ಮುಖ್ಯ ಅತಿಥಿ ರೋಶಿನಿ ನಿಲಯದ ಪ್ರಾಧ್ಯಾಪಕಿ ಸಿ| ಎವಿÉನ್‌ ಬೆನ್ನಿಸ್‌ ಅವರು ಆತ್ಮಹತ್ಯೆಯ ಕಾರಣಗಳು ಮತ್ತು ದುಷ್ಪರಿಣಾಮಗಳು ಹಾಗೂ ಆತ್ಮಹತ್ಯೆಯ ದುರಾಲೋಚನೆಯಿಂದ ಹೇಗೆ ಪಾರಾಗಬಹುದೆಂದು ವಿವರಿಸಿದರು.
ಲಿಲ್ಲಿ ಕುಟಿನ್ಹೊ ಕಾರ್ಯಕ್ರಮ ನಿರ್ವಹಿಸಿದರು. ಕುಟುಂಬ ಹಿತ ಸಮಿತಿಯ ಕಾರ್ಯದರ್ಶಿ ಗಿಲ್ಬರ್ಟ್‌ ಡಿ’ಸಿಲ್ವಾ ವಂದಿಸಿದರು.

ಎಲ್ಲ ಚರ್ಚ್‌ಗಳಲ್ಲಿ ಆಚರಣೆ
ಆತ್ಮಹತ್ಯೆ ತಡೆ ದಿನವನ್ನು ರವಿವಾರ ಮಂಗಳೂರು ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಆಚರಿಸಲಾಯಿತು.

ಕರಪತ್ರ, ಜಾಗೃತಿ ರಿಬ್ಬನ್‌ ಬಿಡುಗಡೆ
ಆ ಬಳಿಕ ಮಿಲಾಗ್ರಿಸ್‌ ಹಾಲ್‌ನಲ್ಲಿ ಜರಗಿದ ಸಮಾರಂಭದಲ್ಲಿ ಬಿಷಪ್‌ ಅವರು ಆತ್ಮಹತ್ಯೆ ತಡೆ ಅಭಿಯಾನದ ಕರಪತ್ರ ಮತ್ತು ಜಾಗೃತಿ ರಿಬ್ಬನ್‌ ಬಿಡುಗಡೆ ಮಾಡಿದರು. ಕೆನರಾ ಕಮ್ಯೂನಿಕೇಶನ್‌ ಸೆಂಟರ್‌ನ ನಿರ್ದೇಶಕ ಫಾ| ರಿಚಾರ್ಡ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next