ಸ್ವಾತಂತ್ರ್ಯ ಹೋರಾಟಗಾರ್ತಿಯರ ಸಾಲಿನಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರದ್ದು ಮುಂಚೂಣಿಯ ಹೆಸರು. ಕರಕುಶಲ ಮತ್ತು ಕೈ ಮಗ್ಗ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣರಾದ ಅವರು, ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕವನ್ನು ಸ್ಥಾಪಿಸಿದ್ದರು. ಈಗ ಆ ಸಂಸ್ಥೆಗೆ ಸುವರ್ಣ ಮಹೋತ್ಸವದ ಸಂಭ್ರಮ.
ಇದರ ಪ್ರಯುಕ್ತ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಮತ್ತು ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕ ಸಹಭಾಗಿತ್ವದಲ್ಲಿ, “ಕಮಲಾದೇವಿ ಚಟ್ಟೋಪಾಧ್ಯಾಯ: ಆ್ಯನ್ ಎಕ್ಸ್‌ಟ್ರಾ ಆರ್ಡಿನರಿ ಲೈಫ್’ ಎಂಬ 10 ದಿನಗಳ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ.
ಜ. 20ರಂದು ಸಂಜೆ 5ಕ್ಕೆ, ಆರ್ಥಿಕ ತಜ್ಞೆ, ಕಮಲಾದೇವಿ ಅವರ ಸ್ನೇಹಿತೆ ಪದ್ಮಭೂಷಣ ಡಾ. ದೇವಕಿ ಜೈನ್ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಮಲಾದೇವಿ ಅವರ ಬಾಲ್ಯ ಹಾಗೂ ಹೋರಾಟದ ದಿನಗಳ ಹಳೆಯ ಮತ್ತು ಅಪರೂಪದ 35ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಮಲಾರವರು ಧರಿಸಿದ್ದ ಕಾಂಜೀವರಂ ಮತ್ತು ಕಾಟನ್ ಸೀರೆಗಳನ್ನು ಸಹ ಪ್ರದರ್ಶನಕ್ಕಿಡಲಾಗುವುದು.
ಎಲ್ಲಿ?: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, # 49, ಮಾಣಿಕ್ಯವೇಲು ಮ್ಯಾನನ್, ಪ್ಯಾಲೇಸ್ ರೋಡ್
ಯಾವಾಗ?: ಜ.21-30 ಬೆಳಗ್ಗೆ 10-5 (ಸೋಮವಾರ ಮತ್ತು ರಜಾದಿನ ಹೊರತುಪಡಿಸಿ)
ಸಂಪರ್ಕ: 080 22342338/22201027