Advertisement

ಅಫಜಲಪುರ ಅಭಿವೃದ್ಧಿಗೆ ಜೀವ ಮುಡಿಪು

04:59 PM Jul 13, 2021 | Team Udayavani |

ಅಫಜಲಪುರ: ನನಗೆ ಮತ ನೀಡಿ ಗೆಲ್ಲಿಸಿದ ಮತದಾರ ಪ್ರಭುಗಳ ಋಣ ತೀರಿಸುವ ಕೆಲಸ ನನ್ನದು. ಕ್ಷೇತ್ರದ ಅಭಿವೃದ್ಧಿಗಾಗಿ ಜೀವ ಮುಡಿಪಾಗಿಟ್ಟಿದ್ದೇನೆ ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು.

Advertisement

ಚಿನಮಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕು ಅಭಿವೃದ್ಧಿಯಾಗಬೇಕಾದರೆ ಗ್ರಾಮೀಣ ಪ್ರದೇಶದ ಜನರ ಬದುಕು ಮತ್ತು ರೈತರ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ 58 ಕೋಟಿ ರೂ. ವೆಚ್ಚದಲ್ಲಿ 16 ಕೆರೆ ತುಂಬುವ ಯೋಜನೆ ಮಾಡಿಸಿದ್ದೇನೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ.

ಚಿನಮಳ್ಳಿ ಗ್ರಾಮದಲ್ಲಿನ ಬ್ರಿಜ್‌ ಕಂ ಬ್ಯಾರೇಜ್‌ಗೆ ಹೈಡ್ರಾಲಿಕ್‌ ಗೇಟ್‌ಗಾಗಿ 60 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ತಡೆಗೋಡೆಗಾಗಿ 16 ಕೋಟಿ ಖರ್ಚು ಮಾಡಲಾಗುತ್ತಿದೆ. ಅಲ್ಲದೆ ಗ್ರಾಮದಲ್ಲಿನ ದಕ್ಷಿಣ ಕಾಶಿ ಖ್ಯಾತಿಯ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ 1.28 ಕೋಟಿ ಅನುದಾನದ ಕ್ರಿಯಾ ಯೋಜನೆ ಮಾಡಲಾಗಿದ್ದು, ಆದಷ್ಟು ಬೇಗ ಅನುದಾನ ಬರಲಿದೆ ಎಂದರು. ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್‌ ಅವರಿಗೆ ಅಭಿವೃದ್ಧಿ ಕೆಲಸ ಬಂದಾಗ ಯಾವ ಊರು, ಯಾವ ಜನರೆಂದು ನೋಡುವುದಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಒಂದಿಲ್ಲೊಂದು ಕಾಮಗಾರಿಗೆ ಅಡಿಗಲ್ಲು, ಚಾಲನೆ, ಉದ್ಘಾಟನೆಗಳು ನಡೆಯುತ್ತಿವೆ.

ನಾನು ಕೂಡ ಜಿ.ಪಂ ಉಪಾಧ್ಯಕ್ಷೆಯಾಗಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ಶಾಲಾ ಕಟ್ಟಡಗಳು, ರಸ್ತೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದೇನೆ ಎಂದರು. ಮುಖಂಡ ಬಾಷಾ ಪಟೇಲ್‌ ಹಸರಗುಂಡಗಿ ಮಾತನಾಡಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ನಮ್ಮ ನಾಯಕರಾದ ಎಂ.ವೈ. ಪಾಟೀಲ್‌ ಅವರನ್ನು ಟೀಕಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ. ಹೀಗಾಗಿ ಮಾಲೀಕಯ್ಯ ಗುತ್ತೇದಾರ ತಮ್ಮ ಕೂಲಿಂಗ್‌ ಗ್ಲಾಸ್‌ ತೆಗೆದಿಟ್ಟು ಮತಕ್ಷೇತ್ರದಲ್ಲಿ ಓಡಾಡಲಿ ಆಗಲಾದರೂ ಅವರಿಗೆ ಶಾಸಕರ ಅಭಿವೃದ್ಧಿ ಕೆಲಸಗಳು ಕಾಣುತ್ತವೆ ಎಂದರು. ಮುಖಂಡ ಸಿದ್ದು ಶಿರಸಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್‌ ಅವರ ಅಭಿವೃದ್ಧಿ ಕೆಲಸಗಳು ವಿರೋಧಿ  ಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಟೀಕೆ ಮಾಡುತ್ತಾರೆ.

ಆದರೆ ಶಾಸಕರು ಯಾರ ಟೀಕೆಗೂ ಕಿವಿಗೊಡದೆ ಅಭಿವೃದ್ಧಿ ಕೆಲಸಗಳ ಮೂಲಕವೇ ಎಲ್ಲರಿಗೂ ಉತ್ತರ ನೀಡುತ್ತಿದ್ದಾರೆ. ಚಿನಮಳ್ಳಿ ಗ್ರಾಮ ಮುಂಬರುವ ದಿನಗಳಲ್ಲಿ ಆದರ್ಶ ಗ್ರಾಮವಾಗಲಿದೆ ಎಂದರು. ಹಸರಗುಂಡಗಿ ಗ್ರಾ.ಪಂ ಅಧ್ಯಕ್ಷ ಬೈಲಪ್ಪ ಪಟ್ಟೆದಾರ, ಸಿದ್ದು ಶಿರಸಗಿ, ಅಜಯ್‌ ಪಾಟೀಲ್‌, ಪ್ರಭು ಸಾಹುಕಾರ, ಪ್ರಭು ಹಿರಾಪೂರ, ಶರಣು ಕುಂಬಾರ, ಮಲ್ಲಿಕಾರ್ಜುನ ನಾಟಿಕಾರ, ಶರಣು ಜಮಾದಾರ, ಶಾಮರಾಯ ಪಾಟೀಲ್‌, ಲಕ್ಷ್ಮಣ ಪಾಟೀಲ್‌, ಕಲ್ಲು ಸಾಹುಕಾರ, ಅಸ್ಪಾಕ ಬಂದರವಾಡ, ಅವ್ವಣ್ಣಗೌಡ ಕಿರಸಾವಳಗಿ, ನಾಗರಾಜ ಮೇಳಕುಂದಾ, ಶರಣು ತಳಕೇರಿ, ಶರಣು ಗುಜ್ಜ, ಕೆಆರ್‌ ಐಡಿಎಲ್‌ ಜೆಇ ರಾಜಶೇಖರ, ಪಿಡಿಒ ಸೇರಿದಂತೆ ಇತರರು ಇದ್ದರು. ಭೋಜರಾವ ಪಾಟೀಲ್‌ ಸ್ವಾಗತಿಸಿದರು. ಶಿವು ಬೆಳಗುಂಪಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next