Advertisement
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ಅವರಿಂದ ಪ್ರತಿದಿನ ಬೆಳಗ್ಗೆ 6:00ಕ್ಕೆ ಆಧ್ಯಾತ್ಮಿಕ ಚಿಂತನ, ಬದುಕಿನ ಮೌಲ್ಯಗಳ ಕುರಿತು ಪ್ರವಚನ ನಡೆಯುತ್ತಿರುವುದರಿಂದ ಜನರು ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿರುವುದು ಕಂಡು ಬರುತ್ತಿದೆ. 10-15ನೇ ನಿಮಿಷದ ಅವಧಿಯಲ್ಲಿ ಮೈದಾನ ತುಂಬುವಷ್ಟು ಜನರು ಬಂದು ಪೂಜ್ಯರ ಸಂದೇಶ ಆಲಿಸುತ್ತಿದ್ದಾರೆ. ಸಿದ್ದೇಶ್ವರ ಪೂಜ್ಯರ ಪ್ರವಚನ ಜನರಲ್ಲಿ ಬಾರಿ ಪರಿಣಾಮ ಬೀರಿದೆ.
Related Articles
ಇದಲ್ಲದೇ ಜನಪ್ರತಿನಿಧಿಗಳು, ವೈದ್ಯರು, ನ್ಯಾಯವಾದಿಗಳು ಸೇರಿದಂತೆ ಸಮಾಜದ ಇತರ ವಿವಿಧ ಕ್ಷೇತ್ರಗಳ ಗಣ್ಯರು ಪ್ರವಚನಕ್ಕೆ ತಪ್ಪದೇ ಆಗಮಿಸುತ್ತಿದ್ದು, ದಿನೇ-ದಿನೇ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವುದು ಆಯೋಜಕರ ಉತ್ಸಾಹ ಇಮ್ಮಡಿಗೊಳಿಸುವಂತಾಗಿದೆ.
Advertisement
ಬೆಳಗ್ಗೆ ನೂತನ ವಿದ್ಯಾಲಯದಲ್ಲಿ ಪ್ರವಚನವಲ್ಲದೇ ಗುಲಬರ್ಗಾ ವಿವಿ ಕೈಲಾಸ ಅತಿಥಿಗೃಹದ ಹೊರಾಂಗಣದಲ್ಲಿಪ್ರತಿದಿನ ಸಂಜೆ 6:00ಕ್ಕೆ ವಿಷಯವೊಂದರಕ್ಕೆ ಸಂಬಂಧಿಸಿದಂತೆ ಚರ್ಚೆಯೂ ನಡೆಯುತ್ತದೆ. ಇದಕ್ಕೂ ಮಹಾನಗರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದೆ. ಪ್ರತಿ ರವಿವಾರವಂತೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಂಗ್ಲ ಭಾಷೆಯಲ್ಲಿ ಪ್ರವಚನ ಮಂಡಿಸುತ್ತಾರೆ. ಒಟ್ಟಾರೆ ಸಿದ್ದೇಶ್ವರ ಪ್ರವಚನ ಕಲಬುರಗಿ ಮಹಾನಗರದಲ್ಲಿ ಸಂಚಲನ ಮೂಡಿಸಿದ್ದು, ಜನ ಜೀವನದಲ್ಲಿ ಬದಲಾವಣೆಯಾದರೆ ಪ್ರವಚನ ಮತ್ತಷ್ಟು ಸಾರ್ಥಕತೆ ಪಡೆದಂತಾಗುತ್ತದೆ. ಫೆ. 16ರವರೆಗೆ ಮಾತ್ರ ಪ್ರವಚನ ನಡೆಯಲಿದ್ದು, ಇನ್ನುಳಿದ ನಾಗರಿಕರು ಆಧ್ಯಾತ್ಮಿಕ ಪ್ರವಚನ ಶ್ರವಣ ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ
ಅದರಕ್ಕಿಂತ ದೊಡ್ಡದು ಮತ್ತೂಂದಿಲ್ಲ ಏನಿಸುತ್ತದೆ.