Advertisement
ಶುಕ್ರವಾರ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಮೂಹ ಸಂಸ್ಥೆ ಆಯೋಜಿಸಿದ್ದ ಸಂಸ್ಥೆಯ 41ನೇ ವಾರ್ಷಿಕೋತ್ಸವ ಹಾಗೂ 75 ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿದರು.
Related Articles
Advertisement
ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಬಸವರಾಜ ಕೊನೇಕ್, ಸಿದ್ದಲಿಂಗ ಕೊನೇಕ್, ಶರಣಬಸವ ಕೊನೇಕ್, ಹಿರಿಯ ಸಾಹಿತಿಗಳಾದ ಡಾ| ಗೀತಾ ನಾಗಭೂಷಣ, ಡಾ| ವಸಂತ ಕುಷ್ಟಗಿ, ಡಾ|ಸ್ವಾಮಿರಾವ್ ಕುಲಕರ್ಣಿ, ಎ.ಕೆ. ರಾಮೇಶ್ವರ, ಚಿ.ಸಿ. ನಿಂಗಣ್ಣ, ಕಾವ್ಯಶ್ರೀ ಮಹಾಗಾಂವಕರ್, ಉಮೇಶ ಶೆಟ್ಟಿ ಹಾಗೂ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ 75 ಪುಸ್ತಕಗಳ ಲೇಖಕರನ್ನು ಸನ್ಮಾನಿಸಲಾಯಿತು. ಪ್ರೊ| ಶಿವರಾಜ ಪಾಟೀಲ ನಿರೂಪಿಸಿದರು.
ಪುಸ್ತಕೋದ್ಯಮ ಮಾರುಕಟ್ಟೆಯಲ್ಲಿ ಭಾರತಕ್ಕೆ ಆರನೇ ಸ್ಥಾನ ಪುಸ್ತಕೋದ್ಯಮದ ಮಾರುಕಟ್ಟೆಯಲ್ಲಿ ವಿಶ್ವದ ಮಾರುಕಟ್ಟೆಗೆ ಹೋಲಿಸಿದರೆ ಭಾರತಕ್ಕೆ 6ನೇ ಸ್ಥಾನದಲ್ಲಿದ್ದರೆ ಇಂಗ್ಲಿಷ ಪುಸ್ತಕಕ್ಕೆ ಹೋಲಿಸಿದರೆ ಎರಡನೇ ಸ್ಥಾನದಲ್ಲಿದೆ. ಭಾರತ ಪುಸ್ತಕ ಮಾರುಕಟ್ಟೆಯಲ್ಲಿ ವಿದೇಶಿ ಮಾರುಕಟ್ಟೆ ಪ್ರವೇಶ ಮಾಡಿದ್ದು, ವಿವಿಧ ಪ್ರಕಾಶನ ಸಂಸ್ಥೆಗಳು ಅನನ್ಯ ಸೇವೆ ಸಲ್ಲಿಸುತ್ತಿವೆ. ಹೀಗಾಗಿ ದೇಶದ 75 ಲಕ್ಷ ಗ್ರಂಥಗಳು ಡಿಜಿಟಲೈಸ್ ಆಗಿವೆ. ಶೇ.75ರಷ್ಟು ಪುಸ್ತಕಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ.
ಪ್ರೊ| ಎಚ್.ಎಂ. ಮಹೇಶ್ವರಯ್ಯ, ಕುಲಪತಿಗಳು, ಕರ್ನಾಟಕ ಕೇಂದ್ರೀಯ ವಿವಿ