Advertisement

ಪದವೇ ಬಂಗಾರ ಇವರಿಗೆ!

07:21 PM Feb 16, 2021 | Team Udayavani |

ಪಾ ವೆಂ ಆಚಾರ್ಯರು ಶಬ್ದಮೀಮಾಂಸಕರು. ಒಂದೊಂದು ಶಬ್ದದ ಅರ್ಥಗಳನ್ನೂ ಹಿಂಜಿ ಅವುಗಳ ಒಳಾರ್ಥ, ವಿಶೇಷಾರ್ಥ, ಧ್ವನ್ಯಾರ್ಥ, ಅನ್ಯಾರ್ಥಗಳನ್ನೆಲ್ಲ ದಿನಗಟ್ಟಲೆ ಯೋಚಿಸುತ್ತಿದ್ದವರು. ಒಮ್ಮೆ ಅವರಿಗೆ ಯಾವುದೋ ಶಬ್ದದ ವ್ಯುತ್ಪತ್ತಿಯ ಬಗ್ಗೆ ತಿಳಿಯಬೇಕಾಗಿತ್ತು. ಅವರಿವರನ್ನು ಕೇಳಿದರು, ಮನೆಯಲ್ಲಿ, ಆಫೀಸಿನಲ್ಲಿ ಇದ್ದ ಪುಸ್ತಕಗ್ತ ಳನ್ನೆಲ್ಲ ತಡಕಾಡಿದರು, ಊರಿನ ಲೈಬ್ರರಿಯ ಪುಸ್ತಕಗಳಲ್ಲೂ ಹುಡುಕಿದರು. ಊಹ್ಞೂ, ಅವರಿಗೆ ಬೇಕಾದಷ್ಟು ವಿವರಗಳು ಸಿಗಲಿಲ್ಲ. ಕೊನೆಗೆ ಉಡುಪಿಯಲ್ಲಿದ್ದ ಬನ್ನಂಜೆ ಗೋವಿಂದಾ ಚಾರ್ಯರನ್ನು ಭೇಟಿಯಾಗಬೇಕೆಂದು ನಿಶ್ಚಯಿಸಿ ಉಡುಪಿಗೆ ಬಂದರು. ಅಲ್ಲಿ ಇಬ್ಬರೂ ವಿದ್ವಾಂಸರನಡುವೆ ತಾಸು-ತಾಸೆರಡರಷ್ಟು ಹೊತ್ತು ಗಂಭೀರ ಚರ್ಚೆ ನಡೆಯಿತು. ಅಂತೂ ಪಾವೆಂ ಅವರಿಗೆ ತೃಪ್ತಿಯಾಗುವಷ್ಟು ಮಾಹಿತಿ ಸಿಕ್ಕಿತು. “ಬರುತ್ತೇನೆ” ಎಂದು ಕೃತಜ್ಞತಾಪೂರ್ವಕ ನಮಸ್ಕರಿಸಿ ಅವರು ಹೊರಟರು.

Advertisement

ಪಾವೆಂ, ಬನ್ನಂಜೆಯವರ ಮನೆಯಿಂದ ಹೊರಟು ಹದಿನೈದು ನಿಮಿಷವಾಗಿತ್ತೋ ಇಲ್ಲವೋ, ಮತ್ತೆ ಕರೆಗಂಟೆ ಮೊಳಗಿತು. ಬಾಗಿಲು ತೆರೆದರೆ ಮತ್ತದೇ ಪಾವೆಂ! “ಕ್ಷಮಿಸಿ ಆಚಾರ್ಯರೇ, ಮಾತಾಡುವ ಭರದಲ್ಲಿ ಕೇವಲ ಒಂದೇ ಶಬ್ದದ ಬಗ್ಗೆ ಚರ್ಚೆ ಮಾಡುವುದಾಯಿತು. ನಾನು ಬಂದಿದ್ದದ್ದು ಎರಡು ಶಬ್ದಗಳ ಬಗ್ಗೆ ಚರ್ಚೆ ಮಾಡಬೇಕೆಂದು! ಆದರೆ ನಿಮ್ಮ ಅರ್ಥ-ವಿವರಣೆಗಳಿಂದಾಗಿ ಎಷ್ಟು ಖುಷಿಯಾಗಿತ್ತೆಂದರೆ ಆ ಎರಡನೇ ಶಬ್ದದ ವಿಚಾರವೇ ಮರೆತುಹೋಗಿತ್ತು. ದಾರಿಯಲ್ಲಿ ಹೋಗುವಾಗ ನೆನಪಾಗಿಬಿಟ್ಟಿತು. ಅದಕ್ಕೇ ಬಂದೆ!” ಎಂದರು.

ಪಾವೆಂ! ಶಬ್ದಗಳ ವಿಚಾರದಲ್ಲಿ ತುಂಬ ತಲೆಕೆಡಿಸಿಕೊಳ್ಳುತ್ತಿದ್ದ ಇನ್ನೋರ್ವ ಕನ್ನಡದ ಸಾಹಿತಿ ಎಂದರೆ ಗೋಪಾಲಕೃಷ್ಣ ಅಡಿಗರು.”ಶ್ರೀರಾಮನವಮಿಯ ದಿವಸ” ಕವಿತೆಯನ್ನು ಬರೆಯುವಾಗ “ಸುಟ್ಟಲ್ಲದೇ ಮುಟ್ಟೆನೆಂಬ..” ಎಂಬಸಾಲುಗಳನ್ನು ಬರೆದು ಮುಂದಿನ ಶಬ್ದವಾಗಿಏನನ್ನು ಬರೆಯಬೇಕು ಎಂಬ ಯೋಚನೆ ಬಂತು. ಇಡೀ ಪದ್ಯ ಪೂರ್ತಿಯಾದರೂ ಅದೊಂದು ಶಬ್ದ ಅಡಿಗರ ತಲೆತಿನ್ನತೊಡಗಿತು. ಆ ನಿರ್ದಿಷ್ಟಜಾಗದಲ್ಲಿ ಹಾಕಬೇಕಾದ ಶಬ್ದ ಯಾವುದು? ಹಗಲಿರುಳು ಅದೇ ಯೋಚನೆಯಾಯಿತು.

ಯಾವ್ಯಾವ ಪದಗಳನ್ನು ಬರೆದರೂ ಸಮಾಧಾನವಾಗಲಿಲ್ಲ. ಸರಿಯಾಗಿ ನಿದ್ದೆಯೂ ಬರಲಿಲ್ಲ. ಬಹಳಷ್ಟು ದಿನಗಳಾದ ಬಳಿಕ ಅಲ್ಲಿ ಅಡಿಗರು “ಉಡಾಫೆ” ಎಂಬ ಶಬ್ದ ಬರೆದು, “ಆಹಾ, ಇದೇ ಸರಿಯಾದುದು” ಎಂದು ನೆಮ್ಮದಿಯಿಂದ ನಿಟ್ಟುಸಿರುಬಿಟ್ಟರಂತೆ!

 

Advertisement

 

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next