Advertisement

ತರಕಾರಿ ಬೆಳೆಯಿಂದ ಬದುಕು ತಂಪಾಯ್ತು!

05:03 PM May 06, 2018 | |

ಮಲೆನಾಡಿನ ಭಾಗದಲ್ಲಿ ನೀರಿನ ವ್ಯವಸ್ಥೆ ಚೆನ್ನಾಗಿದ್ದರೂ ತರಕಾರಿ ಕೃಷಿ ನಡೆಸುವವರು ವಿರಳ. ಆದರೆ ಶಿವಮೊಗ್ಗ ಜಿಲ್ಲೆ  ಆಯನೂರು ಸಮೀಪದ ಉಬ್ಬನಹಳ್ಳಿಯ ನಾಗರಾಜ ಈ ಕೆಲಸ ಮಾಡಿದ್ದಾರೆ. ಇವರು ವೃತ್ತಿಯಲ್ಲಿ ಸರಕು ಸಾಗಣೆಯ ಬಾಡಿಗೆ ಆಟೋ ಓಡಿಸುತ್ತಾರೆ. ಜತೆಗೆ ವರ್ಷವಿಡೀ ತರಕಾರಿ ಕೃಷಿಯಲ್ಲಿ ಲಾಭ ಮಾಡುತ್ತಿದ್ದಾರೆ.

Advertisement

ಆಯನೂರಿನಿಂದ ಸವಳಂಗ ಹೆದ್ದಾರಿಗೆ ತಾಗಿಕೊಂಡಿರುವ ಉಬ್ಬನಹಳ್ಳಿ ಗ್ರಾಮದಲ್ಲಿ ಇವರ ಹೊಲವಿದೆ. ಒಂದು ಎಕ್ರೆ ವಿಸ್ತೀರ್ಣದ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಮಳೆಗಾಲ ಮುಕ್ತಾಯವಾಗುತ್ತಿದ್ದಂತೆ ಸೆಪ್ಟಂಬರ್‌ ತಿಂಗಳಿನಿಂದ ತರಕಾರಿ ಬೆಳೆಯುತ್ತಾರೆ.

ಆಟೋ ಬಾಡಿಗೆಗೆ ಹೋಗಿ ಮರಳಿ ಬರುತ್ತಿದ್ದಂತೆ ತರಕಾರಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಹೊಲದಲ್ಲಿ ಬಹು ವಾರ್ಷಿಕ ಫ‌ಸಲಿನ ಅಡಿಕೆ, ಬಾಳೆ,ನುಗ್ಗೆ, ತೆಂಗು ಮುಂತಾದ ಕೃಷಿ ನಡೆಸುತ್ತಿರುವ ಕಾರಣ, ತರಕಾರಿ ಗಿಡಗಳಿಗೆ ಹಾಯಿಸಿದ ನೀರು ಈ ಗಿಡಗಳಿಗೂ ತಾಗಿ ಪರೋಕ್ಷವಾಗಿ ಕೃಷಿ ನಡೆಸುವ ಇವರ ಈ ವಿಧಾನ ಉಳಿದ ರೈತರಿಗೆ ಮಾದರಿಯಾಗಿದೆ.

ಕೃಷಿ ಹೇಗೆ?
ಇವರು ತಮ್ಮ ಒಂದು ಎಕ್ರೆ ಹೊಲವನ್ನು 5 ಭಾಗ ಮಾಡಿಕೊಂಡಿದ್ದಾರೆ. ಒಂದೊಂದು ಭಾಗದಲ್ಲಿ ಬೇರೆ ಬೇರೆ ತರಕಾರಿ ಬೆಳೆಯುತ್ತಾರೆ. ಮೂಲಂಗಿ, ಚೌಳಿಕಾಯಿ, ಬೆಂಡೆಕಾಯಿ, ಬಸಳೆ ಸೊಪ್ಪು, ಹರಬೆ ಸೊಪ್ಪು, ಬದನೆ , ಟೊಮೇಟೊ ಇತ್ಯಾದಿ ಬೆಳೆಸಿದ್ದಾರೆ. ತರಕಾರಿ ಪಟ್ಟೆ ಸಾಲಿನ ಮಧ್ಯೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಮಧ್ಯೆ ಮಧ್ಯೆ ಬಾಳೆ, ನುಗ್ಗೆ , ಶುಂಠಿ, ಅರಿಸಿನ, ಅಡಿಕೆ, ತೆಂಗಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. 

ಎನ್‌.ಡಿ. ಹೆಗಡೆ, ಆನಂದಪುರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next