ಪರಿವರ್ತನೆಗೊಳಿಸಿ ವ್ಯಸನಮುಕ್ತರಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ’.
Advertisement
ಮಾದಕ ವ್ಯಸನಿಗಳಾಗಿದ್ದವರೇ ವ್ಯಸನ ಮುಕ್ತರಾಗಿ ಯಶಸ್ವಿ ಜೀವನ ನಡೆಸು ವುದರೊಂದಿಗೆ ಮಾದಕ ವಸ್ತುಗಳ ದಾಸರಾ ಗದಂತೆ ವ್ಯಸನಿಗಳಿಗೆ ಜಾಗೃತಿ ಮೂಡಿ ಸುತ್ತಿರುವ ಯಶೋಗಾಥೆ ಇದು. ಇದೇ ಯಶಸ್ಸಿನ ಕಥೆಯಡಿ ಎರಡು ವರ್ಷ ಗಳಲ್ಲಿ ನಗರದಲ್ಲಿ 50ಕ್ಕೂ ಹೆಚ್ಚು ಮಂದಿ ವ್ಯಸನದಿಂದ ಮುಕ್ತರಾಗಿ ಬದುಕು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
Related Articles
Advertisement
ಕಾಲೇಜಿನಲ್ಲಿ ಡ್ರಗ್ಸ್ ಚಟಕ್ಕೆ ಬಲಿಯಾದೆಜಾಗೃತಿ ಮೂಡಿಸುತ್ತಿರುವ ಹೆಸರು ಹೇಳಲಿಚ್ಛಿಸದ ಯುವಕನೋರ್ವ ಹೇಳುವ ಪ್ರಕಾರ, ತಾನು ಕಾಲೇಜು ಹಂತದಲ್ಲಿ ಡ್ರಗ್ಸ್ ಚಟಕ್ಕೆ ಬಲಿಯಾದೆ. ನಶೆ, ಗಮ್ಮತ್ತಿಗೋಸ್ಕರ ಸೇವನೆ ಮಾಡುತ್ತಿದ್ದದ್ದು ಚಟವಾಗಿ ಬೆಳೆಯಿತು. ಅದರಿಂದ ಹೊರಬರಲಾರದೆ ತುಂಬ ನರಕ ಅನುಭವಿಸಿದ್ದೆ. ಕೊನೆಗೆ ನಾರ್ಕೋಟಿಕ್ ಅನಾ ನಿಮಸ್ ಸಂಪರ್ಕ ಬೆಳೆದು, ಇಲ್ಲಿ ಸೇರಿಕೊಂಡೆ. ಅನಂತರ ಮನಃಪರಿವರ್ತನೆಯಾಗಿ ಈಗ ಯಶಸ್ವಿ ಜೀವನ ನಡೆಸುತ್ತಿದ್ದೇನೆ. ಜತೆಗೆ ವ್ಯಸನಿಗಳ ಮನಃ ಪರಿವರ್ತಿ ಸುವುದರಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ. ವಿದ್ಯಾರ್ಥಿಗಳೇ ಹೆಚ್ಚು!
ದುರಂತವೆಂದರೆ, ಈ ತಂಡ ನಡೆಸುವ ಮಾದಕದ್ರವ್ಯ ವಿರುದ್ಧ ಜಾಗೃತಿ ಸಭೆಗೆ ಬರುವ ಬಹುತೇಕರು ಕಾಲೇಜು ವಿದ್ಯಾರ್ಥಿಗಳೇ. ಸ್ನೇಹಿತರ ಸಹವಾಸ, ನಶೆಗಾಗಿ, ಓದುವ ಒತ್ತಡ ಮುಂತಾದವುಗಳಿಂದಾಗಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ಅದರಿಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಪೋಷಕರ ಒತ್ತಾಯಕ್ಕೆ ಮಣಿದೋ, ಸ್ವಯಂ ಆಸಕ್ತಿಯಿಂದಲೋ ನಾರ್ಕೋಟಿಕ್ ಅನಾನಿಮಸ್ ಸಭೆಗೆ ಹಾಜರಾಗುತ್ತಾರೆ. ಅಂತಹವರಿಗೆ ನಮ್ಮದೇ ಜೀವನದಲ್ಲಿ ನಡೆದ ಕೆಟ್ಟ ಅನುಭವಗಳನ್ನು ವಿವರಿಸಿ ಮನಃ ಪರಿವರ್ತನೆ ಮಾಡುತ್ತೇವೆ. ಮುಕ್ತ ಸಂವಾದ (ಪೋಷಕರು, ಹಿತೈಷಿಗಳ ಜತೆಗೆ) ಮತ್ತು ವೈಯಕ್ತಿಕ ಸಂವಾದಗಳನ್ನು ನಡೆಸಿ ಅವರನ್ನು ಮಾದಕ ವ್ಯಸನದಿಂದ ಎಳೆದು ತರುವ ಪ್ರಯತ್ನ ಮಾಡುತ್ತೇವೆ. ಎಲ್ಲರನ್ನು ಪರಿವರ್ತಿಸಲು ಸಾಧ್ಯವಾಗದಿದ್ದರೂ ಬಹುತೇಕರು ಅರ್ಥೈಸಿಕೊಂಡು ಮಾದಕ ವ್ಯಸನದಿಂದ ಹೊರಬರುತ್ತಾರೆ ಎನ್ನುತ್ತಾರವರು. 12 ಹಂತದ ಕಾರ್ಯಕ್ರಮ
ಸಂಸ್ಥೆಗೆ ಆಗಮಿಸುವವರನ್ನು ಮಾದಕವ್ಯಸನ ಮುಕ್ತಗೊಳಿಸುವುದಕ್ಕಾಗಿ ಒಟ್ಟು 12 ಹಂತದ ಕಾರ್ಯಕ್ರಮಗಳಿರುತ್ತವೆ. ಎಡಿಕ್ಟ್ ಹಂತದಲ್ಲಿ ವ್ಯಸನಮುಕ್ತರಾದವರಿಂದ ವ್ಯಸನಿಗಳಿಗೆ ಜೀವನಪಾಠ, ಎರಡನೇ ಹಂತದಲ್ಲಿ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಓದಿಸಲಾಗುತ್ತದೆ. ಬಳಿಕ ವ್ಯಸನಕ್ಕೊಳಗಾದವರೊಂದಿಗೆ ವೈಯಕ್ತಿಕ ಸಂವಾದ, ಸಭೆ ನಡೆಸುವ ಇತರರು ಮತ್ತು ವ್ಯಸನಿಗಳ ನಡುವೆ ಮುಕ್ತ ಸಂವಾದ ಸಹಿತ ವಿವಿಧ ಹಂತಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ. ಡ್ರಗ್ ವ್ಯಸನಿಗಳಾಗುತ್ತಿರುವ
ಮಹಿಳೆಯರು!
ಡ್ರಗ್ಸ್ ತೆಗೆದುಕೊಳ್ಳುವುದರಲ್ಲಿ ಪುರುಷರಷ್ಟೇ ಅಲ್ಲದೆ, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾರ್ಕೋಟಿಕ್ ಅನಾನಿಮಸ್ ಸದಸ್ಯರ ಅನುಭವದ ಪ್ರಕಾರ, ಶೇ. 60ರಷ್ಟು ಪುರುಷರು ಮಾದಕದ್ರವ್ಯಗಳ ದಾಸರಾದರೆ, ಶೇ. 40ರಷ್ಟು ಮಹಿಳೆಯರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. - ಧನ್ಯಾ ಬಾಳೆಕಜೆ