Advertisement
ಕ್ರಿಕೆಟ್‌ನಲ್ಲಿ ಸಚಿನ್, ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ, ಚೆಸ್‌ನಲ್ಲಿ ವಿಶ್ವನಾಥನ್ ಆನಂದ್ ಹೇಗೆ ನಂಬರ್ ಒನ್ ಆಗಿದ್ದರೋ ಅದೇ ರೀತಿ ಓಟದಲ್ಲಿ ದಾಖಲೆ ಬರೆದಿರುವ “ಹಾರುವ ಸಿಕ್ಖ್’ ಖ್ಯಾತಿಯ ಮಿಲ್ಖಾ ಸಿಂಗ್ ಹೆಸರುವಾಸಿಯಾಗಿದ್ದರು.
Related Articles
Advertisement
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲ್ಖಾ ಸಿಂಗ್ ಆ್ಯತ್ಲೆಟಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದರು. ಏಷ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಆ್ಯತ್ಲಿಟ್ ಎನ್ನುವ ಹಿರಿಮೆ ಮಿಲ್ಖಾರದ್ದು. 1958, 1962 ಏಷ್ಯನ್ ಗೇಮ್ಸ್‌ಗಳಲ್ಲೂ ಮಿಲಾV ಚಿನ್ನದ ಪದಕಗಳನ್ನು ಗೆದ್ದಿದ್ದರು. ಈ ದಾಖಲೆಯು 50 ವರ್ಷಗಳಿಗೂ ಹೆಚ್ಚಿನ ಕಾಲ ಉಳಿದಿತ್ತು. 1956, 1960, 1964ರ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಭಾರತವನ್ನು ಪ್ರತಿನಿಧಿಸಿದ್ದರು. 1960ರ ಒಲಿಂಪಿಕ್ಸ್ ನಲ್ಲಿ 400 ಮೀ. ಓಟದಲ್ಲಿ ಮಿಲ್ಖಾ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾಗಿ 4ನೇ ಸ್ಥಾನ ಪಡೆದಿದ್ದರು. ಭಾರತ ಸರಕಾರ ಅವರಿಗೆ 1959ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಭಾರತದಲ್ಲಿ ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ಅವರು ಇಡೀ ದೇಶವನ್ನೇ ತನ್ನತ್ತ ಸೆಳೆದರು. ಅವರಿಂದ ದೇಶದಲ್ಲಿ ಓಟಗಾರರ ದೊಡ್ಡ ಪಡೆಯೇ ಸಿದ್ದವಾಗಿತ್ತು. ಮಿಂಚಿನಂತಹ ಓಟವನ್ನು ನೋಡಿದ ಜನ ಅವರನ್ನು “ಹಾರುವ ಸಿಕ್ಖ್ ‘ ಎಂದೇ ಗೌರವದಿಂದ ಕರೆಯುತ್ತಿದ್ದರು.
ಮಿಲ್ಖಾ ಸಿಂಗ್ ಅವರು ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ಹೆಣ್ಣು ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಇವರ ಪುತ್ರ ಜೀವ್, 14 ಅಂತಾರಾಷ್ಟ್ರೀಯ ಗಾಲ್ಫ್ ಟೂರ್ನಿಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜತೆಗೆ ಪದ್ಮ ಶ್ರೀ ಪ್ರಶಸ್ತಿ ವಿಜೇತ ಕೂಡ ಹೌದು.
ಮಿಲಾV ಸಿಂಗ್ ಜೀವನದ ಕುರಿತು ಬಾಲಿವುಡ್‌ನಲ್ಲಿ ಭಾಗ್ ಮಿಲಾV ಭಾಗ್’ ಸಿನೆಮಾ ತೆರೆ ಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಭಾರತದಲ್ಲಿ 60ಕ್ಕೂ ಹೆಚ್ಚು ವಸಂತಗಳೇ ಉರುಳಿದರೂ ಇನ್ನೂ ಆ್ಯತ್ಲೆಟಿಕ್ಸ್‌ನಲ್ಲಿ ಅವರಂತಹ ಮತ್ತೂಬ್ಬ ಆ್ಯತ್ಲೀಟ್‌ನ್ನು ಕಂಡುಕೊಳ್ಳಲಾ ಗದಿರುವುದು ಶೋಚನೀಯ ಸಂಗತಿಯಾಗಿದೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಆ್ಯತ್ಲೀಟ್‌ಗಳು ಪದಕ ಗೆಲ್ಲುವುದನ್ನು ನೋಡಬೇಕೆಂಬುದು ಮಿಲಾV ಸಿಂಗ್ ಅವರ ಬಹುವರ್ಷಗಳ ಬಯಕೆಯಾಗಿತ್ತು. ಮಿಲಾV ಆದರೆ ಜೀವನದ ಓಟ ವನ್ನೇ ನಿಲ್ಲಿಸಿದ ಮೇಲೆ ದೇಶದ ಆ್ಯತ್ಲೀಟ್‌ಗಳು ಪದಕ ಗೆಲ್ಲುವ ಭವಿಷ್ಯದ ದಿನಗಳನ್ನಷ್ಟೇ ಎದುರು ನೋಡಬೇಕಿದೆ.
ದುರ್ಗಾ ಭಟ್ ಕೆದುಕೋಡಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ