ರಾಮದುರ್ಗ: ಪ್ರವಾಹಕ್ಕೆ ತುತ್ತಾಗಿ ಮನೆ-ಮಠ ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿದ್ದ ನಿರಾಶ್ರಿತರ ಬದುಕಿಂದು ಅಕ್ಷರಶಃ ಬೀದಿ ಪಾಲಾಗಿದ್ದರೂ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.
ಆದರೆ ಪ್ರವಾಹ ಇಳಿಮುಖ ವಾಗುತ್ತಿದ್ದಂತೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣದಿಂದ ತಾಲೂಕಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪರಿಹಾರ ಕೇಂದ್ರಗಳನ್ನು ಬಂದ್ ಮಾಡಿ ಶಾಲೆ ನಡೆಸಬೇಕೆಂದು ಮೌಖೀಕ ಆದೇಶ ಹಿನ್ನಲೆಯಲ್ಲಿ ತಾಲೂಕಿನಲ್ಲಿದ್ದ ಸಂತ್ರಸ್ತರಿಗೆ ಪರಿಹಾರ ಕೇಂದ್ರವು ಇಲ್ಲ-ಮನೆವು ಇಲ್ಲ ಹೀಗಾದರೇ ನಾವೇಲ್ಲಿ ಜೀವಿಸಬೇಕು ಎಂದು ನಿರಾಶ್ರಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಟೆಂಟ್‌ನಲ್ಲಿ ಆಶ್ರಯ: ಪ್ರವಾಹದ ಹೊಡೆತಕ್ಕೆ ನಲುಗಿದ ಜನತೆಯನ್ನಿಗ ತಾಲೂಕಾಡಳಿತ ಮರಳಿ ಮನೆಗೆ ಕಳಿಸಿದ್ದು, ಅವರಿಗೆ ಸೂಕ್ತ ನೆಲೆ ಇಲ್ಲದ ಕಾರಣ ಎಲ್ಲೇಲ್ಲೋ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ರಸ್ತೆ ಸೇರಿದಂತೆ ಖುಲ್ಲಾ ಜಾಗೆಗಳಲ್ಲಿ ಟೆಂಟ್‌ನ್ನೆ ಮನೆಯಾಗಿಸಿಕೊಂಡು ಮಕ್ಕಳು-ಮರಿ ಕಟ್ಟಿಕೊಂಡು ಗಾಳಿ-ಮಳೆ ಹಾಗೂ ಬಿಸಿಲು-ನೆರಳು ಎನ್ನದೇ ಅಲ್ಲೇ ಅಡುಗೆ ತಯಾರಿಸಿ ಬಯಲಲ್ಲೇ ಜೀವನ ಸಾಗಿಸಬೇಕಿದೆ. ರಾತ್ರಿಯಾದರೇ ಸಾಕು ಜೀವ ಬಯದಲ್ಲಿಯೇ ಮಕ್ಕಳನ್ನು ಕರೆದುಕೊಂಡು ಮಹಿಳೆಯರು ಟೆಂಟ್ಲ್ಲಿ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ: ವಸತಿ ಮಾಡಲು ಯೋಗ್ಯವೋ- ಅಯೋಗ್ಯವು ಗೊತ್ತಿಲ್ಲ. ಆದರೇ ಬದುಕುಬೇಕೆಂಬ ನಿರ್ಧಾರದಿಂದ ಯಾರೋದೊ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸಬೇಕಿದೆ. ಪ್ರವಾಹ ಬಂದು ಇಳಿಮುಖವಾಗುತ್ತಿದ್ದಂತೆ ನಾನಾ ಖಾಯಿಲೆಗಳು ಹರಡುವ ಸಂದರ್ಭದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತು ಎಂಬ ಪರಿವಿಲ್ಲದೆ ಮನೆ ಇಲ್ಲದ ಕಾರಣಕ್ಕೆ ಎಲ್ಲಂದರಲ್ಲಿ ಜೀವಿಸಬೇಕಾಗಿದೆ. ಮೊದಲೆ ಡೆಂಘೀ, ಚಿಕೂನ್ ಗುನ್ಯಾಯಂತಹ ಮಾರಕ ಕಾಯಿಲೆಗಳು ಹರುಡುತ್ತಿದ್ದು, ಸೊಳ್ಳೆಗಳ ಕಾಟದ ಮಧ್ಯ ಇವರ ಆರೋಗ್ಯವನ್ನು ದೇವರೆ ಕಾಪಾಡಬೇಕು.
Advertisement
ರಾಮದುರ್ಗ ಪಟ್ಟಣ ಸೇರಿದಂತೆ 29 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡ ಕಾರಣದಿಂದಾಗಿ ಮನೆಗಳು ಸಂಪೂರ್ಣ ಬಿದ್ದು ಬೀದಿಗೆ ಬಂದ ಜನತೆಗೆ ಶಾಲೆ, ಗುಡಿ-ಗುಂಡಾರ, ಕಲ್ಯಾಣ ಮಂಟಪ, ಸಭಾಭವನ, ದೇವಸ್ಥಾನದ ಸೇರಿದಂತೆ ಇತರೆ ಕೆಲ ಪ್ರದೇಶಗಳಲ್ಲಿ ಉಳಿದುಕೊಳ್ಳವ ವ್ಯವಸ್ಥೆ ಮಾಡಿ ಸುಮಾರು 60ಕ್ಕೂ ಹೆಚ್ಚು ಪರಿಹಾರ ಕೇಂದ್ರ ತೆರೆಯಲಾಗಿತ್ತು.
Related Articles
Advertisement
ಚುರುಕುಕೊಳ್ಳದ ಪರಿಹಾರ ಕಾರ್ಯ: ನೆರೆ ಬಂದು 20 ದಿನಗಳು ಕಳೆಯುತ್ತ ಬಂದರೂ ಮನೆ-ಮಠ ಜನತೆಗೆ ಇವಾಗ ಅಲ್ಲೋ ಇಲ್ಲೋ ಒಂದೊಂದು ಕಡೆ ತಾತ್ಕಾಲಿಕ ಕುಟುಂಬ ನಿರ್ವಹಣೆಗಾಗಿ ನೀಡಲಾಗುವ 10 ಸಾವಿರ ಪರಿಹಾರ ಚೆಕ್ಕನ್ನು ನೀಡಲಾರಂಬಿಸಿದ್ದಾರೆ. 20 ದಿನಗಳಾದ ಮೇಲೆ ಇದನ್ನು ನೀಡುತ್ತಿದ್ದು, ಮನೆ ಬಿದ್ದ ಹಾಗೂ ಬೆಳೆ ಹಾನಿಯ ಪರಿಹಾರ ಯಾವಾಗ ನೀಡುತ್ತಾರೆ ಎಂಬುವದು ನಿರಾಶ್ರಿತರ ಪ್ರಶ್ನೆಯಾಗಿದೆ.
ರೋಷಿ ಹೋದ ನಿರಾಶ್ರಿತರು: ತಾಲೂಕಾಡಳಿತದ ಮಂದ ಗತಿಯ ಪರಿಹಾರ ಕಾರ್ಯಕ್ಕೆ ಜನತೆ ರೋಷಿ ಹೋಗಿದ್ದಾರೆ. ಮನೆ ಕಳೆದುಕೊಂಡವರಿಗೆ ತಗಡಿನ ಶೆಡ್ ಹಾಕುವದಾಗಿ ಹೇಳುತ್ತಿದ್ದಾರೆ ವಿನಹ ಇನ್ನೂ ಒಂದು ಕಡೆಯುವು ಶೆಡ್ ಹಾಕಿಲ್ಲ. ಈಗಾಗಲೇ ಬೇರೆ ಬೇರೆ ತಾಲೂಕುಗಳಲ್ಲಿ ಶೆಡ್ ನಿರ್ಮಿಸಿ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಿದ್ದು, ನಮ್ಮಲ್ಲಿ ಏಕೆ ಇನ್ನೂ ಮಾಡುತ್ತಿಲ್ಲ. ಎಂದು ನಿರಾಶ್ರಿತ ಹನಮಂತ ಯಲ್ಲಪ್ಪ ಮಾದರ ಆಕ್ರೋಶ ವ್ಯಕ್ತಪಡಿಸಿದರು.
ಶೆಡ್ ನಿರ್ಮಾಣಕ್ಕೆ ನೀಡಿಲ್ಲ ಹಣ:
ಸಂಪೂರ್ಣ ಮನೆ ಇಲ್ಲದ ನಿರಾಶ್ರಿತರಿಗೆ ತಿಂಗಳ ಬಾಡಿಗೆ 5 ಸಾವಿರದಂತೆ 10 ತಿಂಗಳ ಬಾಡಿಗೆ 50 ಸಾವಿರ ರೂ. ಪ್ರತಿ ಕುಟುಂಬಕ್ಕೆ ನೀಡಬೇಕಿದೆ. ಬಾಡಿಗೆ ಮನೆಯಲ್ಲಿ ವಾಸಿಸಲು ಬಯಸುವವರಿಗೆ ಪ್ರತಿ ತಿಂಗಳು 5 ಸಾವಿರ ರೂ. ಒದಗಿಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಪ್ರವಾಹ ಉಂಟಾಗಿ ತಿಂಗಳು ಕಳೆಯುತ್ತಾ ಬಂದರೂ ಫಲಾನುಭವಿಗಳಿಗೆ ಶೆಡ್ ನಿರ್ಮಾಣ ಸೇರಿದಂತೆ ಇತರ ಸೌಲಭ್ಯ ಕಲ್ಪಿಸುವ ಕೆಲಸ ಇನ್ನೂ ನಡೆದಿಲ್ಲ ಎಂಬುವುದು ಸಂತ್ರಸ್ತರು ಆರೋಪವಾಗಿದೆ.
ಈರನಗೌಡ ಪಾಟೀಲ