Advertisement

ಜೀವಿತಾವಧಿವರೆಗೂ ರಾಜಕೀಯದಲ್ಲಿರುವೆ

01:27 PM Dec 04, 2017 | Team Udayavani |

ಕೆ.ಆರ್‌.ನಗರ: ತನ್ನ ಜೀವಿತದ ಕಡೆಯ ಅವಧಿಯವರೆಗೂ ರಾಜಕೀಯ ಕ್ಷೇತ್ರದಲ್ಲಿ ದುಡಿಯಲಿದ್ದು ಕೆ.ಆರ್‌.ನಗರ ತಾಲೂಕಿನಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್‌ ತಮ್ಮ ಇಂಗಿತ ವ್ಯಕ್ತಪಡಿಸಿದರು. ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಟ್ಟಣ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಹಲವು ವರ್ಷಗಳಿಂದ ಕೆ.ಆರ್‌.ನಗರ ತಾಲೂಕಿನಾದ್ಯಂತ ರಾಜಕೀಯ ಕ್ಷೇತ್ರದ ಮೂಲಕ ಸೇವೆ ಸಲ್ಲಿಸುತ್ತಿದ್ದು, ಮುಂಬರುವ 2018ರ ವಿಧಾನಸಭೆ ಚುನಾವಣೆ ನಂತರ ರಾಜಕೀಯ ಕ್ಷೇತ್ರದಿಂದಲೇ ದೂರವಿರಬೇಕು ಎಂದು ತೀರ್ಮಾನಿಸಿದ್ದೆ ಎಂದು ತಿಳಿಸಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ಶಾಸಕ ಸಾ.ರಾ.ಮಹೇಶ್‌ ಅವರಿಂದ ಕೆ.ಆರ್‌.ನಗರ ತಾಲೂಕಿಗೆ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಎಳೆ-ಎಳೆಯಾಗಿ ತಿಳಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವುದರಿಂದ ಅದರಲ್ಲಿ ಶಾಸಕ ಸಾ.ರಾ.ಮಹೇಶ್‌ ಸಚಿವರಾಗುವ ಮೂಲಕ ರಾಜ್ಯದ ಅಭಿವೃದ್ಧಿ ಜತೆಗೆ ತಾಲೂಕು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಅವಕಾಶವಾಗಲಿದೆ ಎಂದು ಮನವರಿಕೆ ಮಾಡಿದರು.

ಜೆಡಿಎಸ್‌ ನಗರಾಧ್ಯಕ್ಷ ಡಿ.ಸಿ.ಮಂಜುನಾಥ್‌, ಇತ್ತೀಚೆಗೆ ಜೆಡಿಎಸ್‌ನಿಂದ ಇಬ್ಬರು ಮುಖಂಡರು ಮಾತ್ರ ಕಾಂಗ್ರೆಸ್‌ಗೆ ಸೇರಿದ್ದಾರೆ. ಆದರೆ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಮತ್ತು ಮೂಳೆ ತಜ್ಞ ಡಾ.ಮೆಹಬೂಬ್‌ ಖಾನ್‌, ವೀರಶೈವ ಮುಖಂಡರು, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌.ಚನ್ನಬಸಪ್ಪ, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್‌, ಸುಬ್ರಹ್ಮಣ್ಯ, ನಟರಾಜ್‌ ಮತ್ತಿತರರು ಪಕ್ಷ ಸೇರ್ಪಡೆಯಾಗಿರುವುದರಿಂದ ನಮಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.

 ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್‌ ಮಾತನಾಡಿ, ಶಾಸಕ ಸಾ.ರಾ.ಮಹೇಶ್‌ ಅವರು ಯಾಂತ್ರಿಕ ಜೀವನವನ್ನು ನಡೆಸುತ್ತಿದ್ದು, ನಾವು ಅವರನ್ನು ಪ್ರಶ್ನಿಸುವ ಬದಲು ಅವರ ವೇಗಕ್ಕೆ ನಾವುಗಳು ಸರಿಹೊಂದಬೇಕು ಎಂದು ಹೇಳಿದರು.

Advertisement

ಹಿಂದುಳಿದ ವರ್ಗದ ಮುಖಂಡ ಕೃಷ್ಣಶೆಟ್ಟಿ, ಕಾರ್ಯಕರ್ತರ ಸಭೆಗಳನ್ನು ಆಗಿಂದಾಗ್ಗೆ ನಡೆಸಿ, ಅವರ ನೋವಿಗೆ ಸ್ಪಂದಿಸಿ ಎಂದು ಶಾಸಕ ಸಾ.ರಾ.ಮಹೇಶ್‌ರಿಗೆ ಮನವಿ ಮಾಡಿದರು. ಪುರಸಭೆ ಸದಸ್ಯ ಹಾಗೂ ಪಟ್ಟಣ ಯುವ ಜೆಡಿಎಸ್‌ ಅಧ್ಯಕ್ಷ ಉಮೇಶ್‌, ನಿವೃತ್ತ ಉಪನ್ಯಾಸಕ ಲಕ್ಕೇಗೌಡ ಮಾತನಾಡಿದರು.

ಇದೇ ವೇಳೆ ಪುರಸಭೆ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಪಾರ್ವತಿ, ಮಾಜಿ ಅಧ್ಯಕ್ಷ ವೈ.ಆರ್‌.ಪ್ರಕಾಶ್‌, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್‌, ಎಂ.ಎಸ್‌.ಹರಿಚಿದಂಬರ್‌, ಪುರಸಭೆ ಸದಸ್ಯರಾದ ಗೀತಾ, ಹರ್ಷಲತಾ, ಕೆ.ಎಲ್‌.ಕುಮಾರ್‌, ಬಾಂಬೆರಾಜು, ಕೆ.ಎಲ್‌.ಜಗದೀಶ್‌, ಸುಬ್ಬಣ್ಣ, ಆಕಾಶ್‌ಬಾಬು, ಶಿವಕುಮಾರ್‌, ನಂಜುಂಡ, ಕೆ.ಎಲ್‌.ರಮೆಶ್‌, ದೊಡ್ಡಕೊಪ್ಪಲು ನಾಗಣ್ಣ, ಎಸ್‌ ವಿಎಸ್‌ ಸುರೇಶ್‌, ಚಂದಗಾಲು ನಂಜುಂಡಸ್ವಾಮಿ, ಸಂತೋಷ್‌ಗೌಡ, ಮಧುಚಂದ್ರ, ಅನಿಲ್‌ಗೌಡ, ಸ್ಟೇಷನ್‌ ರಮೇಶ್‌, ಕೇಬಲ್‌ ಮಂಜು ಮತ್ತಿತರರಿದ್ದರು.

ಇತ್ತೀಚೆಗೆ ನಮಗಾಗದವರು ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಇಲ್ಲ ಸಲ್ಲದ ಆರೋಪ ಉಂಟಾಗುವ ವಿಡಿಯೋ ತುಣುಕುಗಳನ್ನು ಉದ್ದೇಶ ಪೂರ್ವಕವಾಗಿ ಹೊರ ಹಾಕುತ್ತಿದ್ದಾರೆ. ಇದರಿಂದ ಬೇಸತ್ತಿರುವ ತಾನು ಅಂತಹ ವ್ಯಕ್ತಿಗಳಿಗೆ ರಾಜಕೀಯ ಕ್ಷೇತ್ರದಿಂದಲೇ ಉತ್ತರ ಕೊಡಬೇಕು ಎಂದು ತೀರ್ಮಾನಿಸಿದ್ದೇನೆ.
-ಸಾ.ರಾ.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next